ರಾಜ್ಯದ ಉದ್ಯಮಿಗಳಿಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್: 50ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಕ್ಕೆ ದಾಳಿ, ತೆರಿಗೆ ವಂಚನೆ ಆರೋಪ
ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಬಳಿಕ ಇದೀಗ ರಾಜ್ಯದ ಪ್ರಮುಖ ಉದ್ಯಮಿಗಳಿಗೆ ಇಂದು ಬುಧವಾರ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆಯೇ ರಾಜ್ಯದ 50ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದೆ. ಬೆಂಗಳೂರಿನಲ್ಲೇ 35ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆಸಲಾಗಿದೆ.
Published: 01st June 2022 11:31 AM | Last Updated: 01st June 2022 01:33 PM | A+A A-

ಆದಾಯ ತೆರಿಗೆ ಇಲಾಖೆ ದಾಳಿ
ಬೆಂಗಳೂರು: ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಬಳಿಕ ಇದೀಗ ರಾಜ್ಯದ ಪ್ರಮುಖ ಉದ್ಯಮಿಗಳಿಗೆ ಇಂದು ಬುಧವಾರ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆಯೇ ರಾಜ್ಯದ 50ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದೆ. ಬೆಂಗಳೂರಿನಲ್ಲೇ 35ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆಸಲಾಗಿದೆ.
ಆದಾಯ ಮರೆಮಾಚಿ ಐಟಿ ರಿಟರ್ನ್ಸ್ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಅನೇಕ ಬಿಸಿನೆಸ್‍ಮೆನ್‍ಗಳ ಮನೆ ಹಾಗೂ ಕಚೇರಿಗಳ ಮೇಲೆ 600ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡವು ದಾಳಿ ನಡೆಸಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರುವವರನ್ನು ಪತ್ತೆ ಮಾಡಿ ಈ ದಾಳಿ ನಡೆಸಿದ್ದಾರೆ. ಮನೆಗಳ ಮೇಲೆ ಸರ್ಚ್ ವಾರೆಂಟ್ ತಂದು ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.
ಎಂಬೆಸಿ ಗ್ರೂಪ್ ನಿರ್ದೇಶಕ ನರಪತ್ ಸಿಂಗ್ ಚರೋಡಿಯಾ ಮನೆ ಮೇಲೆ ರೇಡ್ ಮಾಡಲಾಗಿದೆ. ನರಪತ್ ಸಿಂಗ್ ಚರೋಡಿಯಾ ಫ್ಲ್ಯಾಟ್ ಮೇಲೆ ದಾಳಿ ನಡೆಸಲಾಗಿದೆ.ಸದಾಶಿವನಗರದ ಎಂಬೆಸ್ಸಿ ಆರ್ಕಿಡ್ ಅಪಾರ್ಟ್ಮೆಂಟ್ನಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ಧಾರೆ. ಫ್ಲ್ಯಾಟ್ ನಂಬರ್-609ರಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಐಟಿ ತಂಡ ತೆರಿಗೆ ವಂಚನೆ ಪ್ರಕರಣದಲ್ಲಿ ದಾಳಿ ಮಾಡುತ್ತಿದ್ದಾರೆ.
ಗೋವಾ – ಕರ್ನಾಟಕ ಅಧಿಕಾರಿಗಳ ತಂಡದಿಂದ ಈ ದಾಳಿ ನಡೆಸಿದೆ. ಈಗಾಗಲೇ ಲೆಕ್ಕಪತ್ರಗಳ ಶೋಧನೆ ನಡೆಸುತ್ತಿರುವ ಅಧಿಕಾರಿಗಳು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.