
ನಿವೃತ್ತ ಪೊಲೀಸ್ ಅಧಿಕಾರಿ ಎಂ ಸಿ ನಾರಾಯಣ ಗೌಡ
ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ನಿವೃತ್ತ ಐಪಿಎಸ್ ಅಧಿಕಾರಿ, ಕೇಂದ್ರ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ ತಂದೆ ಎಂ ನಾರಾಯಣ ಗೌಡ ವಿಧಿವಶರಾಗಿದ್ದಾರೆ.
ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇತ್ತೀಚೆಗೆ ಆರೋಗ್ಯ ತೀವ್ರ ಹದಗೆಟ್ಟು ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಮೃತಪಟ್ಟಿದ್ದಾರೆ.
ಕೇಂದ್ರ ವಿಭಾಗ ಡಿಸಿಪಿ ಎಂ.ಎನ್ ಅನುಚೇತ್ ತಂದೆ ನಾರಾಯಣ ಗೌಡರು ಬೆಂಗಳೂರು ನಗರ ಅಪರಾಧ ವಿಭಾಗ(ಸಿಸಿಬಿ) ಜಂಟಿ ಆಯುಕ್ತರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್.ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಇಂದು ಅವರ ಹುಟ್ಟೂರಾದ ಕೋಲಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಸಂತಾಪ: ನಾರಾಯಣ ಗೌಡರ ನಿಧನಕ್ಕೆ ಸರ್ಕಾರದ ಹಲವು ಸಚಿವರುಗಳು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸೇರಿದಂತೆ ಹಲವರು ನಾರಾಯಣ ಗೌಡ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತುಂಬಾ ವರ್ಷಗಳಿಂದ ನಾರಾಯಣ ಗೌಡರನ್ನು ನೋಡುತ್ತಿದ್ದೆ, ಅದ್ಬುತ ವ್ಯಕ್ತಿತ್ವ, ಯಾವುದೇ ವಿಚಾರಗಳನ್ನು ಸುಲಲಿತವಾಗಿ ಬಗೆಹರಿಸುತ್ತಿದ್ದರು. ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದರು. ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ. ಕೇಂದ್ರದ ಮಾಜಿ ಸಚಿವ ಲೋಕಸಭಾ ಸದಸ್ಯ ಡಿ ವಿ ಸದಾನಂದ ಗೌಡ ಸೇರಿದಂತೆ ಇನ್ನೂ ಹಲವರು ಸಂತಾಪ ಸೂಚಿಸಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಎಂ.ಸಿ.ನಾರಾಯಣ ಗೌಡರು ವಿಧಿವಶರಾದ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಯಿತು.
— Dr Sudhakar K (@mla_sudhakar) January 30, 2022
ಬಡ ಕುಟುಂಬದಿಂದ ಬಂದು ಅತ್ಯುನ್ನತ ಸಾಧನೆ ಮಾಡಿದ್ದ ನಾರಾಯಣ ಗೌಡರು ಯುವಕರಿಗೆ ಸ್ಪೂರ್ತಿಯಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.
1/2 pic.twitter.com/83tJk3Ufpa