ಬೆಂಗಳೂರು: ಖೋಟಾನೋಟು ತೋರಿಸಿ ವಂಚನೆ, ನಾಲ್ವರು ಆರೋಪಿಗಳ ಬಂಧನ
ಖೋಟಾನೋಟು ತೋರಿಸಿ ವಂಚನೆ ನಡೆಸುತ್ತಿದ್ದ ನಾಲ್ವರು ಅಂತರ್ ರಾಜ್ಯ ಕಳ್ಳರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಟರಾಜನ್, ಬಾಲಾಜಿ, ವೆಂಕಟೇಶ ಹಾಗೂ ರಾಕೇಶ ಬಂಧಿತ ಆರೋಪಿಗಳಾಗಿದ್ದಾರೆ.
Published: 29th January 2022 05:32 PM | Last Updated: 29th January 2022 06:52 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಖೋಟಾನೋಟು ತೋರಿಸಿ ವಂಚನೆ ನಡೆಸುತ್ತಿದ್ದ ನಾಲ್ವರು ಅಂತರ್ ರಾಜ್ಯ ಕಳ್ಳರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಟರಾಜನ್, ಬಾಲಾಜಿ, ವೆಂಕಟೇಶ ಹಾಗೂ ರಾಕೇಶ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಮಕ್ಕಳ ಅಟಿಕೆ ನೋಟು ತೋರಿಸಿ ಹಣ ತ್ರಿಬಲ್ ಮಾಡಿಕೊಡುವುದಾಗಿ ವಂಚಿಸುತಿತ್ತು ಎಂದು ಡಿಸಿಪಿ ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ. ಸಾವಿರ ಕೂಟ್ಟರೆ ಮೂರು ಸಾವಿರ ಕೊಡುವುದಾಗಿ ಮಕ್ಕಳ ಅಟಿಕೆ ನೋಟು ತೋರಿಸಿ ಆರೋಪಿಗಳು ವಂಚನೆ ನಡೆಸುತ್ತಿದ್ದರು ಎನ್ನಲಾಗಿದೆ.
ಬಂಧಿತರು ಕಳೆದ ವರ್ಷ ಅಕ್ಟೋಬರ್ ನಲ್ಲಿ ಜಕ್ಕೂರಿನಿಂದ ತಿರುಪತಿ ಮೂಲಕ ಸಂಗೀತ, ಆಕೆಯ ಕಾರು ಚಾಲಕ ಕೃಷ್ಣನನ್ನು ಯಲಹಂಕ ಮಾರ್ಗವಾಗಿ ಕರೆದೊಯ್ದು 10 ಲಕ್ಷ ದೋಚಿದ್ದ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 5.85 ಲಕ್ಷ ರೂ. ಮೌಲ್ಯದ ನಗದು, 80 ಗ್ರಾಂ ಚಿನ್ನಾಭರಣ, 20 ಕೋಟಿ ಮಕ್ಕಳ ನೋಟುಗಳು, 10 ಬಂಗಾರದ ನಕಲಿ ಗೋಲ್ಡ್ ಬಿಸ್ಕೆಟ್ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರನ್ನು ವಶಕ್ಕೆ ತೆಗೆದುಕೊಂಡದ್ದು, ಹೆಚ್ಚಿನ ತನಿಖೆ ಗೊಳ್ಳಲಾಗಿದೆ.