5 ಲಕ್ಷ ರೈಡ್ ಪೂರೈಸಿದ ಮೆಟ್ರೋ ರೈಡ್ ಇ-ಆಟೋ: ಮೆಟ್ರೋ ಕಾರ್ಡ್ ಟಾಪ್ ಅಪ್ ಸೇರಿದಂತೆ ಹಲವು ಸೌಲಭ್ಯದ ಪ್ರಸ್ತಾವನೆ 

ನಮ್ಮ ಮೆಟ್ರೋ ಗ್ರಾಹಕರಿಗೆ ಪ್ರತ್ಯೇಕವಾಗಿ 10 ರೂಪಾಯಿಗಳಲ್ಲಿ ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕ ಕಲ್ಪಿಸುವ ಮೆಟ್ರೋ ರೈಡ್ ಇ-ಆಟೋ ಬೆಂಗಳೂರಿನಲ್ಲಿ 5 ಲಕ್ಷ ರೈಡ್ ಗಳನ್ನು ಪೂರೈಸಿದೆ. 
ಮೆಟ್ರೋ ರೈಡ್ ಆಟೋ (ಸಂಗ್ರಹ ಚಿತ್ರ)
ಮೆಟ್ರೋ ರೈಡ್ ಆಟೋ (ಸಂಗ್ರಹ ಚಿತ್ರ)

ಬೆಂಗಳೂರು: ನಮ್ಮ ಮೆಟ್ರೋ ಗ್ರಾಹಕರಿಗೆ ಪ್ರತ್ಯೇಕವಾಗಿ 10 ರೂಪಾಯಿಗಳಲ್ಲಿ ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕ ಕಲ್ಪಿಸುವ ಮೆಟ್ರೋ ರೈಡ್ ಇ-ಆಟೋ ಬೆಂಗಳೂರಿನಲ್ಲಿ 5 ಲಕ್ಷ ರೈಡ್ ಗಳನ್ನು ಪೂರೈಸಿದೆ. 

18 ತಿಂಗಳ ಹಿಂದೆ ಯೆಲಚೇನಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ ಇ-ಆಟೋ ಈ ವರೆಗೂ ಮೂರು ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವುದಕ್ಕೆ ಮುಂದಾಗಿರುವ ಇ-ಆಟೋ, ತನ್ನ ಆಪ್ ನಲ್ಲಿ ಆಟೋ ದರದೊಂದಿಗೆ ಮೆಟ್ರೋ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ನೀಡುವುದನ್ನೂ ಪ್ರಸ್ತಾಪಿಸಿದೆ. ಈ ಸೌಲಭ್ಯವನ್ನು ಹೈದರಾಬಾದ್ ಮೆಟ್ರೋ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದೆ. 

45 ಇ-ಆಟೋಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಆಪ್ ಆಧಾರಿತ ಸೇವೆಗಳನ್ನು ಯೆಲಚೇನಹಳ್ಳಿ, ಕೋಣನಕುಂಟೆ ಕ್ರಾಸ್ ಹಾಗೂ ಇಂದಿರಾ ನಗರ ಸ್ಟೇಷನ್ ಗಳಲ್ಲಿ ಪಡೆಯಬಹುದಾಗಿದೆ. ಕೋವಿಡ್-19 ಪ್ಯಾಂಡಮಿಕ್ ಗೂ ಸ್ವಲ್ಪ ತಿಂಗಳ ಮುನ್ನವಷ್ಟೇ ಪ್ರಾರಂಭವಾದ ಈ ಇ-ಆಟೋ ಸೇವೆಗಳು ಈಗ ದಿನವೊಂದಕ್ಕೆ 1,200 ಗ್ರಾಹಕರನ್ನು ಮೆಟ್ರೋದಿಂದ ತಮ್ಮ ಮನೆಗಳಿಗೆ ಅಥವಾ ಪೂರ್ವನಿಗದಿತ ನಿಲ್ದಾಣಗಳಿಗೆ ತಲುಪಿಸುತ್ತಿದೆ. 

ಇ-ಆಟೋ ಸೇವೆಗಳ ಸಿಇಒ ಹಾಗೂ ಸಹಸಂಸ್ಥಾಪಕ ಗಿರೀಶ್ ನಾಗಪಾಲ್ ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ಅವರೊಂದಿಗೆ ಮೆಟ್ರೋ ಕಾರ್ಡ್ ಟಾಪ್ ಅಪ್ ಸೇರಿದಂತೆ ಹಲವು ಸೌಲಭ್ಯದ ಕುರಿತು ಚರ್ಚೆ ನಡೆಸಲಾಗಿದೆ. ಈ ಪೈಕಿ ನಮ್ಮ ಆಪ್ ಮೂಲಕ ಮೆಟ್ರೋ ಕಾರ್ಡ್ ರೀಚಾರ್ಜ್ ಹಾಗೂ ಆಟೋ ದರ ಪಾವತಿ ಒಮ್ಮೆಲೇ ಮಾಡುವ ಸೌಲಭ್ಯವನ್ನೂ ಒದಗಿಸಲಾಗುತ್ತದೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ. ಮುಂದಿನ ಹಂತದಲ್ಲಿ ಬಿಎಂಆರ್ ಸಿಎಲ್ ನ ಐಟಿ ವಿಭಾಗದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. 

ಇ-ಆಟೋ ಸೇವೆಗಳಿಗೆ ಮೊದಲ 1.5 ಕಿ.ಮೀ ಗೆ ರೂಪಾಯಿ 5 ದರ ನಿಗದಿಪಡಿಸಲಾಗಿದ್ದು, ಆ ಬಳಿಕ 4 ಕಿ.ಮೀ ವರೆಗೆ ರೂಪಾಯಿ 25 ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳನ್ನು ಮೆಟ್ರೋ ರೈಡ್ ಇಂಡಿಯಾ ಆಪ್ ಅಥವಾ www.metroride.in ಮೂಲಕ ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com