ಬಾಗಲಕೋಟೆ: ನಿಂತಿದ್ದ ಕ್ಯಾಂಟರ್ಗೆ ವಾಹನ ಡಿಕ್ಕಿ, ನಾಲ್ವರ ದುರ್ಮರಣ
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕ್ಯಾಂಟರ್ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದ ಬಳಿ ನಡೆದಿದೆ.
Published: 03rd June 2022 08:55 AM | Last Updated: 04th June 2022 01:39 PM | A+A A-

ಅಪಘಾತ ನಡೆದ ಸ್ಥಳ
ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕ್ಯಾಂಟರ್ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದ ಬಳಿ ನಡೆದಿದೆ.
ಹುಬ್ಬಳ್ಳಿ-ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತ ನಾಲ್ವರು ಬೀಳಗಿ ಪಟ್ಟಣದವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಲಬುರಗಿ: ಕಮಲಾಪುರ ಬಳಿ ಭೀಕರ ಬಸ್ ದುರಂತ; ನಾಲ್ವರ ಸಜೀವ ದಹನ
ಮೃತರನ್ನು ರಾಮಸ್ವಾಮಿ, ರಜಾಕಸಾಬ್, ಮಲ್ಲಪ್ಪ ಹಾಗೂ ನಾಸೀರ್ ಎಂದು ಗುರ್ತಿಸಲಾಗಿದೆ. ಪಂಚರ್ ಆದ ಹಿನ್ನೆಲೆ ರಸ್ತೆ ಪಕ್ಕಕ್ಕೆ ಕ್ಯಾಂಟರ್ ನಿಲ್ಲಿಸಲಾಗಿತ್ತು. ಆದರೆ, ರಾತ್ರಿ 11 ಗಂಟೆ ಸುಮಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೀಳಗಿ ಪೋಲಿಸರ ಆಗಮಿಸಿ ಪರಿಶೀಲನೆ ನಡೆಸಿದರು.