ಪಿಎಸ್ಐ ನೇಮಕಾತಿ ಹಗರಣ: ಸಿಐಡಿಯಿಂದ 1,900 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ, ಜೆಎಂಎಫ್ ಸಿ ಕೋರ್ಟ್ ಗೆ 1,900 ಪುಟಗಳ ಚಾರ್ಜ್ ಶೀಟ್ ನ್ನು ಸಲ್ಲಿಸಿದೆ. 
ಸಿಐಡಿ ಸಿಬ್ಬಂದಿಗಳು ಚಾರ್ಜ್ ಶೀಟ್ ಪ್ರತಿಗಳನ್ನು ಕೊಂಡೊಯ್ಯುತ್ತಿರುವುದು
ಸಿಐಡಿ ಸಿಬ್ಬಂದಿಗಳು ಚಾರ್ಜ್ ಶೀಟ್ ಪ್ರತಿಗಳನ್ನು ಕೊಂಡೊಯ್ಯುತ್ತಿರುವುದು

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ, ಜೆಎಂಎಫ್ ಸಿ ಕೋರ್ಟ್ ಗೆ 1,900 ಪುಟಗಳ ಚಾರ್ಜ್ ಶೀಟ್ ನ್ನು ಸಲ್ಲಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಕಿಂಗ್ ಪಿನ್, ಅಭ್ಯರ್ಥಿಗಳು ಸೇರಿ ಒಟ್ಟು 34 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಶರಣಪ್ಪ ನ್ಯಾಯಾಧೀಶರಾದ ಶ್ರೀನಿವಾಸ್ ಕೆಆರ್ ಅವರಿದ್ದ ಪೀಠದ ಎದುರು ಚಾರ್ಜ್ ಶೀಟ್ ನ್ನು ಸಲ್ಲಿಸಿದ್ದು, ವೀರೇಶ್, ಚೇತನ್ ನಂದಗಾಂವ್, ಪ್ರವೀಣ್ ಕುಮಾರ್, ಅರುಣ್ ಕುಮಾರ್ ಹಲ್ಸುಲ್ತಾನ್ ಪುರ (ಎಲ್ಲಾ ಅಭ್ಯರ್ಥಿಗಳು), ಸಾವಿತ್ರಿ, ಸುಮಾ, ಸಿದ್ದಮ್ಮ, ಅರ್ಚನಾ ಶಿವಕುಮಾರ್ ಹಾಗೂ ಸುನಂದ ಅಲಿಯಾಸ್ ಸುನಿತಾ( ಎಲ್ಲಾ ಶಿಕ್ಷಕರು) ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 

ಪಿಎಸ್ಐ ಸಿಇಟಿಗೆ ಹಾಜರಾಗಿದ್ದ ಅಭ್ಯರ್ಥಿಗಳ ಹೆಸರೂ ಚಾರ್ಜ್ ಶೀಟ್ ನಲ್ಲಿದ್ದು, ಸಿಐಡಿ ಡಿವೈಎಸ್ ಪಿ ಪ್ರಕಾಶ್ ರಾಥೋಡ್ ಚಾರ್ಜ್ ಶೀಟ್ ನ್ನು ಸಿದ್ಧಪಡಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಅಭ್ಯರ್ಥಿ ವೀರೇಶ್ ನ್ನು ಮುಖ್ಯ ಆರೋಪಿಯನ್ನಾಗಿಸಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಪರೀಕ್ಷಾ ಅಪರಾಧಗಳ ಆರೋಪವನ್ನು ಹೊರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com