ಡಿ ರೂಪ ಮೌದ್ಗೀಲ್ v/s ಬೇಳೂರು ರಾಘವೇಂದ್ರ ಶೆಟ್ಟಿ: ಸಿಎಸ್ ನಂತರ ಮುಖ್ಯಮಂತ್ರಿಗಳಿಗೆ ದೂರು

ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಡಿ ರೂಪಾ ಸಲ್ಲಿಸಿರುವ 5 ಪುಟಗಳ ಸ್ಪಷ್ಟಿಕರಣದಲ್ಲಿ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮಾಡಿರುವ ನಿರಾಧಾರ ಆರೋಪಗಳ ಕುರಿತು ಸ್ಪಷ್ಟಿಕರಣ ನೀಡಿದ್ದಾರೆ.

Published: 03rd June 2022 12:01 PM  |   Last Updated: 03rd June 2022 02:17 PM   |  A+A-


Roopa moudgil

ರೂಪಾ ಮೌದ್ಗಿಲ್

Online Desk

ಬೆಂಗಳೂರು: ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಡಿ ರೂಪಾ ಸಲ್ಲಿಸಿರುವ 5 ಪುಟಗಳ ಸ್ಪಷ್ಟಿಕರಣದಲ್ಲಿ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮಾಡಿರುವ ನಿರಾಧಾರ ಆರೋಪಗಳ ಕುರಿತು ಸ್ಪಷ್ಟಿಕರಣ ನೀಡಿದ್ದಾರೆ.

ಈ ಪತ್ರದಲ್ಲಿ ನಿಗಮದಲ್ಲಿ ನಡೆದ ಹಣದ ಪೋಲು, ಸಿಬ್ಬಂದಿ ನೇಮಕ, ಅವ್ಯವಹಾರಗಳ ಕುರಿತ ಅನೇಕ ಅಂಶಗಳನ್ನು ನಿಗಮದ ವ್ಯವಸ್ಥಾಪಕಿ ಡಿ ರೂಪ ಉಲ್ಲೇಖಿಸಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಡಿ ರೂಪ ವಿರುದ್ಧ ಅದೇ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.

ದೂರಿನ ಬಳಿಕ ಆರ್ ಟಿ ನಗರದ ಮುಖ್ಯಮಂತ್ರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ರಾಘವೇಂದ್ರ ಶೆಟ್ಟಿ, “ಮಾಧ್ಯಮಕ್ಕೆ ಫಸ್ಟ್ ಹೋಗಿದ್ದು ಅವ್ರು. ಏನು ಸತ್ಯಾಂಶ ಇದೆ ಅದರ ಬಗ್ಗೆ ತನಿಖೆ ಆಗಲಿ. ಆಧಾರ ರಹಿತ ಆರೋಪದ ಬಗ್ಗೆ ನಿತ್ಯ ಪತ್ರಿಕೆಗೆ ಕಳುಹಿಸ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಮುಜುಗರ ಆಗ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬೀದಿಗೆ ಬಂತು ಕರಕುಶಲ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕಿ- ಅಧ್ಯಕ್ಷರ ಪತ್ರ ಸಮರ: ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ!

ಐಪಿಎಸ್ ಆಫೀಸರ್ ಆದಂತವರು ಘನತೆಯಿಂದ ಇರಬೇಕು. ಆದರೆ ಆ ಹುದ್ದೆಗೆ ನೀವು ಅಪಚಾರ ಮಾಡ್ತಿದ್ದಾರೆ. ನಾನು ಸಿಎಂ ರನ್ನು ಭೇಟಿ ಮಾಡಿದ್ದೇನೆ. ಈ ಸಂಬಂಧ ತನಿಖೆ ಮಾಡಬೇಕು ಎಂದು ಕೇಳಿದ್ದೇನೆ. ನಿನ್ನೆ ಸಿಎಸ್ ರನ್ನು ಕೂಡ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅವ್ರು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಡಿ ರೂಪಾ ಮಾಡ್ತಿದ್ದಾರೆ ಎಂದು ಶೆಟ್ಟಿ ಆರೋಪಿಸಿದರು.

ನಿಗಮಕ್ಕೆ ಆಗಿರುವ ಬಗ್ಗೆ ತನಿಖೆ ಆಗಬೇಕು ಎಂಬುದೇ ನನ್ನ ಆಗ್ರಹವಾಗಿದ್ದು, ನನಗೆ ಕಿರುಕುಳ ಕೊಟ್ಟು, ಕೆಲಸ ಮಾಡಲು ಅಡ್ಡಿಪಡಿಸಿದ್ದಾರೆ. ದಿನಕ್ಕೆ ಆಫೀಸ್ ಗೆ ಬರೋದು ೨ ಗಂಟೆ, ವಾರಕ್ಕೆ ೨ ದಿನ. ಇವರಿಗೆ ಮಾಧ್ಯಮಕ್ಕೆ ಹೋಗಿ ಅಂತಾ ಯಾರು ಹೇಳಿದ್ರು ಎಂದು ಪ್ರಶ್ನಿಸಿದರು. ನಂದು ತನಿಖೆ ಮಾಡಲಿ, ಅವರದ್ದು ತನಿಖೆ ಮಾಡ್ಸಲಿ. ಸಿಎಂ ಬೊಮ್ಮಾಯಿ ಕೂಡ ಹಲವು ಮಾಹಿತಿ ಕೇಳಿದ್ರು. ನಾನು ಅದರ ಬಗ್ಗೆ ಸಂಪೂರ್ಣ ವಿವರವನ್ನು ಸಿಎಂ ಗೆ‌ ನೀಡಿದ್ದೇನೆ. ಅವ್ರು ತನಿಖೆ ಮಾಡ್ಸಲಿ, ಯಾರು ತಪ್ಪಿತಸ್ಥರು ಇದ್ದಾರೋ ಅವ್ರ ವಿರುದ್ದ ಕ್ರಮ ಆಗಲಿ ಎಂದು ರಾಘವೇಂದ್ರ ಶೆಟ್ಟಿ ಹೇಳಿದರು


Stay up to date on all the latest ರಾಜ್ಯ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp