
ಕೆಎಸ್ಆರ್ಟಿಸಿ
ದಕ್ಷಿಣ ಕನ್ನಡ: ತನಗೆ ಹೃದಯಾಘಾತವಾಗಿದೆ ಎಂಬ ಸುಳಿವು ಅರಿತ ಕೆಎಸ್ಆರ್ಟಿಸಿ ಬಸ್ ಚಾಲಕ ಕೂಡಲೇ ಬಸ್ ನಿಲ್ಲಿಸಿ ಸಂಭವನೀಯ ಅಪಘಾತ ತಪ್ಪಿಸಿದ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ಚಾಲಕ 45 ವರ್ಷದ ಮಲ್ಲಪ್ಪ ಸೋಮಪ್ಪನವರು ಸಮಯಪ್ರಜ್ಞೆ ಮೆರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿಂದ ಯಲ್ಲಾಪುರಕ್ಕೆ ತೆರಳುವ ಬಸ್ ಅನ್ನು ಅವರು ಚಾಲನೆ ಮಾಡುತ್ತಿದ್ದರು. ಹೃದಯಘಾತದ ಸುಳಿವು ಅರಿತ ಅವರು ಕೂಡಲೇ ಬಸ್ ಅನ್ನು ರಸ್ತೆಪಕ್ಕಕ್ಕೆ ನಿಲ್ಲಿಸಿದ್ದಾರೆ. ದುರಾದೃಷ್ಟವಶಾತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಓವರ್ ಟೇಕ್ ವಿಚಾರವಾಗಿ ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ಥಳಿಸಿದ್ದ ಆರೋಪಿ ಕಾಲಿಗೆ ಪೊಲೀಸ್ ಗುಂಡೇಟು!
ದೈಹಿಕ ಕಠಿಣ ಸಂದರ್ಭದಲ್ಲಿಯೂ ಸಮಯಪ್ರಜ್ಞೆ ಮೆರೆದ ಚಾಲಕ ಮಲ್ಲಪ್ಪ ಅವರ ಸಾವಿಗೆ ಪ್ರಯಾಣಿಕರು ಕಂಬನಿ ಮಿಡಿದಿದ್ದಾರೆ. ಈ ವಿಷಯ ತಿಳಿದ ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರು ಸಂತಾಪ ಸೂಚಿಸಿದ್ದಾರೆ. ಈ ಚಾಲಕರು ಮುಂದಾಗಲಿದ್ದ ಭಾರೀ ಅನಾಹುತವನ್ನು ತಪ್ಪಿಸುವ ಮೂಲಕ ಕರ್ತವ್ಯ ನಿಷ್ಠೆ ಮೆರದಿರುವುದು ಹೆಮ್ಮೆಯ ಸಂಗತಿ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮಲ್ಲಪ್ಪ ಸೋಮಪ್ಪನವರ (45) ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿಂದ ಯಲ್ಲಾಪುರಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಹೃದಯಾಘಾತದಿಂದ ಅಸುನಿಗಿರುವ ಸುದ್ದಿ ತಿಳಿದು ಆಘಾತವಾಗಿದೆ. ಬಸ್ ಚಾಲಕ ಮಲ್ಲಪ್ಪ ಅವರು ಹೃದಯಾಘಾತದ ಸುಳಿವು ಅರಿತು, ಬಸ್ ನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ, 1/2 @KSRTC_Journeys
— B Sriramulu (@sriramulubjp) June 4, 2022