ಪಾತಾಳಕ್ಕಿಳಿದ ಟೊಮ್ಯಾಟೊ ಬೆಲೆ, ರೈತರಲ್ಲಿ ಆತಂಕ

ಧಾರಾಕಾರ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಲೆ ಕುಸಿದಿದೆ. ಮಳೆಯಿಂದಾಗಿ ಟೊಮೆಟೊ ಬೆಳೆಗಳು ನಾಶವಾಗಿದ್ದು, ಪ್ರತಿ ಕ್ರೇಟ್ (15 ಕೆಜಿ) ಬೆಲೆ 50 ರೂಪಾಯಿಗೆ ಕುಸಿದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಧಾರಾಕಾರ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಲೆ ಕುಸಿದಿದೆ. ಮಳೆಯಿಂದಾಗಿ ಟೊಮೆಟೊ ಬೆಳೆಗಳು ನಾಶವಾಗಿದ್ದು, ಪ್ರತಿ ಕ್ರೇಟ್ (15 ಕೆಜಿ) ಬೆಲೆ 50 ರೂಪಾಯಿಗೆ ಕುಸಿದಿದೆ. 

ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ವಿಜಯಲಕ್ಷ್ಮಿ, ಪ್ರತಿನಿತ್ಯ 30ರಿಂದ 35 ಸಾವಿರ ಕ್ವಿಂಟಲ್ ಟೊಮ್ಯಾಟೊಮಾರುಕಟ್ಟೆಗೆ ಬರುತ್ತಿದೆ. ನಾವು ಸಾಮಾನ್ಯವಾಗಿ ಪ್ರತಿದಿನ ದೇಶದ ವಿವಿಧ ಭಾಗಗಳಿಗೆ 140 ಟ್ರಕ್‌ ಲೋಡ್ ಟೊಮ್ಯಾಟೊಗಳನ್ನು ಕಳುಹಿಸುತ್ತೇವೆ, ಈಗ ಬೇಡಿಕೆಯ ಕುಸಿತದಿಂದಾಗಿ 80 ವಾಹನಗಳಿಗೆ ಇಳಿದಿದೆ ಎಂದು ಹೇಳಿದರು. 

ಬೇರೆ ರಾಜ್ಯಗಳಲ್ಲಿ ಟೊಮ್ಯಾಟೊ ಬೇಡಿಕೆ ಕಡಿಮೆಯಾಗಲು ಇನ್ನೊಂದು ಕಾರಣವಿದೆ ಎಂದು ಮೂಲಗಳು ತಿಳಿಸಿವೆ. ಮಳೆಯಿಂದಾಗಿ ಇಲ್ಲಿ ಬೆಳೆದ ನಿರ್ದಿಷ್ಟ ವಿಧದ ಟೊಮ್ಯಾಟೊ ಹಾಳಾಗುತ್ತದೆ. ಇಲ್ಲಿಂದ ಉತ್ಪನ್ನಗಳನ್ನು ಸಾಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಬೇರೆ ರಾಜ್ಯಗಳ ವ್ಯಾಪಾರಿಗಳು ಇಲ್ಲಿನ ಟೊಮ್ಯಾಟೊ ತಳಿಯನ್ನು ಖರೀದಿಸಲು ಉತ್ಸುಕರಾಗಿಲ್ಲ.

ಬೆಳೆಗೆ ಉತ್ತಮ ಪ್ರಮಾಣದ ಸೂರ್ಯನ ಬೆಳಕು ಬೇಕಾಗಿರುವುದರಿಂದ ಇದೇ ರೀತಿಯ ಹವಾಮಾನ ಮುಂದುವರಿದರೆ ಬೆಲೆಗಳು ಮತ್ತಷ್ಟು ಕುಸಿಯಬಹುದು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com