
ಸಾಂದರ್ಭಿಕ ಚಿತ್ರ
ಬೆಂಗಳೂರು: ನೆರೆಯ ಮಹಾರಾಷ್ಟ್ರದಂತೆ ಕರ್ನಾಟಕ ಸರ್ಕಾರವು ದೊಡ್ಡ ಅಂಗಡಿಗಳು ಮತ್ತು ಸೂಪರ್ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸುತ್ತಿದೆ.
ಈ ಪ್ರಕ್ರಿಯೆಯಲ್ಲಿ ದ್ರಾಕ್ಷಿ ಉತ್ಪಾದಕರಿಗೆ ಪ್ರಸ್ತುತ ರಾಜ್ಯದಲ್ಲಿ ನೋಂದಾಯಿತ ಸ್ಟೋರ್ಗಳಿಗೆ ಮಾತ್ರ ವೈನ್ ಮಾರಾಟ ಮಾಡಲು ಅವಕಾಶವಿದೆ.
ಮಹಾರಾಷ್ಟ್ರ ಕ್ಯಾಬಿನೆಟ್ 100 ಚದರ ಮೀಟರ್ ಪ್ರದೇಶದಲ್ಲಿ ಹರಡಿರುವ ಅಂಗಡಿಗಳು ಮತ್ತು ಸೂಪರ್ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅನುಮೋದನೆ ನೀಡಿದೆ. ಈ ಹೊಸ ಕ್ರಮವು ದ್ರಾಕ್ಷಿ ಬೆಳೆದ ರೈತರಿಗೆ ಮತ್ತು ಕೈಗಾರಿಕೆಗಳಿಗೆ ಸಹಾಯ ಮಾಡುತ್ತದೆ.
ಇದರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲು ತಮ್ಮ ಇಲಾಖೆಯ ಅಧಿಕಾರಿಗಳ ತಂಡ ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದೆ ಎಂದು ಕರ್ನಾಟಕ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ನಾವು ಗ್ರೌಂಡ್ ರಿಪೋರ್ಟ್ ಪಡೆಯಬೇಕಾಗಿದೆ. ಈ ಯೋಜನೆಯಿಂದ ಜನರಿಗೆ ಸಹಾಯ ಮಾಡಿದರೆ, ನಾವು ಇದನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಪರಿಗಣಿಸಬಹುದು ಎಂದು ಅವರು ಹೇಳಿದರು.ಕರ್ನಾಟಕವೂ ಈ ವಿಧಾನವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.
ನಾವು ಅಂಗಡಿಗಳಲ್ಲಿ ವೈನ್ ಸೇವನೆಯನ್ನು ಅನುಮತಿಸುವುದಿಲ್ಲ, ಆದರೆ ಮಾರಾಟಕ್ಕೆ ಮಾತ್ರ ಅನುಮತಿ ನೀಡುತ್ತೇವೆ. ನಾವು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಒಮ್ಮೆ ನಾವು ಮಹಾರಾಷ್ಟ್ರ ಮಾದರಿಯಲ್ಲಿ ವರದಿಯನ್ನು ಪಡೆದುಕೊಂಡಿದ್ದೇವೆ, ಅದು ಕಾರ್ಯಸಾಧ್ಯವಾದರೆ ಅದನ್ನು ಸಂಪುಟದ ಮುಂದೆ ಇಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಕರ್ನಾಟಕ ಸರ್ಕಾರವು ಆನ್ಲೈನ್ ಮಾರಾಟ ಮತ್ತು ಮದ್ಯದ ಮನೆ ವಿತರಣೆಯನ್ನು ಪ್ರಾರಂಭಿಸಲು ಪ್ರಸ್ತಾಪನೆ ಸಲ್ಲಿಸಿತ್ತು ಎಂಬ ಮಾತು ಕೇಳಿಬಂದಿತ್ತು ಆದರೆ, ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ತಳ್ಳಿಹಾಕಿದ್ದಾರೆ.