ಬೆಂಗಳೂರು: ಚಿತ್ರ ನಟಿ ಮೇಲೆ ನಿರಂತರ ಅತ್ಯಾಚಾರ, ನಿರ್ಮಾಪಕ ಜೈಲಿಗೆ
ಸಿನಿಮಾದಲ್ಲಿ ಅವಕಾಶ ಕೊಡಿಸಿ ವಿವಾಹ ಮಾಡಿಕೊಳ್ಳುವ ನಂಬಿಕೆ ಹುಟ್ಟಿಸಿ ಚಿತ್ರನಟಿಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
Published: 29th January 2022 04:33 PM | Last Updated: 29th January 2022 05:09 PM | A+A A-

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಟಿತ್ರ
ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸಿ ವಿವಾಹ ಮಾಡಿಕೊಳ್ಳುವ ನಂಬಿಕೆ ಹುಟ್ಟಿಸಿ ಚಿತ್ರನಟಿಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ಥ ನಟಿಯೊಬ್ಬರು ನೀಡಿದ ದೂರಿನ ಅನ್ವಯ ಪೊಲೀಸರು ನಿರ್ಮಾಪಕ ಟಿ.ಜಿ. ಹರ್ಷವರ್ಧನ್ ಎಂಬಾತನನ್ನು ಪೊಲೀಸರು ಬಂಧಿಸಲಾಗಿದೆ. 'ಮಿಷನ್ 2023' ಸಿನಿಮಾದ ಹಿರೋ ಕಮ್ ನಿರ್ಮಾಪಕ ಆಗಿರುವ ಟಿ.ಜಿ. ಹರ್ಷವರ್ಧನ್ ಅಲಿಯಾಸ್ ವಿಜಯ ಭಾರ್ಗವ್ ಕಳೆದ ಎರಡು ವರ್ಷಗಳಿಂದ ನನಗೆ ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸಿ ಅತ್ಯಾಚಾರ ನಡೆಸಿ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಆ ನಟಿ ತಿಳಿಸಿದ್ದಾರೆ.
ಸಿನಿಮಾಗಳಲ್ಲಿ ಸಹ ನಟಿಯಾಗಿ ಪಾತ್ರ ಮಾಡುತ್ತಿದ್ದ ನಟಿಗೆ ಹರ್ಷವರ್ಧನ್ ಪ್ರೇಮದ ಬಲೆ ಬೀಸಿದ್ದರು. ನೀನೆ ನನ್ನ ಹೆಂಡತಿ ಎಂದು ಹೇಳಿ ನಂಬಿಸಿ, ಕಳೆದ ಎರಡು ವರ್ಷಗಳಿಂದ ದೈಹಿಕ ವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನಟಿ ಆರೋಪಿಸಿದ್ದಾಳೆ.
ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ.