ಬೆಂಗಳೂರು: ಹಾಸಿಗೆ ಹಿಡಿದ ವೃದ್ಧನ ಮನೆ ಬಾಗಿಲಿಗೆ ಆಸ್ತಿಪತ್ರಗಳ ಹಸ್ತಾಂತರ!
ಡಾ. ಶಿವರಾಮ ಕಾರಂತ ಲೇಔಟ್ ನ ವಸ್ತುಸ್ಥಿತಿ ವರದಿ ನೀಡಲು ಸುಪ್ರೀಂಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ನೇತೃತ್ವದ ಸಮಿತಿ ಸದಸ್ಯರು, ಹಾಸಿಗೆ ಹಿಡಿದಿರುವ ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿ, ಅವರ ಆಸ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಸ್ತಾಂತರಿಸಿದ್ದಾರೆ.
Published: 02nd June 2022 04:08 PM | Last Updated: 02nd June 2022 07:14 PM | A+A A-

ಆಸ್ತಿಪತ್ರ ಪಡೆಯುತ್ತಿರುವ ವೃದ್ಧ ಗೋವಿಂದರಾಜು
ಬೆಂಗಳೂರು: ಡಾ. ಶಿವರಾಮ ಕಾರಂತ ಲೇಔಟ್ ನ ವಸ್ತುಸ್ಥಿತಿ ವರದಿ ನೀಡಲು ಸುಪ್ರೀಂ ಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ನೇತೃತ್ವದ ಸಮಿತಿ ಸದಸ್ಯರು, ಹಾಸಿಗೆ ಹಿಡಿದಿರುವ ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿ, ಅವರ ಆಸ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಸ್ತಾಂತರಿಸಿದ್ದಾರೆ.
ಇಲ್ಲಿಯವರೆಗೂ 253 ಆರ್ ಸಿ (ರೆಗ್ಯುಲರೈಸನ್ ಸರ್ಟಿಫಿಕೇಟ್) ಮನೆ ಮಾಲೀಕರುಗಳಿಗೆ ಸಮಿತಿ ನೀಡಿದೆ. ಬೆಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ವಡೇರಹಳ್ಳಿಯ ನಿವಾಸಿ ಹಿರಿಯ ನಾಗರಿಕ ಕೆ. ಗೋವಿಂದರಾಜು ಅವರ ಮನೆ ಬಾಗಿಲಿಗೆ ಹೋಗಿ ಆರ್ ಸಿ ನೀಡುವ ಮೂಲಕ ಮಾನವೀಯತೆ ಮೆರೆಯಲಾಗಿದೆ.
ಪಾರ್ಶ್ವವಾಯು ಕಾಯಿಲೆಯ ಕಾರಣದಿಂದಾಗಿ ತನ್ನ ತಂದೆ ಆಸ್ತಿ ಪ್ರಮಾಣ ಪತ್ರ ಸಂಗ್ರಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗೋವಿಂದರಾಜು ಅವರ ಪುತ್ರಿ ಈ ಹಿಂದೆಯೇ ತಿಳಿಸಿದ್ದಾಗಿ ಸಮಿತಿ ಸದಸ್ಯರು ಆಗಿರುವ ಬಿಡಿಎ ಮಾಜಿ ಕಮೀಷನರ್ ಜಯಕರ್ ಜೆರೊಮ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಮೆಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಎರಡು ವಾರಗಳಿಂದ ಬಿಡಿಎಗೆ ಸಂಬಂಧಿಸಿದ ಆರ್ ಸಿ ಪ್ರಮಾಣ ಪತ್ರಗಳನ್ನು ಮಾಲೀಕರಿಗೆ ನೀಡಲಾಗುತ್ತಿದೆ. ಬಿಡಿಎ ಮಾಜಿ ನೌಕರರು, ನ್ಯಾಯಾಂಗ ಅಥವಾ ಪೊಲೀಸರನ್ನೊಳಗೊಂಡ ಸಮಿತಿ ಸದಸ್ಯರಿಂದ ಆರ್ ಸಿ ಗಳನ್ನು ನೀಡಲಾಗುತ್ತಿದೆ ಎಂದು ಮತ್ತೋರ್ವ ಸಮಿತಿ ಸದಸ್ಯ. ಮಾಜಿ ಡಿಜಿಪಿ ಎಸ್. ಟಿ. ರಮೇಶ್ ಹೇಳಿದರು.
ಗೋವಿಂದರಾಜು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಕೆಲವರು ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿ ನೋಡಿದ ನಂತರ ಅವರ ಮನೆ ಬಾಗಿಲಿಗೆ ಪ್ರಮಾಣ ಪತ್ರಗಳನ್ನು ತಲುಪಿಸಲಾಗಿದೆ ಎಂದು ರಮೇಶ್ ವಿವರಿಸಿದರು.