ಬೆಂಗಳೂರು: ವಂಚನೆ ಕೇಸ್: 137.60 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇಡಿ ವಶಕ್ಕೆ

ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಡ್ರಿಮ್ಜ್ ಇನ್ಫ್ರಾ ಇಂಡಿಯಾ ಲಿಮಿಟೆಡ್  ವ್ಯವಸ್ಥಾಪಕ ನಿರ್ದೇಶಕ ದಿಶಾ ಚೌಧರಿ ಮತ್ತು ಟಿಜಿಎಸ್ ಕನ್ಸ್ ಟ್ರಕ್ಷನ್ ಪ್ರೈ. ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಮನದೀಪ್ ಕೌರ್ ಮತ್ತಿತರಿಗೆ ಸಂಬಂಧಿಸಿದ 16 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಇಡಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಡ್ರಿಮ್ಜ್ ಇನ್ಫ್ರಾ ಇಂಡಿಯಾ ಲಿಮಿಟೆಡ್  ವ್ಯವಸ್ಥಾಪಕ ನಿರ್ದೇಶಕ ದಿಶಾ ಚೌಧರಿ ಮತ್ತು ಟಿಜಿಎಸ್ ಕನ್ಸ್ ಟ್ರಕ್ಷನ್ ಪ್ರೈ. ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಮನದೀಪ್ ಕೌರ್ ಮತ್ತಿತರಿಗೆ ಸಂಬಂಧಿಸಿದ 16 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಇಡಿ ತಿಳಿಸಿದೆ.

ಬೆಂಗಳೂರಿನ ವಿವಿಧೆಡೆ ಕೃಷಿ ಭೂಮಿ, ವಸತಿ ಪ್ರದೇಶ ಸೇರಿದಂತೆ ಸುಮಾರು 137.60  ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ವಶಕ್ಕೆ ಪಡೆದಿರುವುದಾಗಿ ಇಡಿ ಹೇಳಿದೆ.

ಡ್ರಿಮ್ಜ್ ಇನ್ಫ್ರಾ ಇಂಡಿಯಾ ಲಿಮಿಟೆಡ್, ಟಿಜಿಎಸ್ ಕನ್ಸ್ ಟ್ರಕ್ಷನ್ ಪ್ರೈ. ಲಿಮಿಟೆಡ್, ಗೃಹ ಕಲ್ಯಾಣ, ಸಚಿನ್ ನಾಯಕ್ ಆಲಿಯಾಸ್ ಯೋಗೇಶ್ ಚೌಧರಿ, ಕೌರ್ ಮತ್ತಿತರ ವಿರುದ್ಧ ಬೆಂಗಳೂರಿನಲ್ಲಿ ದಾಖಲಾಗಿದ್ದ 125 ಕ್ಕೂ ಹೆಚ್ಚು ಎಫ್ ಐಆರ್ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆಯ ತನಿಖೆ ನಡೆಸುತಿತ್ತು.

ಈ ಕಂಪನಿಗಳು ಮತ್ತು ವ್ಯಕ್ತಿಗಳು ಬೆಂಗಳೂರು ಸುತ್ತಮುತ್ತ ಕೈಗೆಟುಕುವ ದರದಲ್ಲಿ ಅಪಾರ್ಟ್ ಮೆಂಟ್ ನೀಡುವುದಾಗಿ ಭರವಸೆ ನೀಡುವುದರೊಂದಿಗೆ ಅಪಾರ ಪ್ರಮಾಣದಲ್ಲಿ ಡೆಪಾಸಿಟ್ ಮಾಡಿಸಿಕೊಂಡು ವಂಚಿಸಿರುವುದಾಗಿ ಈವರೆಗಿನ ತನಿಖೆಯಲ್ಲಿ ತಿಳಿದುಬಂದಿದೆ. 

2011-12 ರಿಂದ 2016-17 ರವರೆಗೂ ಆರೋಪಿಗಳು 10,299 ಕ್ಕೂ ಹೆಚ್ಚು ಗ್ರಾಹಕರಿಂದ ರೂ. 722 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ. ಅಲ್ಲದೇ, ಗ್ರಾಹಕರಿಗೆ ಪ್ಲಾಟ್ ನೀಡದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಇಡಿ ಸೋಮವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com