ಮೈಸೂರು ಗ್ಯಾಸ್ ಪೈಪ್ಲೈನ್ ವಿಚಾರ: ಪ್ರತಾಪ್ ಸಿಂಹ, ರಾಮದಾಸ್ ನಡುವೆ ಹಗ್ಗಜಗ್ಗಾಟ ತಾರಕಕ್ಕೆ!
ಗ್ಯಾಸ್ ಪೈಪ್ಲೈನ್ ಸಂಪರ್ಕ ವಿಳಂಬಕ್ಕಾಗಿ ಎಂಸಿಸಿ ಕೌನ್ಸಿಲ್ ಸಭೆಯಿಂದ ದೂರ ಉಳಿಯುವಂತೆ ಬಿಜೆಪಿ ಕಾರ್ಪೊರೇಟರ್ಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮಾಜಿ ಶಾಸಕ ಎಸ್ಎ ರಾಮದಾಸ್ ವಿರುದ್ಧ ಪ್ರತಾಪ್ ಸಿಂಹ ಗುರುವಾರ ಆರೋಪಿಸಿದ್ದಾರೆ.
Published: 29th January 2022 07:18 AM | Last Updated: 29th January 2022 12:55 PM | A+A A-

ರಾಮದಾಸ್, ಪ್ರತಾಪ್ ಸಿಂಹ
ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಕೃಷ್ಣರಾಜ ಶಾಸಕ ಎಸ್ಎ ರಾಮದಾಸ್ ನಡುವಿನ ಹಗ್ಗ ಜಗ್ಗಾಟ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಗ್ಯಾಸ್ ಪೈಪ್ಲೈನ್ ಸಂಪರ್ಕ ವಿಳಂಬಕ್ಕಾಗಿ ಎಂಸಿಸಿ ಕೌನ್ಸಿಲ್ ಸಭೆಯಿಂದ ದೂರ ಉಳಿಯುವಂತೆ ಬಿಜೆಪಿ ಕಾರ್ಪೊರೇಟರ್ಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮಾಜಿ ಶಾಸಕ ಎಸ್ಎ ರಾಮದಾಸ್ ವಿರುದ್ಧ ಪ್ರತಾಪ್ ಸಿಂಹ ಗುರುವಾರ ಆರೋಪಿಸಿದ್ದಾರೆ.
ಶುಕ್ರವಾರ ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಕೌನ್ಸಿಲ್ ಸಭೆಯನ್ನು ಕೋರಂ ಕೊರತೆಯಿಂದಾಗು ಸಭೆಯನ್ನು ಮುಂದೂಡಲಾಗಿತ್ತು. ಮೇಯರ್ ಮತ್ತು ಬಿಜೆಪಿಯ ಹಿರಿಯ ಕಾರ್ಪೊರೇಟರ್ ಸುನಂದಾ ಪಾಲನೇತ್ರ ಅವರು ಸಭೆಯಲ್ಲಿ ಹೆಚ್ಚಿನ ಬಿಜೆಪಿ ಕಾರ್ಪೊರೇಟರ್ಗಳು ಪಾಲ್ಗೊಳ್ಳುವಿಕೆಗಾಗಿ ಕಾದರೂ ಅದರಿಂದ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: ಮೇಕೆದಾಟು ಯೋಜನೆ ಸಮಸ್ಯೆ ಪರಿಹರಿಸಲು ಮೋದಿ ಸರ್ಕಾರ ಬದ್ಧ: ಸಂಸದ ಪ್ರತಾಪ್ ಸಿಂಹ
ಸಭೆಗೆ ತಮ್ಮದೇ ಪಕ್ಷದ ಸದಸ್ಯರು ಗೈರುಹಾಜರಾಗಿದ್ದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಪ್ರತಾಪ್ ಸಿಂಹ ಅವರು, ಮೇಯರ್ ಚೇಂಬರ್ಗೆ ತೆರಳಿ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಯೋಜನೆ ವಿಳಂಬವಾಗಲು ಕಾರ್ಪೊರೇಟರ್ಗಳು ಸಭೆಗೆ ಹಾಜರಾಗದಂತೆ ರಾಮದಾಸ್ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರೆ ಶ್ರೇಣಿ-2 ಮತ್ತು 3 ನಗರಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಅನುಷ್ಠಾನಗೊಳ್ಳುತ್ತಿರುವ ಗ್ಯಾಸ್ ಪೈಪ್'ಲೈನ್ ಯೋಜನೆಗೆ ಇಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.