200-250 ರು. ಟೋಲ್ ಕಟ್ಟಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ನಲ್ಲಿ ಸಂಚರಿಸಲು ಸಿದ್ಧರಾಗಿ!

ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ 2022 ರ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಹೀಗಾಗಿ ಹಣ ಪಾವತಿ ಮಾಡಲು ಚಾಲಕರೇ ಸಿದ್ದರಾಗಿ.

Published: 09th June 2022 02:01 PM  |   Last Updated: 09th June 2022 02:14 PM   |  A+A-


Mysuru Express Corridor

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್

The New Indian Express

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ 2022 ರ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಹೀಗಾಗಿ ಹಣ ಪಾವತಿ ಮಾಡಲು ಚಾಲಕರೇ ಸಿದ್ದರಾಗಿ.

ಬೆಂಗಳೂರು-ಮೈಸೂರು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಈಗಿರುವ ಮೂರು ಗಂಟೆಗಳಿಂದ 75 ನಿಮಿಷಗಳಿಗೆ ಇಳಿಸಲಾಗಿದೆ, ಅದಕ್ಕಾಗಿ ವಾಹನ ಚಾಲಕರು ಎರಡು ಸ್ಥಳಗಳಲ್ಲಿ 200 ರಿಂದ 250 ರೂ. ಗಳವರೆಗೆ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ಗೆ ಬೆಂಗಳೂರು ಸಮೀಪದ ಕುಂಬಳಗೋಡು ಬಳಿಯ ಕಣಮಿಣಿಕೆ ಹಾಗೂ ಶ್ರೀರಂಗಪಟ್ಟಣ ಸಮೀಪದ ಗಣಂಗೂರು ಬಳಿ ಮತ್ತೊಂದು ಟೋಲ್ ಗೇಟ್ ಇರಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾರ್ಗಸೂಚಿಗಳ ಪ್ರಕಾರ, ಪ್ರತಿ 60 ಕಿಮೀಗೆ ಟೋಲ್ ಇರಬೇಕು, ಸರಾಸರಿ ಶುಲ್ಕ ಪ್ರತಿ ಕಿಮೀಗೆ 1.5 ರಿಂದ 2 ರೂ ನಿಗದಿ ಪಡಿಸಲಾಗಿದೆ.

ಹೆದ್ದಾರಿಯಲ್ಲಿನ ಲೇನ್‌ಗಳ ಸಂಖ್ಯೆ, ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳ ಸಂಖ್ಯೆಗಳ ಆಧಾರದ ಮೇಲೆ ಟೋಲ್ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ಕಾರಿಡಾರ್ ಒಂಬತ್ತು ಪ್ರಮುಖ ಸೇತುವೆಗಳು, 44 ಚಿಕ್ಕ ಸೇತುವೆಗಳು, ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿದೆ.

ಟೋಲ್ ಶುಲ್ಕವು ರೂ 200 ರಿಂದ ರೂ 250 ರ ನಡುವೆ ಇರುತ್ತದೆ. ಆದರೆ 75 ನಿಮಿಷಗಳಲ್ಲಿ ಮೈಸೂರು ತಲುಪಬಹುದು, ಸಮಯ ಉಳಿಸಬಹುದು. ಇದರಿಂದ ಮೈಸೂರಿನಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ, ಬೆಂಗಳೂರಿಗೆ ಸ್ವಲ್ಪ ಹೊರೆ ಕಡಿಮೆಯಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರಾಜ್ಯದ ರಾಜಧಾನಿ ಮತ್ತು ಮೈಸೂರು ನಡುವಿನ ಅಂತರವು ಸುಮಾರು 140 ಕಿ.ಮೀ. ಇದೆ. ಹೆದ್ದಾರಿ ತೆರೆದ ನಂತರವೇ ನಿಖರವಾದ ಟೋಲ್ ಶುಲ್ಕವನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು. ಹಿಂದೆ ನಿಗದಿ ಪಡಿಸಿದ ವೇಳಾಪಟ್ಟಿಯಂತೆ, ಬೆಂಗಳೂರಿನಿಂದ ಮದ್ದೂರು ಬಳಿಯ ನಿಡಘಟ್ಟದವರೆಗಿನ ರಸ್ತೆಯನ್ನು ಜುಲೈನಲ್ಲಿ ಹಾಗೂ ಉಳಿದ ರಸ್ತೆಯನ್ನು ಅಕ್ಟೋಬರ್‌ನಲ್ಲಿ ತೆರೆಯಬೇಕಿತ್ತು ಎಂದು ತಿಳಿಸಿದ್ದಾರೆ.

117 ಕಿಮೀ ಹೆದ್ದಾರಿಯು ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್‌ವರೆಗೆ ವ್ಯಾಪಿಸಿದೆ. 2014 ರಲ್ಲಿ ಯೋಜನೆಯ ಅಂದಾಜು ವೆಚ್ಚ ಸುಮಾರು 4,100 ಕೋಟಿ ರೂ. ಗಳಷ್ಟಿತ್ತು ಅದು ನಂತರ ದುಪ್ಪಟ್ಟಾಯಿತು.


Stay up to date on all the latest ರಾಜ್ಯ news
Poll
Ashok Gehlot-Shashi Tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಅಶೋಕ್ ಗೆಹ್ಲೋಟ್
ಶಶಿ ತರೂರ್

Comments(2)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

 • Desh Bandhu

  One can travel to Mysore by Train at 50% of this Toll Charges, Very unfortunate hear that this New Express is only going to be for rich people at the cost of land acquisition from poor farmers !!
  3 months ago reply
  • Keshav

   @Desh Bandhu, At constant speed of over 80km/hr, you will save almost 2 liters worth of fuel. Bonus 50% time reduction. Time is also money. Dont go by the face value of the cost of travel.
   3 months ago reply
flipboard facebook twitter whatsapp