ಕೆನಡಾ ಪ್ರಜೆಗೆ ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ 21 ಲಕ್ಷ ರು. ವಂಚನೆ: ಎಫ್ ಐಆರ್ ದಾಖಲಿಸಲು ಬೆಂಗಳೂರು ಪೊಲೀಸರ ಹಿಂದೇಟು!

ಬೆಂಗಳೂರು ದಕ್ಷಿಣ ತಾಲೂಕಿನ ಚಾಮುಂಡೇಶ್ವರಿ ಲೇಔಟ್ 2ನೇ ಹಂತದ ಜಮೀನಿಗೆ ಸೇರಿದಂತೆ ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ 21 ಲಕ್ಷ ರು ಹಣ ವಂಚಿಸಿದ್ದಾರೆ ಎಂದು ಕೆನಡಾ ಪ್ರಜೆ ಶಾಹಿದ್ ಹಬೀಬ್ ಆರೋಪಿಸಿದ್ದಾರೆ.
ಪ್ರಭಾಕರ್ ರೆಡ್ಡಿ
ಪ್ರಭಾಕರ್ ರೆಡ್ಡಿ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಚಾಮುಂಡೇಶ್ವರಿ ಲೇಔಟ್ 2ನೇ ಹಂತದ ಜಮೀನಿಗೆ ಸೇರಿದಂತೆ ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ 21 ಲಕ್ಷ ರು ಹಣ ವಂಚಿಸಿದ್ದಾರೆ ಎಂದು ಕೆನಡಾ ಪ್ರಜೆ ಶಾಹಿದ್ ಹಬೀಬ್ ಆರೋಪಿಸಿದ್ದಾರೆ.

ಈ ಸಂಬಂಧ ಕಳೆದ ಮೂವರು ವರ್ಷಗಳಿಂದ ಹಲವು ಬಾರಿ ಪ್ರಯತ್ನ ನಡೆಸಿದರು ಬೆಂಗಳೂರು ಪೊಲೀಸರು ಎಫ್ ಐ ಆರ್ ದಾಖಲಿಸುತ್ತಿಲ್ಲ ಎಂದು ದೂರಿದ್ದಾರೆ.

ಶಾಹೀದ್ ಹಬೀಬ್ ಇತ್ತೀಚೆಗೆ ನಗರ ಪೊಲೀಸ್ ಆಯುಕ್ತರು ಹಾಗೂ ಭಾರತದಲ್ಲಿರುವ ಕೆನಡ ಹೈಕಮಿಷನರ್ ಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ.

ಸಾಯಿ ರಿಯಾಲ್ಟರ್ಸ್ ಗ್ರೂಪ್ ಮಾಲೀಕ ಪ್ರಭಾಕರ್ ರೆಡ್ಡಿ ಅವರನ್ನು ಕಳೆದ ಫೆಬ್ರವರಿಯಲ್ಲಿ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬಂಧಿಸಿದ್ದರು, ಅದಾದ ನಂತರ ಹಲವು ಮಂದಿ ಪ್ರಭಾಕರ್ ರೆಡ್ಜಿ ವಿರುದ್ಧ ವಂಚನೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಟ್ಟದಾಸನಪುರದ ಸರ್ವೆ ನಂ.79 ಹಾಗೂ ಉಪ ಲೇಔಟ್‌ನಲ್ಲಿ ನನ್ನ ಹಾಗೂ ನನ್ನ ಸ್ನೇಹಿತನಿಗೆ 10 ನಿವೇಶನಗಳನ್ನು ನಕಲಿ ದಾಖಲೆ ನೀಡಿ ನಮಗೆ ಮಾರಾಟ ಮಾಡಲಾಗಿತ್ತು. ಆದರೆ ಅದರ ಮೂಲ ಮಾಲೀಕ ಬಂದು ಆಸ್ತಿಯನ್ನು ಸ್ವಾಧೀನಪಡಿಸಿಕೊಂಡರು ಎಂದು ಹಬೀಬ್ ತಿಳಿಸಿದ್ದಾರೆ.

“ನಾನು ಈ ಬಗ್ಗೆ ಕಮಿಷನರ್ ಮತ್ತು  ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಅವರಿಗೆ ತಿಳಿಸಿದ್ದೇನೆ, ಅವರು ನನ್ನ ದೂರನ್ನು ಒಪ್ಪಿಕೊಂಡರು ಆದರೆ ಮೂರು ವರ್ಷಗಳಿಂದ ಕ್ರಮ ಕೈಗೊಂಡಿಲ್ಲ. ಕೋರಮಂಗಲ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ, ಆದರೆ  ಪ್ರಭಾಕರ್ ರೆಡ್ಡಿಯಿಂದ ಪರ್ಯಾಯ ನಿವೇಶನ ಪಡೆಯಲು ಸೂಚಿಸಿದರು ಎಂದು ಹಬೀಬ್ ಹೇಳಿದ್ದಾರೆ.

ಪ್ರಭಾಕರ್ ರೆಡ್ಜಿ ನನಗೆ ಇತರೆ ಅಕ್ರಮ ನಿವೇಶನಗಳನ್ನು ನೀಡುತ್ತಿದ್ದಾರೆ, ಹೀಗಾಗಿ ಅದನ್ನು ನಾನು ಸ್ವೀಕರಿಸುತ್ತಿಲ್ಲ, ಆಸ್ತಿ ವಂಚನೆ ಸಿವಿಲ್ ಪ್ರಕರಣವಾಗಿದ್ದು, ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾಗಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ, ರಾಜ್ಯ ಮಾನವ ಹಕ್ಕುಗಳ ಆಯುಕ್ತರು, ಎನ್‌ಆರ್‌ಐ ಫೋರಂ, ರೇರಾ ಮತ್ತು ಆರ್‌ಟಿಐ ಗೆ ದೂರುಗಳನ್ನು ಕಳುಹಿಸಲಾಗಿದೆ, ಆದರೆ ರೆಡ್ಡಿಯ ರಾಜಕೀಯ ಪ್ರಭಾವದಿಂದಾಗಿ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಹಬೀಬ್ ಅಳಲು ತೋಡಿಕೊಂಡಿದ್ದಾರೆ. ಅವರು ತಮ್ಮ ಎಲ್ಲಾ ದೂರುಗಳು ಮತ್ತು ದಾಖಲೆಗಳನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ನಾನು ಈ ಹಿಂದೆ ಪ್ರಭಾಕರ್  ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ತಾವು ಸಲ್ಲಿಸಿದ ಪೊಲೀಸ್ ದೂರುಗಳ ಬಗ್ಗೆ ಅವರಿಗೆ ತಿಲಿಸಿದೆ ಆದರೆ ಅಂತಹ ದೂರುಗಳಿಗೆ ತಾನು ಹೆದರುವುದಿಲ್ಲ, ನನ್ನ ವಿರುದ್ಧ ಹಲವು ಪ್ರಕರಣಗಳು ಬಾಕಿ ಇದೆ ಎಂದು ಅವರು ಕೂಲ್ ಆಗಿ ಹೇಳಿದರು ಎಂದು ತಿಳಿಸಿದ್ದಾರೆ. ಜೂನ್ 2020 ರಲ್ಲಿ, ಅವರು ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದರು , ಆದರೆ ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು ಪ್ರಭಾಕರ್ ರೆಡ್ಜಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com