ಕೊರೋನಾ 3ನೇ ಅಲೆ: ರಾಜ್ಯದ 19 ಜಿಲ್ಲೆಗಳಲ್ಲಿ ಉತ್ತುಂಗದಲ್ಲಿದ್ದ ಸೋಂಕು ಇಳಿಮುಖದತ್ತ!!
ಓಮಿಕ್ರಾನ್ ಭೀತಿ ನಡುವೆಯೇ ಆರಂಭವಾಗಿದ್ದ ಕೊರೋನಾ 3ನೇ ಅಲೆ ಇದೀಗ ಕ್ರಮೇಣ ಇಳಿಕೆಯತ್ತ ಸಾಗುತ್ತಿದ್ದು, ರಾಜ್ಯದ 19 ಜಿಲ್ಲೆಗಳಲ್ಲಿ ಉತ್ತುಂಗದಲ್ಲಿದ್ದ ಸೋಂಕು ಇಳಿಮುಖದತ್ತ ಸಾಗಿದೆ ಎನ್ನಲಾಗಿದೆ.
Published: 31st January 2022 10:12 AM | Last Updated: 31st January 2022 01:58 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಓಮಿಕ್ರಾನ್ ಭೀತಿ ನಡುವೆಯೇ ಆರಂಭವಾಗಿದ್ದ ಕೊರೋನಾ 3ನೇ ಅಲೆ ಇದೀಗ ಕ್ರಮೇಣ ಇಳಿಕೆಯತ್ತ ಸಾಗುತ್ತಿದ್ದು, ರಾಜ್ಯದ 19 ಜಿಲ್ಲೆಗಳಲ್ಲಿ ಉತ್ತುಂಗದಲ್ಲಿದ್ದ ಸೋಂಕು ಇಳಿಮುಖದತ್ತ ಸಾಗಿದೆ ಎನ್ನಲಾಗಿದೆ.
ಜನವರಿ 19 ಮತ್ತು ಜನವರಿ 29 ರ ಅವಧಿಯಲ್ಲಿ ರಾಜ್ಯದ 19 ಜಿಲ್ಲೆಗಳು ಉತ್ತುಂಗ ಸ್ಥಿತಿ ತಲುಪಿದ್ದವು. ಈ ಹಂತದಲ್ಲಿ ಈ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದರು. ಇದೀಗ ಈ ಜಿಲ್ಲೆಗಳಲ್ಲಿ ಸೋಂಕು ಇಳಿಕೆಯಾಗುವ ಆಶಾಭಾವ ವ್ಯಕ್ತವಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಕಳೆದ ಕೆಲ ದಿನಗಳಿಂದ ದಿನವಾರು ಪರೀಕ್ಷಾ ಧನಾತ್ಮಕ ದರಗಳಲ್ಲಿ (ಟಿಪಿಆರ್) ಸ್ಥಿರವಾದ ಕುಸಿತ ಕಾಣುತ್ತಿವೆ ಎಂದು ರಾಜ್ಯ ಕೋವಿಡ್ ವಾರ್ ರೂಮ್ನ ದತ್ತಾಂಶಗಳು ಬಹಿರಂಗಪಡಿಸುತ್ತದೆ. ಆದರೆ ಇನ್ನೂ ಹನ್ನೊಂದು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಏರು ಗತಿಯಲ್ಲೇ ಇವೆ ಎನ್ನಲಾಗಿದೆ.
10 ದಿನಗಳ ಅವಧಿಯಲ್ಲಿ ಅತಿ ಹೆಚ್ಚು ಕುಸಿತವನ್ನು ಹೊಂದಿರುವ ಜಿಲ್ಲೆಗಳ ಪೈಕಿ ರಾಮನಗರವಿದ್ದು, ಇಲ್ಲಿ ಟಿಪಿಆರ್ ಶೇಕಡಾ 15.63 ರಷ್ಟಿದ್ದು, ಇಲ್ಲಿ 27.01ರಷ್ಟಿದ್ದ ಟಿಪಿಆರ್ ಶೇಕಡಾ 11.38ಕ್ಕೆ ಕಡಿಮೆಯಾಗಿದೆ. ಅಂತೆಯೇ ಮಂಡ್ಯ ಶೇ.15.53ರಷ್ಟು ಟಿಪಿಆರ್ ಕುಸಿದಿದ್ದು, ಇಲ್ಲಿ ಶೇ.40.54ರಿದ್ದ ಟಿಪಿಆರ್ ಶೇ.25.01ಕ್ಕೆ ಕುಸಿದಿದೆ. ಅಂತೆಯೇ ಕೋಲಾರದಲ್ಲಿ ಶೇ.12.51ರಷ್ಟು ಟಿಪಿಆರ್ ಕುಸಿದಿದ್ದು, ಶೇ.29.51ರಿಂದ ಶೇ.17ಕ್ಕೆ ಕುಸಿತವಾಗಿದೆ. ಇನ್ನು ರಾಜಧಾನಿ ಬೆಂಗಳೂರು ನಗರ ಶೇ.10.20 ರಷ್ಟು ಟಿಪಿಆರ್ ಕುಸಿತ ಕಂಡಿದ್ದು, ಇಲ್ಲಿ 25.44 ರಿಂದ 15.24 ಕ್ಕೆ ಕುಸಿತವಾಗಿದೆ.
ಅಂತೆಯೇ ಬಾಗಲಕೋಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪ್ರಸರಣ ಏರಿಕೆ ಕಂಡಿತ್ತು. ಇಲ್ಲಿ ದಿನದ ಟಿಪಿಆರ್ನಲ್ಲಿ ಶೇ 27.7ಕ್ಕೆ ಏರಿಕೆಯಾಗಿದೆ. ಜನವರಿ 19 ರಂದು ಕೇವಲ 2.3 ಪ್ರತಿಶತದಿಂದ 10 ದಿನಗಳ ನಂತರ 30 ಪ್ರತಿಶತಕ್ಕೆ ಏರಿತು. ಸೋಂಕು ಪ್ರಮಾಣ ಏರಿಕೆ ದಾಖಲಿಸಿದ ಇತರೆ ಜಿಲ್ಲೆಗಳೆಂದರೆ ಚಾಮರಾಜನಗರ, ಹಾವೇರಿ, ಕೊಡಗು, ಯಾದಗಿರಿ ಮತ್ತು ಬೆಳಗಾವಿ.
ಈ ಬಗ್ಗೆ ಮಾತನಾಡಿರುವ ರಾಜ್ಯ ಕೋವಿಡ್ ಟಿಎಸಿ ಸದಸ್ಯರೂ ಆಗಿರುವ ನಿಮ್ಹಾನ್ಸ್ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ಬಾನಂದೂರ್ ಅವರು, ಕನಿಷ್ಠ ಏಳು ದಿನಗಳವರೆಗೆ ಟಿಪಿಆರ್ನಲ್ಲಿ ಸ್ಥಿರವಾದ ಕಡಿತವನ್ನು ತೋರಿಸುವ ಜಿಲ್ಲೆಗಳು ತಮ್ಮ ಉತ್ತುಂಗ ಸ್ಥಿತಿಯನ್ನು ದಾಟಿವೆ ಮತ್ತು ಇನ್ನೂ ನೋಡುತ್ತಿರುವ ಜಿಲ್ಲೆಗಳನ್ನು ಸೂಚಿಸುತ್ತವೆ. ಈ ಜಿಲ್ಲೆಗಳಲ್ಲಿ ಏರಿಕೆ ಇನ್ನೂ ಉತ್ತುಂಗಕ್ಕೇರಿಲ್ಲ ಎಂದು ವಿವರಿಸಿದರು.
ಇದನ್ನೂ ಓದಿ: ಕೋವಿಡ್-19 ದಿನನಿತ್ಯದ ಸಾವಿನ ಸಂಖ್ಯೆ ಹೆಚ್ಚಳ, ಆದರೂ ಮರಣ ಪ್ರಮಾಣ ಇಳಿಕೆ!
"ಕೆಲವು ಜಿಲ್ಲೆಗಳು ಇತರೆ ಜಿಲ್ಲೆಗಳಿಗಿಂತ ಮೊದಲೇ ಮೂರನೇ ಅಲೆಗೆ ಸಾಕ್ಷಿಯಾಗಲು ಪ್ರಾರಂಭಿಸಿದ ಪ್ರಕರಣಗಳಲ್ಲಿ ಈಗಾಗಲೇ ಕುಸಿತವನ್ನು ಕಾಣುತ್ತಿವೆ. ಫೆಬ್ರವರಿ 2 ರ ವೇಳೆಗೆ ಕುಸಿತವು ಪ್ರಾರಂಭವಾಗಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ, ಆದರೆ ಈ ಜಿಲ್ಲೆಗಳು ಹಿಂದಿನ ಪ್ರವೃತ್ತಿಯನ್ನು ತೋರಿಸಿವೆ. ಇದು ಉತ್ತಮ ಸಂಕೇತವಾಗಿದ್ದು, ಇದು ಕೋವಿಡ್ ಲಸಿಕೆ ವ್ಯಾಪ್ತಿಗೆ ಕಾರಣವೆಂದು ಹೇಳಬಹುದುನಿಮ್ಹಾನ್ಸ್ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಪ್ರದೀಪ್ ಬಾನಂದೂರ್ ಹೇಳಿದರು.
11 ಜಿಲ್ಲೆಗಳು ಟಿಪಿಆರ್ಗಳಲ್ಲಿ ಹೆಚ್ಚಳವನ್ನು ದಾಖಲಿಸುವ ಕುರಿತು ಮಾತನಾಡಿದ ಅವರು, “ನಾವು ಇನ್ನೂ ಎರಡು ವಾರಗಳವರೆಗೆ ಈ ಪ್ರವೃತ್ತಿಯನ್ನು ಗಮನಿಸಬೇಕಾಗಿದೆ ಮತ್ತು ಅದರ ನಂತರ ಕುಸಿತವು ಪ್ರಾರಂಭವಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಫೆಬ್ರವರಿ ಅಂತ್ಯದ ವೇಳೆಗೆ ಮೂರನೇ ಅಲೆಯಿಂದ ನಾವು ಹೊರಬರುವ ನಿರೀಕ್ಷೆಯಿದೆ. ಆದರೆ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂಗಳನ್ನು ತೆಗೆದುಹಾಕಲಾಗಿರುವುದರಿಂದ, ಮುಂದಿನ ಶುಕ್ರವಾರ ಅಥವಾ ಶನಿವಾರದ ವೇಳೆಗೆ ಸೋಂಕು ಪ್ರಮಾಣ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆಯಿದೆ. ಅದರ ನಂತರ, ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.
ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ವ್ಯಾಪಾರ, ಕೆಲಸ ಮತ್ತು ಇತರ ಚಟುವಟಿಕೆಗಳಿಗಾಗಿ ಜನರು ನಿಯಮಿತವಾಗಿ ಪ್ರಯಾಣಿಸುವುದರಿಂದ ಹಿಂದಿನ ಪ್ರವೃತ್ತಿ(ಸೋಂಕು ಏರಿಕೆ)ಯನ್ನು ಕಂಡಿದೆ ಎಂದು ಟಿಎಸಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಹೇಳಿದರು, ಆದರೆ ಯಾದಗಿರಿಯಂತಹ ಜಿಲ್ಲೆಗಳು ಮತ್ತು ಕೊಪ್ಪಳ ವಿಭಿನ್ನ ಪ್ರವೃತ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.