
ಕೊರೋನಾ (ಸಾಂಕೇತಿಕ ಚಿತ್ರ)
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಮರಣ ಪ್ರಮಾಣ ದರ ಇಳಿಕೆಯಾಗುತ್ತಿದ್ದರೂ ದಿನ ನಿತ್ಯ ವರದಿಯಾಗುತ್ತಿರುವ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ ಏರುಗತಿಯಲ್ಲಿದೆ.
ಜನವರಿ ತಿಂಗಳಿನಿಂದ ಪ್ರಾರಂಭವಾದ ಮೂರನೇ ಅಲೆಯಲ್ಲಿ ಜ.14 ವರೆಗೂ ಕೋವಿಡ್-19 ಸಾವಿನ ಸಂಖ್ಯೆ ಇಳಿಗತಿಯಲ್ಲಿತ್ತು. ಇದಾದ ಬಳಿಕ ದಿನನಿತ್ಯದ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಬಂದಿತ್ತು.
ಶನಿವಾರದಂದು ರಾಜ್ಯದಲ್ಲಿ ಅತಿ ಹೆಚ್ಚು (70) ಕೋವಿಡ್-19 ಸೋಂಕಿತರ ಸಂಖ್ಯೆ ದಾಖಲಾಗಿದ್ದರೆ, ಎರಡನೇ ಅತಿ ಹೆಚ್ಚು ಸಂಖ್ಯೆ-68 ಭಾನುವಾರದಂದು ವರದಿಯಾಗಿದೆ. ಶನಿವಾರ ಅಥವಾ ಭಾನುವಾರದಂದು 29 ಮಂದಿ ಸಾವನ್ನಪ್ಪಿದ್ದರೆ, ಉಳಿದವರು ಕೋವಿಡ್-19 ನಿಂದ ಈ ಹಿಂದೆ ಮೃತಪಟ್ಟಿದ್ದರು ಆದರೂ ವಿಳಂಬವಾಗಿ ಕೋವಿಡ್-19 ಅಂಕಿ-ಅಂಶಗಳ ಚಾರ್ಟ್ ನಲ್ಲಿ ದಾಖಲಿಸಿರುವುದರಿಂದ ಏರಿಕೆ ಕಂಡುಬಂದಿದೆ.
ಆರೋಗ್ಯಾಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕೋವಿಡ್ ಏತರ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ದಾಖಲಾಗಿದ್ದವರಿಗೆ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಕೋವಿಡ್-19 ಪರೀಕ್ಷೆ ಮಾಡಿಸಿ, ದಾಖಲಿಸಿಕೊಳ್ಳಲಾಗುತ್ತದೆ. ಈ ರೀತಿ ದಾಖಲಿಸಿಕೊಂಡಾಗ ಅವರಿಗೆ ಕೋವಿಡ್-19 ಇರುವುದು ಪತ್ತೆಯಾಗಿದ್ದು, ಕೋವಿಡ್-19 ನಿಂದ ಸಾವನ್ನಪ್ಪದೇ ಇದ್ದರೂ ಸಹ ಅವರನ್ನು ಅದೇ ಪಟ್ಟಿಗೆ ಸೇರಿಸಲಾಗುತ್ತದೆ. ಈ ರೀತಿ ಸಾವನ್ನಪ್ಪಿದವರ ಪೈಕಿ ಹಲವರು ವಯಸ್ಸಾದವರಾಗಿದ್ದು ಎಸ್ಎಆರ್ ಐ (ತೀವ್ರವಾದ ಉಸಿರಾಟದ ಸಮಸ್ಯೆ) ಸೇರಿದಂತೆ ಬಹುವಿಧದ ಆರೋಗ್ಯ ಸಮಸ್ಯೆಗಳು ಇತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊರೋನಾ 3ನೇ ಅಲೆ: ರಾಜ್ಯದ 19 ಜಿಲ್ಲೆಗಳಲ್ಲಿ ಉತ್ತುಂಗದಲ್ಲಿದ್ದ ಸೋಂಕು ಇಳಿಮುಖದತ್ತ!!
ಆದಾಗ್ಯೂ ರಾಜ್ಯದಲ್ಲಿ ಮರಣ ಪ್ರಮಾಣ ದರ ಗಣನೀಯವಾಗಿ ಕಡಿಮೆ ಇದ್ದು, ಮೂರನೇ ಅಲೆಯ ಪ್ರಾರಂಭದಲ್ಲಿ ಶೇ.1.27 ರಷ್ಟಿತ್ತು. ಭಾನುವಾರದಂದು ಶೇ.1.02 ರಷ್ಟಕ್ಕೆ ಕುಸಿದಿದೆ.
ರಾಜ್ಯದಲ್ಲಿ ಕೋವಿಡ್-19 ನಿಂದ ಮೃತಪಟ್ಟವರ ಸಂಖ್ಯೆ 38,942 ಕ್ಕೆ ಏರಿಕೆಯಾಗಿದ್ದು, ಬೆಂಗಳೂರು ಒಂದರಲ್ಲೇ 16,581 ಕೇಸ್ ಗಳು ಪತ್ತೆಯಾಗಿವೆ.