ಬಕ್ರೀದ್ ಭೇಟಿ ವೇಳೆ ವಿವಿಧ ಸಮುದಾಯದ ಹೆಣ್ಣು ಮಕ್ಕಳಿಗೆ ಬೆದರಿಕೆ: ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು!

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಹಿಂದೂತ್ವ ಪರ ಸಂಘಟನೆಗೆ ಸೇರಿದ ನಾಲ್ವರ ವಿರುದ್ಧ ವಿವಿಧ ಸಮುದಾಯದ ಇಬ್ಬರು ಯುವತಿಯರಿಗೆ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಹಿಂದೂತ್ವ ಪರ ಸಂಘಟನೆಗೆ ಸೇರಿದ ನಾಲ್ವರ ವಿರುದ್ಧ ವಿವಿಧ ಸಮುದಾಯದ ಇಬ್ಬರು ಯುವತಿಯರಿಗೆ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸುದರ್ಶನ ಗೋಗಾಡಿ, ಪ್ರಶಾಂತ್ ಕೆ ಕೊಯಿಲ, ತಮ್ಮು ಕಲ್ಕಾಡಿ ಮತ್ತು ಪ್ರಸಾದ್ ಕೊಯಿಲ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಉಪ್ಪಿನಂಗಡಿಯ ಕೂಡ್ಲೂರಿನಲ್ಲಿ ಹಿಂದೂ ಮಹಿಳೆಯೊಬ್ಬರು ಮುಸ್ಲಿಂ ಸಮುದಾಯದ ತನ್ನ ಸ್ನೇಹಿತೆಯ ಜೊತೆ ಬಕ್ರೀದ್ ಹಬ್ಬಕ್ಕೆ ಹೋಗಿದ್ದಳು.

ಈ ಬಗ್ಗೆ ಮಾಹಿತಿ ಪಡೆದ ಹಿಂದುತ್ವವಾದಿ ಕಾರ್ಯಕರ್ತರು ಬಾಲಕಿಯ ಮನೆಗೆ ಆಗಮಿಸಿ ಯುವತಿಗೆ ನಿಂದಿಸಿದ್ದಾರೆ. ಇದೇ ಅಲ್ಲದೆ ಮುಸ್ಲಿಂ ಯುವತಿಯ ಕುಟುಂಬಸ್ಥರಿಗೂ ಬೆದರಿಕೆ ಹಾಕಿದ್ದಾರೆ.

ಮುಸ್ಲಿಂ ಯುವತಿಯ ಪೋಷಕರು ಕಡಬ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com