ಬೆಂಗಳೂರು: ಆರ್ಕಿಡ್ಸ್ ಶಾಲೆಯ ಮತ್ತೊಂದು ಬ್ರ್ಯಾಂಚ್ ವಿರುದ್ಧ ಎಫ್ ಐಆರ್ ದಾಖಲು!
ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮತ್ತೊಂದು ಬ್ರ್ಯಾಂಚ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಬಾರಿ ಹರಳೂರು ರಸ್ತೆಯಲ್ಲಿರುವ ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ನ ಬಾಗಿಲು ಹಾಕಿಸಲಾಗಿದೆ.
Published: 23rd July 2022 01:29 PM | Last Updated: 23rd July 2022 01:57 PM | A+A A-

ಆರ್ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್
ಬೆಂಗಳೂರು: ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮತ್ತೊಂದು ಬ್ರ್ಯಾಂಚ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಬಾರಿ ಹರಳೂರು ರಸ್ತೆಯಲ್ಲಿರುವ ಆರ್ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ನ ಬಾಗಿಲು ಹಾಕಿಸಲಾಗಿದೆ. ಶಾಲೆಯು ಶಿಕ್ಷಣ ಇಲಾಖೆಯಿಂದ ಅನುಮತಿಗಾಗಿ ಅರ್ಜಿ ಸಲ್ಲಿಸಿದ ನಂತರ ಅದನ್ನು ಪಡೆಯುವ ನಂಬಿಕೆ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಎಂದು ಬೆಂಗಳೂರು ದಕ್ಷಿಣ ಬ್ಲಾಕ್ ಶಿಕ್ಷಣಾಧಿಕಾರಿ ಬಿ.ಆರ್. ರಾಮಮೂರ್ತಿ ಹೇಳಿದ್ದಾರೆ.
ಸುಮಾರು 70 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿರುವ ಶಾಲೆ, ಜೂನ್ 15 ರಿಂದ ಆನ್ ಲೈನ್ ತರಗತಿಗಳನ್ನು ಆರಂಭಿಸಿತ್ತು. ಶಾಲೆ ಕಾರ್ಯನಿರ್ವಹಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ. ಆದರೆ, ಆದರೆ ಅವರಿಗೆ ಅನುಮತಿ ಸಿಗುತ್ತದೆ ಎಂಬ ಊಹೆಯ ಆಧಾರದ ಮೇಲೆ, ಅವರು ಈ ಶೈಕ್ಷಣಿಕ ವರ್ಷದಿಂದಲೇ ಪ್ರವೇಶ ಮತ್ತು ತರಗತಿಗಳನ್ನು ಪ್ರಾರಂಭಿಸಿದರು ಎಂದು ರಾಮಮೂರ್ತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಅನಧಿಕೃತ ಬ್ರ್ಯಾಂಚ್; ಪ್ರತಿಷ್ಠಿತ ಶಾಲೆ ವಿರುದ್ಧ ಎಫ್ ಐ ಆರ್ ದಾಖಲು!
ಕಳೆದ ಶುಕ್ರವಾರ ಶಾಲೆಯನ್ನು ಪರಿಶೀಲಿಸಿದ ಬಿಇಒ ಕೂಡಲೇ ಬಂದ್ ಮಾಡಿಸಿದ್ದಾರೆ. ಡಿಡಿಪಿಐ ಸೂಚನೆ ಆಧಾರದ ಮೇಲೆ ಈ ಬ್ರ್ಯಾಂಚ್ ನ ಅಧ್ಯಕ್ಷರು, ಪ್ರಿನ್ಸಿಪಾಲ್ ಮತ್ತು ಕಾರ್ಯದರ್ಶಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬೆಳ್ಳಂದೂರು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಸರ್ಕಾರದಿಂದ ಅನುಮತಿ ಪಡೆದ ಇತರ ಶಾಲೆಗಳ ಬ್ರ್ಯಾಂಚ್ ಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ. ನಾಲ್ಕು ಪೋಷಕರು ಕಟ್ಟಿದ ಫೀಸ್ ನ್ನು ವಾಪಸ್ ಪಡೆದಿದ್ದಾರೆ ಎಂದು ಬಿಇಒ ತಿಳಿಸಿದರು.
ಈ ಹಿಂದೆ ಮಾಗಡಿ ರಸ್ತೆಯ ಆರ್ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆಯ ಬ್ರ್ಯಾಂಚ್ ನ್ನು ಇದೇ ರೀತಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈ ಎರಡು ಬ್ರ್ಯಾಂಚ್ ಗಳು ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿವೆ. ಆದರೆ, ಇನ್ನೂ ಅನುಮತಿ ದೊರೆಯದೇ ಇದ್ದರೂ ಆಡ್ಮಿಷನ್ ಆರಂಭಿಸಿತ್ತು. ಸಾರ್ವಜನಿಕರ ವಿಚಾರಣೆ ಆಧಾರದ ಮೇಲೆ ತನಿಖೆ ನಡೆಸಿ ಮಾಗಡಿ ರೋಡ್ ಬ್ರ್ಯಾಂಚ್ ಮುಚ್ಚಿಸಿದಂತೆ ಈ ಶಾಲೆಯನ್ನು ಮುಚ್ಚಿಸಲಾಗಿದೆ ಎಂದು ಬಿಇಒ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದರು.
ಕಾಡುಗೋಡಿ, ರಾಜಾಜಿನಗರ ಬ್ರ್ಯಾಂಚ್ ಗಳಲ್ಲಿಯೂ ತನಿಖೆ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್. ವಿಶಾಲ್, ಅನುಮತಿ ಇಲ್ಲದೆ ಯಾವುದೇ ಶಾಲೆಯೂ ಕಾರ್ಯನಿರ್ವಹಿಸುವಂತಿಲ್ಲ ಎಂದು ಇತ್ತೀಚಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು.