ಸಮೀರ್ ವಾಂಖೆಡೆ ಸ್ಥಾನಕ್ಕೆ ಬೆಂಗಳೂರು ಎನ್ ಸಿಬಿ ನಿರ್ದೇಶಕ ಅಮಿತ್ ಘಾವಟೆ ವರ್ಗಾವಣೆ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದ ತನಿಖೆಯಲ್ಲಿ ತೀವ್ರ ಆರೋಪ ಎದುರಿಸಿ ವರ್ಗಾವಣೆಗೊಂಡಿದ್ದ ಎನ್‌ಸಿಬಿ ಮುಂಬೈ ಮುಖ್ಯಸ್ಥ ಸಮೀರ್ ವಾಂಖೆಡೆ ಅವರ ಸ್ಥಾನಕ್ಕೆ ಬೆಂಗಳೂರು ಎನ್ ಸಿಬಿ ವಲಯ ನಿರ್ದೇಶಕರು ನೇಮಕಗೊಂಡಿದ್ದಾರೆ. 

Published: 01st June 2022 01:56 PM  |   Last Updated: 01st June 2022 05:08 PM   |  A+A-


Former Mumbai NCB chief Sameer Wankhede

ಮುಂಬೈ ಎನ್‌ಸಿಬಿ ಮಾಜಿ ಮುಖ್ಯಸ್ಥ ಸಮೀರ್ ವಾಂಖೆಡೆ

The New Indian Express

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದ ತನಿಖೆಯಲ್ಲಿ ತೀವ್ರ ಆರೋಪ ಎದುರಿಸಿ ವರ್ಗಾವಣೆಗೊಂಡಿದ್ದ ಎನ್‌ಸಿಬಿ (Narcotics Control Bureau (NCB) ಮುಂಬೈ ಮುಖ್ಯಸ್ಥ ಸಮೀರ್ ವಾಂಖೆಡೆ ಅವರ ಸ್ಥಾನಕ್ಕೆ ಬೆಂಗಳೂರು ಎನ್ ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ನೇಮಕಗೊಂಡಿದ್ದಾರೆ. 

ಸಮೀರ್ ವಾಂಖೆಡೆ ಅವರನ್ನು ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ಮಹಾನಿರ್ದೇಶನಾಲಯಕ್ಕೆ ಇತ್ತೀಚೆಗೆ ವರ್ಗಾಯಿಸಲಾಗಿತ್ತು. 2008ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ ಅಮಿತ್ ಘಾವಟೆ ಅವರು ಜೂನ್ 2020ರಲ್ಲಿ ಬೆಂಗಳೂರು, ಎನ್‌ಸಿಬಿ ವಲಯ ನಿರ್ದೇಶಕರಾಗಿ ಸೇರಿದ್ದರು.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬೆಂಗಳೂರು ವಲಯ ಘಟಕವು ಕರ್ನಾಟಕ ಜೊತೆಗೆ ಮೂರು ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳವನ್ನು ಒಳಗೊಂಡಿದೆ. NCB, ಚೆನ್ನೈಯ ವಲಯ ನಿರ್ದೇಶಕ P ಅರವಿಂದನ್  2010ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿದ್ದು, ಈಗ ಬೆಂಗಳೂರು, NCBಯ ಮುಖ್ಯಸ್ಥರಾಗಿದ್ದಾರೆ. ಜೊತೆಗೆ ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಲಕ್ಷದ್ವೀಪಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತಾರೆ. 

ಅಮಿತ್ ಘಾವಟೆ ಅವರ ಮೇಲ್ವಿಚಾರಣೆಯಲ್ಲಿ, NCBಯ ಬೆಂಗಳೂರು ವಲಯ ಘಟಕ ಹಲವಾರು ಮಾದಕ ವಸ್ತು ಪ್ರಕರಣಗಳನ್ನು ಈ ಹಿಂದೆ ಭೇದಿಸಿದೆ. 2020ರ ಆಗಸ್ಟ್‌ನಲ್ಲಿ ನಡೆದ ಮಾದಕ ದ್ರವ್ಯ ದಂಧೆಯಿಂದಾಗಿ ಸಿಪಿಐಎಂನ ಕೇರಳ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಷ್ ಕೊಡಿಯೇರಿ ಅವರನ್ನು ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ್ದು, ಮೊಹಮ್ಮದ್ ಅನೂಪ್ ಜತೆಗಿನ ಹಣಕಾಸು ವ್ಯವಹಾರದ ಆರೋಪದ ಮೇಲೆ ಬಂಧಿಸಿತ್ತು. 

NCBಯ ಬೆಂಗಳೂರು ವಲಯ 2020ರ ಸೆಪ್ಟೆಂಬರ್ ನಲ್ಲಿ ಸ್ಯಾಂಡಲ್‌ವುಡ್ ತಾರೆಗಳ ಮಾದಕ ವಸ್ತು ಬಳಕೆ ಪ್ರಕರಣವನ್ನು ಭೇದಿಸಲು ಬೆಂಗಳೂರು ನಗರ ಪೊಲೀಸರಿಗೆ ನೆರವು ನೀಡಿತ್ತು. ಪ್ರಕರಣದಲ್ಲಿ ಕೆಲವು ಪ್ರಮುಖ ಸ್ಯಾಂಡಲ್‌ವುಡ್ ನಟರು, ಈವೆಂಟ್ ಮ್ಯಾನೇಜರ್‌ಗಳು ಮತ್ತು ವಿವೇಕ್ ಒಬೆರಾಯ್ ಅವರ ಸಂಬಂಧಿ ಆದಿತ್ಯ ಆಳ್ವ ಅವರನ್ನು ಬಂಧಿಸಲಾಗಿತ್ತು. 

2020ರ ಜೂನ್‌ ತಿಂಗಳಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ನಂತರ ನಟಿ ರಿಯಾ ಚಕ್ರವರ್ತಿ ಬಂಧನ ಮತ್ತು ನಂತರದ ತನಿಖೆ ನಡೆಸಿದ ತಂಡದ ಭಾಗವಾಗಿ ಅಮಿತ್ ಘಾವಟೆ ಇದ್ದರು.


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp