ಪಾಕಶಾಲೆ ಸ್ಪರ್ಧೆಗೊಂದು ಸುಂದರ ವೇದಿಕೆ 'ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022'
'ವರ್ಲ್ಡ್ ಆಫ್ ಹಾಸ್ಪಿಟಾಲಿಟಿ' ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022ನ್ನು ಆಯೋಜಿಸುತ್ತಿದ್ದು, ಭಾರತದ ವೃತ್ತಿಪರ ಶೆಫ್ ಗಳು, ಆತಿಥ್ಯ ಕ್ಷೇತ್ರದ ತಜ್ಞರು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ ತರುತ್ತದೆ. ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಲೈವ್ ಶೆಫ್ ಸ್ಪರ್ಧೆಯನ್ನು ಅನಾವರಣಗೊಳಿಸಲು ಮುಂದಾಗಿದೆ.
Published: 01st June 2022 04:40 PM | Last Updated: 14th June 2022 02:19 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: 'ವರ್ಲ್ಡ್ ಆಫ್ ಹಾಸ್ಪಿಟಾಲಿಟಿ' ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022ನ್ನು ಆಯೋಜಿಸುತ್ತಿದ್ದು, ಭಾರತದ ವೃತ್ತಿಪರ ಶೆಫ್ ಗಳು, ಆತಿಥ್ಯ ಕ್ಷೇತ್ರದ ತಜ್ಞರು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ ತರುತ್ತದೆ. ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಲೈವ್ ಶೆಫ್ ಸ್ಪರ್ಧೆಯನ್ನು ಅನಾವರಣಗೊಳಿಸಲು ಮುಂದಾಗಿದೆ.
ದಕ್ಷಿಣ ಭಾರತ ಪಾಕಶಾಲೆ ಸಂಸ್ಥೆ ಸಹಯೋಗದಲ್ಲಿ ಈ ಪ್ರತಿಷ್ಠಿತ ಪಾಕಶಾಲೆ ಕಲಾಸ್ಪರ್ಧೆ ನಡೆಯಲಿದ್ದು, ಬೆಂಗಳೂರಿನ ಆಹಾರ ಸೇವಾ ವಲಯದ 250ಕ್ಕೂ ಹೆಚ್ಚು ರಾಷ್ಟ್ರಾದ್ಯಂತದ ವೃತ್ತಿಪರ ಶೆಫ್ ಗಳು ತಮ್ಮ ಪಾಕಶಾಲೆ ಕಲೆಯನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಮೈದಾನದಲ್ಲಿ ಜೂನ್ 8ರಿಂದ 10ರವರೆಗೆ ಬೆಳಿಗ್ಗೆ 11ರಿಂದ ಸಾಯಂಕಾಲ 7ರವರೆಗೆ ನೆರವೇರಲಿದೆ. ಈ ಸ್ಪರ್ಧೆಯು ನಗರದಲ್ಲಿನ ಹಲವಾರು ಬಾಣಸಿಗರಿಗೆ ತಮ್ಮ ಕೌಶಲ್ಯಕ್ಕೆ ತಕ್ಕಂತೆ ಮಾನ್ಯತೆ ಪಡೆಯಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಬಾಣಸಿಗ ತೀರ್ಪುಗಾರರ ಸಮಿತಿಯಿಂದ ವಿವರವಾದ ವಿಮರ್ಶೆ, ಪ್ರತಿಕ್ರಿಯೆಯನ್ನು ಆಲಿಸುವ ಅವಕಾಶ ಮತ್ತು ವೇದಿಕೆಯನ್ನು ಕಲ್ಪಿಸುವುದರಿಂದ ಹೆಚ್ಚು ಬೇಡಿಕೆಯಿರುವ ವೇದಿಕೆಯಾಗಿದೆ.
ಸ್ಪರ್ಧೆಯ ವಿಧಾನಗಳು: ಜಾಗತಿಕ ಮಟ್ಟದ ಆಹಾರ ಪದಾರ್ಥಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸುವುದು, ಆಹಾರೋದ್ಯಮ, ಆತಿಥ್ಯ, ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಯುವ ಪ್ರತಿಭಾವಂತರನ್ನು ಗುರುತಿಸುವುದು ಇಲ್ಲಿ ಮುಖ್ಯವಾಗಿದೆ.
ಹೆಚ್ಚಿನ ಮಾಹಿತಿಗೆ 9844006736, www.worldofhospitality.in ನ್ನು ಸಂಪರ್ಕಿಸಬಹುದು.