ಮಿನಿಸ್ಟರ್ ಗೋಪಾಲಯ್ಯ ಹೆಸರು ಬಳಸಿ ಐಎಎಸ್‌ ಅಧಿಕಾರಿಗೆ ಬೆದರಿಕೆ ಕರೆ: ಆರೋಪಿ ಬಂಧನ

ಸಚಿವರ ಪಿಎ ಎಂದು ಹಿರಿಯ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಗಂಗಾಧರ್ ಎಂಬುವವರನ್ನು ಬಂಧಿಸಲಾಗಿದೆ.
ಮನೀಶ್ ಮೌದ್ಗಿಲ್
ಮನೀಶ್ ಮೌದ್ಗಿಲ್

ಬೆಂಗಳೂರು: ಸಚಿವರ ಪಿಎ ಎಂದು ಹಿರಿಯ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಗಂಗಾಧರ್ ಎಂಬುವವರನ್ನು ಬಂಧಿಸಲಾಗಿದೆ.

ಅಬಕಾರಿ ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಎಂದು ಕರೆ ಮಾಡಿ ಗಂಗಾಧರ್ ಬೆದರಿಕೆ ಹಾಕಿದ್ದ. ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ಕಾರು ಚಾಲಕನ ವರ್ಗಾವಣೆ ಸಂಬಂಧ ಕರೆ ಮಾಡಿ ಬೆದರಿಕೆ ಹಾಕಿದಾಗಿ ಪೊಲೀಸರು ತಿಳಿಸಿದ್ದಾರೆ.

ಜುಲೈ 1 ರಂದು ರಾತ್ರಿ 11 ಗಂಟೆಗೆ ಮುನೀಶ್ ಮೌದ್ಗಿಲ್‌ಗೆ ಕರೆ ಮಾಡಿದ್ದ ವ್ಯಕ್ತಿ. ಕಾರು ಚಾಲಕ ಆನಂದ್ ವರ್ಗಾವಣೆ ಮಾಡಿದ್ದಕ್ಕೆ ಕರೆ  ಮಾಡಿ ಬೆದರಿಕೆ ಹಾಕಿದ್ದ . ಈ ವೇಳೆ ತಾನೂ ಅಬಕಾರಿ ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಎಂದು ಹೇಳಿಕೊಂಡಿದ್ದಾನೆ. ಚಾಲಕ ಆನಂದನನ್ನ ಏಕೆ ವರ್ಗಾವಣೆ ಮಾಡಿದ್ದೀಯಾ ಎಂದು ಜೋರು ಅವಾಜ್ ಹಾಕಿದ್ದಾನೆ.

ಈ ವೇಳೆ ಇದು ಆಡಳಿತಾತ್ಮಕ ವಿಷಯ, ಇದಕ್ಕೆ ಈ ಹೊತ್ತಿನಲ್ಲಿ ಕರೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದ ಮುನೀಶ್ ಮೌದ್ಗಿಲ್ ಈ ವೇಳೆ ಏರು ಧ್ವನಿಯಲ್ಲಿ ಮಾತನಾಡಿದ್ದ.

ಮರು ದಿನ ಟ್ರೂ ಕಾಲರ್‌ನಲ್ಲಿ ಪೋನ್ ನಂಬರ್ ಪರಿಶೀಲನೆ ನಡೆಸಿದ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ರಾತ್ರಿ ಹೇಳಿದ್ದ ಹೆಸರು ಮತ್ತೆ ಟ್ರೂ ಕಾಲರ್ ಹೆಸರು ಬೇರೆ ಬೇರೆ ತೋರಿಸಿದೆ. ಟ್ರೂ ಕಾಲರ್ ನಲ್ಲಿ ಗೋವಿಂದರಾಜು ಟಿ ಎಂದು ಹೆಸರು ಪತ್ತೆಯಾಗಿದೆ.

ಬಳಿಕ ಅಬಕಾರಿ ಸಚಿವರ ಪಿಎ ರಾಮೇಗೌಡ ಅವರಿಗೆ ವಿಷಯ ತಿಳಿಸಿದ ಮುನೀಶ್ ಮೌದ್ಗಿಲ್ ಅವರಿಂದ ಮಾಹಿತಿಯನ್ನು ಪಡೆದಿದ್ದಾರೆ. ರಾಮೇಗೌಡ ಈ ವೇಳೆ ಸಚಿವರ ಪಿಎ ಎಂದು ಯಾರೋ ಕರೆ ಮಾಡಿದ್ದಾರೆ ಆ ವ್ಯಕ್ತಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ತನಗೆ ತಡರಾತ್ರಿ ಕರೆಯನ್ನು ಮಾಡಿ ಬೆದರಿಕೆಯನ್ನು ಹಾಕಿದ್ದು ಗೋಪಾಲಯ್ಯರವರ ಪಿಎ ಅಲ್ಲ ಅನ್ನೋದು ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮುನೀಶ್ ಮೌದ್ಗಿಲ್ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬಳಿಕ ಸಂಪಿಗೆ ಹಳ್ಳಿ ಪೊಲೀಸರು ಆರೋಪಿ ಗೋವಿಂದರಾಜುನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com