ಚಿತ್ರದುರ್ಗ: ATR ನಿಂದ ಹೊಸ UAV ಯಶಸ್ವೀ ಪರೀಕ್ಷೆ ನಡೆಸಿದ DRDO

ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದ ಎಟಿಆರ್ (ಏರೋನಾಟಿಕಲ್ ಟೆಸ್ಟ್ ರೇಂಜ್‌) ನಿಂದ ಮೊದಲ ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ ನಡೆಸಿದೆ.
ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ
ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ

ಚಿತ್ರದುರ್ಗ: ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದ ಎಟಿಆರ್ (ಏರೋನಾಟಿಕಲ್ ಟೆಸ್ಟ್ ರೇಂಜ್‌) ನಿಂದ ಮೊದಲ ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ ನಡೆಸಿದೆ.

ಜುಲೈ 1 ಶುಕ್ರವಾರದಂದು ಅಟಾನಮಸ್ ಫ್ಲೈಯಿಂಗ್ ವಿಂಗ್‌ನ ಮೊದಲ ಹಾರಾಟವನ್ನು ನಡೆಸಲಾಗಿದ್ದು, ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಚಾಲಕ ರಹಿತ ವಿಮಾನವನ್ನು ಹಾರಾಟ ನಡೆಸಲಾಗಿದೆ. ಈ ಚಾಲಕ ರಹಿತ ವಿಮಾನವು ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ವಿಮಾನವು ಟೇಕ್-ಆಫ್, ವೇ ಪಾಯಿಂಟ್, ನ್ಯಾವಿಗೇಷನ್ ಮತ್ತು ಟಚ್‌ಡೌನ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಪರಿಪೂರ್ಣ ಹಾರಾಟವನ್ನು ಯಶಸ್ವಿಯಾಗಿದೆ ಪ್ರದರ್ಶಿಸಿದೆ ಎಂದು DRDO ಹೇಳಿದೆ.

ಈ ವಿಮಾನವು ಸ್ವಾವಲಂಬನೆಯ ಕಡೆಗೆ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಈ ಹಾರಾಟವು ಪ್ರಮುಖ ಮೈಲಿಗಲ್ಲಾಗಿದ್ದು, ಅಂತಹ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ. ನಿರ್ಣಾಯಕ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನದಲ್ಲಿ ಮಾನವರಹಿತ ವೈಮಾನಿಕ ವಾಹನವನ್ನು (UAV) ವಿನ್ಯಾಸಗೊಳಿಸಲಾಗಿದೆ ಎಂದು ಡಿಆರ್ ಡಿಒ ಹೇಳಿದೆ. 

ಇದು ಸಣ್ಣ ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತ ವಿಮಾನವಾಗಿದ್ದು, ಈ ವಿಮಾನಕ್ಕೆ ಬಳಸಲಾದ ಏರ್‌ಫ್ರೇಮ್, ಅಂಡರ್‌ಕ್ಯಾರೇಜ್ ಮತ್ತು ಸಂಪೂರ್ಣ ಹಾರಾಟದ ನಿಯಂತ್ರಣ ಮತ್ತು ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ವಿಮಾನವನ್ನು ಡಿಒರ್ ಡಿಒದ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಡಿಆರ್‌ಡಿಒದ ಪ್ರಮುಖ ಸಂಶೋಧನಾ ಪ್ರಯೋಗಾಲಯ ಕೂಡ ಆಗಿದೆ.

ಡಿಆರ್ ಡಿಒ ಕಾರ್ಯವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದಿಸಿದ್ದು, ಇದು ಸ್ವಾಯತ್ತ ವಿಮಾನದ ಕಡೆಗೆ ಪ್ರಮುಖ ಸಾಧನೆ ಮತ್ತು ದಾರಿಯನ್ನು ಸುಗಮಗೊಳಿಸುತ್ತದೆ. ನಿರ್ಣಾಯಕ ಸೇನಾ ವ್ಯವಸ್ಥೆಗಳ ವಿಷಯದಲ್ಲಿ 'ಆತ್ಮನಿರ್ಭರ್ ಭಾರತ'"ದ ಯಶಸ್ವಿ ಮೊದಲ ಹಾರಾಟಕ್ಕಾಗಿ ಡಿಆರ್ ಜಿಒಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಚಿತ್ರದುರ್ಗ ATR ನಿಂದ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ಯಶಸ್ವಿ ಹಾರಾಟವು ಸ್ವಾಯತ್ತ ವಿಮಾನಗಳ ಕಡೆಗೆ ಒಂದು ಪ್ರಮುಖ ಸಾಧನೆಯಾಗಿದೆ. ನಿರ್ಣಾಯಕ ಮಿಲಿಟರಿಯ ವಿಷಯದಲ್ಲಿ ಆತ್ಮನಿರ್ಭರ ಭಾರತಕ್ಕೆ ದಾರಿ ವ್ಯವಸ್ಥೆಯಾಗಿದೆ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಡಿಆರ್‌ಡಿಒ ಕಾರ್ಯದರ್ಶಿ, ರಕ್ಷಣಾ ಇಲಾಖೆ ಆರ್ & ಡಿ ಮತ್ತು ಅಧ್ಯಕ್ಷ  ಡಾ ಜಿ ಸತೀಶ್ ರೆಡ್ಡಿ ವಿನ್ಯಾಸಕ್ಕೆ ಸಂಬಂಧಿಸಿದ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪರೀಕ್ಷೆ ತಂಡಗಳ ಪ್ರಯತ್ನವನ್ನು ಶ್ಲಾಘಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com