ರಾಜ್ಯದಲ್ಲಿ 3829 ಕೋಟಿ ರೂ. ಬಂಡವಾಳ ಹೂಡಿಕೆಯ 61 ಯೋಜನೆಗೆ ಅನುಮೋದನೆ: ಸಚಿವ ನಿರಾಣಿ

ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ₹3829.46 ಕೋಟಿ ಮೊತ್ತದ ಬಂಡವಾಳ...
ಸಚಿವ ಮುರುಗೇಶ್ ಆರ್ ನಿರಾಣಿ
ಸಚಿವ ಮುರುಗೇಶ್ ಆರ್ ನಿರಾಣಿ
Updated on

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ₹3829.46 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 61ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ 133ನೇ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ₹3829. 46 ಕೋಟಿ ಮೊತ್ತದ ಹೊಡಿಕೆ ಮಾಡುವುದರಿಂದ ರಾಜ್ಯದಲ್ಲಿ ಸುಮಾರು 19150 ಉದ್ಯೋಗಗಳು ಸೃಷ್ಡಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ.

₹50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ಒಟ್ಟು 13 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಇದರಿಂದ ಅಂದಾಜು ₹2979.35 ಕೋಟಿ ಹೂಡಿಕೆಯಾಗಿ 16158 ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು.

ಇದೇ ವೇಳೆ ₹15 ಕೋಟೆಯಿಂದ ₹50 ಕೋಟಿ ಒಳಗಿನ 42 ಯೋಜನೆಗೆ ಹಸಿರು ನಿಶಾನೆಯನ್ನು ನೀಡಲಾಗಿದೆ. ₹774.51 ಕೋಟಿ ಹೂಡಿಕೆಯೊಂದಿಗೆ 3352 ಉದ್ಯೋಗ ಲಭಿಸಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಒಟ್ಟು 6 ಯೋಜನೆಯಿಂದ ₹75. 60 ಕೋಟಿ ಹೂಡಿಕೆಯಾಗಲಿದೆ ಎಂದರು.

ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದು ಎಲ್ಲಾ ‌ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರುಕಳಿಸಿರುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯತ್ತ ಸಚಿವ ನಿರಾಣಿ ಅವರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.

ಉದ್ಯಮಿಗಳ ಆಕರ್ಷಣೆ , ಕೈಗಾರಿಕೆಗಳ ಪುನಶ್ಚೇತನ, ಬಂಡವಾಳ ಹೂಡಿಕೆ ಮಾಡುವವರಿಗೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಅಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಇಲಾಖೆಯ ಆಯುಕ್ತೆ, ಗುಂಜನ್ ಕೃಷ್ಣ , ಕೆಐಎಎಡಿಬಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಅನುಮೋದನೆ ನೀಡಿರುವ ಯೋಜನೆಗಳು

ಟೊಯೋಟಾ ಕಿರ್ಲೋಸ್ಕರ್ ಆಟೋ ಪಾಟ್ಸ್೯ ₹445 ಕೋಟಿಹೂಡಿಕೆ, 1198 ಉದ್ಯೋಗ ಸೃಷ್ಟಿ

ಮೈಕ್ರಾನ್ ಟೆಕ್ನಾಲಜಿ ಆಪರೇಷನ್ ಇಂಡಿಯಾ ಎಲ್ ಎಲ್ ಪಿ. ₹397 ಕೋಟಿ ಹೂಡಿಕೆ ಹಾಗೂ 797 ಉದ್ಯೋಗ

ಸೀತರಾಮಂ ಇಸ್ಟಾಟ್ ಪ್ರೈ. ಲಿ. ₹376 ಕೋಟಿ ಹೂಡಿಕೆ. 400 ಉದ್ಯೋಗ

ಜಿಂದಾಲ್ ಇಂಡಸ್ಟ್ರೀಸ್ ಹೀಸಾರ್ ಪ್ರೈ. ಲಿ, ₹340 ಕೋಟಿ ಹೂಡಿಕೆ, 310 ಉದ್ಯೋಗ

ಸೂರಾಜ್ ಆಗ್ರೋ ಡಿಸ್ಡೀಲಿಸ್ ಲಿ ₹185 ಕೋಟಿ ಹೂಡಿಕೆ, 170 ಉದ್ಯೋಗ

ನಹಾರಾಸ್ ಎಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ ₹120 ಕೋಟಿ ಹೂಡಿಕೆ, 353 ಉದ್ಯೋಗ

ಶ್ರೀ ಬ್ರಮ್ಮೇಶ್ವರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮಾಗೂರ್, ₹112 ಕೋಟಿ ಹೂಡಿಕೆ, 80 ಉದ್ಯೋಗ

ಲೂಜಾನ್ ಫಾರ್ಮಾ ಪ್ರೈ‌.ಲಿ. ₹97.50 ಕೋಟಿ ಹೂಡಿಕೆ, 246 ಉದ್ಯೋಗ

ಎನ್.ಎಸ್.ಪಿ. ಡಿಸ್ಟಿಲರಿ ಪ್ರೈ.ಲಿ ₹64.64 ಕೋಟಿ ಹೂಡಿಕೆ, 116 ಉದ್ಯೋಗ

ಸ್ಟ್ರೀಂಗ್ ಬಯೋ ಪ್ರೈ. ಲಿ ₹75 ಕೋಟಿ, 48 ಉದ್ಯೋಗ

ಋಷಿಲ್ ಡೆಕೋರ್ ಲಿ ₹72.76 ಕೋಟಿ ಹೂಡಿಕೆ, 310 ಉದ್ಯೋಗ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com