ಕಲಬುರಗಿ: ಕಮಲಾಪುರ ಬಳಿ ಖಾಸಗಿ ಬಸ್ಸು ಅಪಘಾತ, ದಹನ; ಮೃತ ಪ್ರಯಾಣಿಕರ ಸಂಖ್ಯೆ 7ಕ್ಕೆ ಏರಿಕೆ

ಕಲಬುರಗಿಯ ಕಮಲಾಪುರ ತಾಲೂಕಿನ ಹೊರವಲಯದಲ್ಲಿ ಭೀಕರ ಬಸ್​ ದುರಂತ ಸಂಭವಿಸಿ ಮೃತಪಟ್ಟ ಪ್ರಯಾಣಿಕರ ಸಂಖ್ಯೆ 7ಕ್ಕೇರಿದೆ. ಇವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.

Published: 03rd June 2022 12:00 PM  |   Last Updated: 03rd June 2022 02:16 PM   |  A+A-


Private bus burnt after accident

ಸುಟ್ಟು ಕರಕಲಾದ ಖಾಸಗಿ ಬಸ್ಸು

The New Indian Express

ಕಲಬುರಗಿ/ಬೆಂಗಳೂರು: ಕಲಬುರಗಿಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಮಲಾಪುರ ಪಟ್ಟಣದ ಬಳಿ ಶುಕ್ರವಾರ ಬೆಳಗ್ಗೆ ಹೈದರಾಬಾದ್‌ಗೆ ತೆರಳುತ್ತಿದ್ದ ಗೋವಾ ಬಸ್ಸೊಂದು ಸರಕು ಸಾಗಣೆ ವಾಹನಕ್ಕೆ ಮುಖಾಮುಖಿ ಢಿಕ್ಕಿ ಹೊಡೆದು ನಂತರ ರಸ್ತೆ ಬದಿಯ ಸೇತುವೆಗೆ ಅಪ್ಪಳಿಸಿ ಉರುಳಿಬಿದ್ದ ಪರಿಣಾಮ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ಸೇತುವೆಗೆ ಅಪ್ಪಳಿಸಿದ ನಂತರ ಅದರ ಡೀಸೆಲ್ ಟ್ಯಾಂಕ್ ಹಾನಿಗೊಂಡಿದೆ ಮತ್ತು ಇದ್ದಕ್ಕಿದ್ದಂತೆ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸ್ ಮೂಲಗಳು ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ಬಸ್‌ನಲ್ಲಿ ಒಟ್ಟು 35 ಜನರಿದ್ದು, ಎಲ್ಲರೂ ತೆಲಂಗಾಣ ಮೂಲದವರು. ಒಂದೇ ಕುಟುಂಬದ 20 ಮಂದಿ ಸೀಟುಗಳನ್ನು ಬುಕ್ ಮಾಡಿದ್ದು, ಮತ್ತೊಬ್ಬರು 6 ಸೀಟುಗಳನ್ನು ಬುಕ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಗಾಯಗೊಂಡ ಸುಮಾರು 15 ಜನರನ್ನು ಕಲಬುರಗಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಅಪಘಾತದ ಸ್ಥಳದಲ್ಲಿ ಬೆಂಕಿಯ ಶಾಖದಿಂದಾಗಿ ಯಾವುದೇ ದೇಹಗಳನ್ನು ಮೇಲೆತ್ತಲಾಗಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಮೃತದೇಹಗಳನ್ನು ಪೊಲೀಸರು ಇನ್ನೂ ಗುರುತಿಸಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

PHOTOS: ಹುಬ್ಬಳ್ಳಿ ಬಳಿ ಟ್ರಕ್- ಬಸ್ ಮುಖಾಮುಖಿ ಢಿಕ್ಕಿ; 8 ಮಂದಿ ಸಾವು: ಅಪಘಾತದ ಭೀಕರತೆಯ ಫೋಟೋಗಳು

ಸರಕು ಸಾಗಣೆ ವಾಹನದ ಚಾಲಕನಿಗೆ ಗಾಯಗಳಾಗಿವೆ. ಬಸ್ ಚಾಲಕ ಸುರಕ್ಷಿತವಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಮೃತರು ಹೈದರಾಬಾದ್ ನಿಂದ ಗೋವಾಕ್ಕೆ ಪ್ರವಾಸ ಹೋಗಿದ್ದರು. ಹಿಂತಿರುಗಿ ಬರುವಾಗ ಈ ಅಪಘಾತ ಸಂಭವಿಸಿದೆ, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜಾಸ್ತಿ ಸ್ಪೀಡ್​ನಲ್ಲಿ ಹೋಗದಂತೆ ಚಾಲಕನಿಗೆ ಪ್ರಯಾಣಿಕರು ಹೇಳಿದ್ದರಂತೆ. ದಯವಿಟ್ಟು ಸ್ಪೀಡ್ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರೂ, ಪ್ರಯಾಣಿಕರ ಮಾತು ಕೇಳದೆ ಚಾಲಕ ಜೋರಾಗಿ ಬಸ್ಸು ಓಡಿಸುತ್ತಿದ್ದ. ಬಸ್ ಚಾಲಕನ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಾಗಲಕೋಟೆ: ನಿಂತಿದ್ದ ಕ್ಯಾಂಟರ್‌ಗೆ ವಾಹನ ಡಿಕ್ಕಿ, ನಾಲ್ವರ ದುರ್ಮರಣ

ಈ ಕುರಿತು ಹೇಳಿಕೆ ನೀಡಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು, ಖಾಸಗಿ ಬಸ್ಸು ಅಪಘಾತದಲ್ಲಿ 7 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಒಂದೇ ಕುಟುಂಬದ 35 ಮಂದಿ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿಯಿದೆ, ದುರ್ಘಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕಳುಸಿದ್ದು, ಸಂಪೂರ್ಣ ಮಾಹಿತಿ ಸಿಕ್ಕಿದ ನಂತರ ಮಾತನಾಡುತ್ತೇನೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.


Stay up to date on all the latest ರಾಜ್ಯ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp