ನಮ್ಮ ಮೆಟ್ರೋ ಬಗ್ಗೆ ದೂರುಗಳಿವೆಯೇ? ಇದಕ್ಕಾಗಿ ಬಂದಿದೆ ಹೊಸ ವೆಬ್ ಸೈಟ್!
ಪ್ರಯಾಣಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ರೈಲ್ವೆಯಲ್ಲಿ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಮಾದರಿಯಲ್ಲಿ ಮೇಟ್ರೋ ಪ್ರಯಾಣಿಕರೂ ಸಂಘ ಸ್ಥಾಪಿಸಬೇಕೆಂಬ ಸಲಹೆಯನ್ನು ಮಾಜಿ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಇತ್ತೀಚೆಗೆ ನೀಡಿದ್ದರು.
Published: 01st June 2022 03:56 PM | Last Updated: 01st June 2022 04:42 PM | A+A A-

ನಮ್ಮ ಮೆಟ್ರೋ ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಯಾಣಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ರೈಲ್ವೆಯಲ್ಲಿ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಮಾದರಿಯಲ್ಲಿ ಮೇಟ್ರೋ ಪ್ರಯಾಣಿಕರೂ ಸಂಘ ಸ್ಥಾಪಿಸಬೇಕೆಂಬ ಸಲಹೆಯನ್ನು ಮಾಜಿ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಇತ್ತೀಚೆಗೆ ನೀಡಿದ್ದರು.
ಈ ನಡುವೆ ಬಿಎಂಆರ್ ಸಿಎಲ್ ಇಂಥಹದ್ದೊಂದು ಸೌಲಭ್ಯವನ್ನು ಕಲ್ಪಿಸಿದ್ದು ಮಂಗಳವಾರ ಲೋಕಾರ್ಪಣೆಗೊಂಡ ವೆಬ್ ಸೈಟ್ ನಲ್ಲಿ ಪ್ರಯಾಣಿಕರ ದೂರುಗಳಿಗಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ.
ಐಟಿ, ಸಾಮಾಜಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ದಿವ್ಯ ಹೊಸೂರ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ವೆಬ್ ಸೈಟ್ ಗೆ ಚಾಲನೆ ನೀಡಲಾಗಿದ್ದು, ಇದರಲ್ಲಿ ಹಲವು ಪ್ರಯಾಣಿಕ ಸ್ನೇಹಿ ವೈಶಿಷ್ಟ್ಯಗಳಿವೆ. ಇದು ಮೊದಲ ಹಂತವಾಗಿದ್ದು ಇನ್ನೂ ಹಲವು ಸುಧಾರಣೆಗಳಾಗಲಿವೆ. ಪ್ರತಿ ನಿಲ್ದಾಣದಿಂದ ಮೊದಲ ರೈಲು ಹಾಗೂ ಕೊನೆಯ ರೈಲುಗಳ ಬಗ್ಗೆ, ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನೂ ಈ ವೆಬ್ ಸೈಟ್ ಮೂಲಕ ತಿಳಿಯಬಹುದಾಗಿದೆ.
ಪ್ರಯಾಣಿಕರು ಬಳಕೆ ಮಾಡಬಹುದಾದ www.bmrc.co.in ವೆಬ್ ಸೈಟ್ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ.