ಬೆಂಗಳೂರು: ಬೋಧನಾ ಸಿಬ್ಬಂದಿ ಕೊರತೆಯಿಂದ ತತ್ತರಿಸುತ್ತಿದೆ ರಾಜ್ಯದ ಅತ್ಯಂತ ಹಳೆಯ ಎಂಜಿನಿಯರಿಂಗ್ ಕಾಲೇಜು!

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಸ್ಥಾಪಿಸಿದ್ದ,  ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಸುಮಾರು 105 ವರ್ಷಗಳಷ್ಟು ಹಳೆಯದಾದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) -ಖಾಯಂ ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.
ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್
ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್

ಬೆಂಗಳೂರು: ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಸ್ಥಾಪಿಸಿದ್ದ,  ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಸುಮಾರು 105 ವರ್ಷಗಳಷ್ಟು ಹಳೆಯದಾದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) -ಖಾಯಂ ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ಕಾಲೇಜಿನಲ್ಲಿ 2,800 ಬಿಇ ಮತ್ತು 700 ಪಿಎಚ್‌ಡಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 4,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, 139 ಶಿಕ್ಷಕರ ಮಂಜೂರಾತಿಗೆ ಅವಕಾಶವಿದೆ, ಆದರೆ ಕೇವಲ 80 ಖಾಯಂ ಶಿಕ್ಷಕರಿದ್ದಾರೆ.   2007ರಿಂದ ಇಲ್ಲಿಯವರೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಿಲ್ಲ.

ಅಲ್ಲದೆ, ಸಂಸ್ಥೆಯಲ್ಲಿ 203 ಸಿಬ್ಬಂದಿ ಇರಬೇಕಾದ ಕಡೆ ಕೇವಲ 35 ಬೋಧಕೇತರ ಸಿಬ್ಬಂದಿಗಳಿದ್ದು, ಗುತ್ತಿಗೆ ಸಿಬ್ಬಂದಿಯೊಂದಿಗೆ ಕಾಲೇಜು ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಕಾಲಜಿನ ನೌಕರರೊಬ್ಬರು ತಿಳಿಸಿದ್ದಾರೆ.

ಯುವಿಸಿಇ ಪ್ರಾಂಶುಪಾಲ ಎಚ್.ಎನ್.ರಮೇಶ್ ಅವರು ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸಿಬ್ಬಂದಿ ಕೊರತೆ ಕುರಿತು ಪತ್ರ ಬರೆದಿದ್ದಾರೆ. 2007 ರಿಂದ ಖಾಯಂ ಬೋಧಕ ಸಿಬ್ಬಂದಿ ಮತ್ತು 1995 ರಿಂದ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ ಎಂದು ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ನಲ್ಲಿ ಲಭ್ಯವಿರುವ ಪತ್ರವು ತಿಳಿಸುತ್ತದೆ. "ಪ್ರಯೋಗಾಲಯಗಳಲ್ಲಿ ಯಾವುದೇ ಅರ್ಹ ಬೋಧಕೇತರ ಸಿಬ್ಬಂದಿ ಇಲ್ಲ ಎಂದು ಪತ್ರದಲ್ಲಿಉಲ್ಲೇಖಿಸಲಾಗಿದೆ.

ಡಿಸೆಂಬರ್ 2021 ರಲ್ಲಿ,  ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಬಿಲ್ 2021 ಅನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಸಮಾನವಾಗಿ ಸ್ವಾಯತ್ತ ಸಂಸ್ಥೆಯಾಗಿ ಅಪ್‌ಗ್ರೇಡ್ ಮಾಡಲು ಅಂಗೀಕರಿಸಲಾಯಿತು. ಆದರೆ ರಾಜ್ಯ ಸರ್ಕಾರ ಇನ್ನೂ ನಿರ್ದೇಶಕರು, ಆಡಳಿತ ಮಂಡಳಿ ಹಾಗೂ ಸದಸ್ಯರನ್ನು ನೇಮಕ ಮಾಡಿಲ್ಲ. ಇದು ಸೆನೆಟ್ ಮತ್ತು ಕಾರ್ಯಕಾರಿ ಮಂಡಳಿಯನ್ನು ರಚಿಸುವಲ್ಲಿ ಮತ್ತು ಇತರ ಅಧಿಕಾರಿಗಳ ನೇಮಕಾತಿಯಲ್ಲಿ ಸಹಾಯ ಮಾಡುತ್ತದೆ.

2017 ರಲ್ಲಿಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಕಟ್ಟಡ ಕುಸಿದಿದ್ದರಿಂದ ಈ ವಿಭಾಗದ ವಿದ್ಯಾರ್ಥಿಗಳು ಇತರ ಕಾಲೇಜುಗಳಲ್ಲಿ ಲ್ಯಾಬ್ ಸೌಲಭ್ಯಗಳನ್ನು ಬಳಸಬೇಕಾಗಿದೆ.  ವಿವಿಯಲ್ಲಿ ಮೂಲಸೌಕರ್ಯಕ್ಕೂ ಸಮಸ್ಯೆಗಳಿದ್ದು ಮರುನಿರ್ಮಾಣಕ್ಕೆ ಅಂದಾಜು 85 ಕೋಟಿ ರು ಹಣ ಬೇಕಾಗಿದೆ. ಇದುವರೆಗೂ ಟೆಂಡರ್ ಕೂಡ ಕರೆದಿಲ್ಲ, ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ನ ಹಣಕಾಸು ಸಮಿತಿಯು ಅಂದಾಜಿಗೆ ಅನುಮೋದನೆ ನೀಡಿತು. ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ನೀಡಲಾಯಿತು. ಆದರೆ ಯುವಿಸಿಇ ಈಗ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಬೆಂಗಳೂರು ವಿಶ್ವವಿದ್ಯಾಲಯ ಕಾಮಗಾರಿಗೆ ವಿಳಂಬ ಮಾಡುತ್ತಿದೆ ಎಂದು ಯುವಿಸಿಇ ಅಧಿಕಾರಿಗಳು ಆರೋಪಿಸಿದ್ದಾರೆ.

ಈ ಕೊರತೆಗಳ ನಡುವೆಯೂ ಯುವಿಸಿಇ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದೆ. ಕಳೆದ ವರ್ಷ 150ಕ್ಕೂ ಹೆಚ್ಚು ಕಂಪನಿಗಳು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿವೆ. "ನಮ್ಮ ಶೇಕಡಾ 98 ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿ ಮೂಲಕ ಉದ್ಯೋಗಗಳನ್ನು ಪಡೆದಿದ್ದಾರೆ ಎಂದು ಪ್ರಾಂಶುಪಾಲ ಎಚ್.ಎನ್.ರಮೇಶ್ ತಿಳಿಸಿದ್ದಾರೆ.

ಕೆಲವರಿಗೆ ವರ್ಷಕ್ಕೆ ರೂ 10 ಲಕ್ಷದಿಂದ ರೂ 30 ಲಕ್ಷದವರೆಗೆ ಸಂಬಳದ ಪ್ಯಾಕೇಜ್‌ಗಳೊಂದಿಗೆ ಎರಡು ಮೂರು ಉದ್ಯೋಗ ಆಫರ್‌ಗಳು ಸಿಕ್ಕಿವೆ.  ನಾವು ಎರಡನೇ ಸೆಮಿಸ್ಟರ್‌ನಿಂದ 200 ಗಂಟೆಗಳ ವೃತ್ತಿಪರ ತರಬೇತಿ ನೀಡುತ್ತೇವೆ, ಇದು ಕ್ಯಾಂಪಸ್ ಸಂದರ್ಶನಗಳಲ್ಲಿ ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com