ವಾಯು ಮಾಲಿನ್ಯಕ್ಕೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಕಾರಣ: ಐಐಎಸ್‌ಸಿ ಅಧ್ಯಯನ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಇತ್ತೀಚಿನ ಅಧ್ಯಯನವು ಮಹಿಳೆಯರಿಗಿಂತ ಪುರುಷರೇ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕಾರಣರಾಗುತ್ತಾರೆ ಎಂದು ತೋರಿಸಿದೆ. ಜರ್ನಲ್ ಆಫ್ ಟ್ರಾನ್ಸ್‌ಪೋರ್ಟ್ ಜಿಯಾಗ್ರಫಿಯಲ್ಲಿ ಇದನ್ನು ಪ್ರಕಟಿಸಲಾಗಿದೆ.

Published: 11th June 2022 12:45 PM  |   Last Updated: 11th June 2022 03:16 PM   |  A+A-


Representational image

ಸಾಂದರ್ಭಿಕ ಚಿತ್ರ

The New Indian Express

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಇತ್ತೀಚಿನ ಅಧ್ಯಯನವು ಮಹಿಳೆಯರಿಗಿಂತ ಪುರುಷರೇ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕಾರಣರಾಗುತ್ತಾರೆ ಎಂದು ತೋರಿಸಿದೆ. ಜರ್ನಲ್ ಆಫ್ ಟ್ರಾನ್ಸ್‌ಪೋರ್ಟ್ ಜಿಯಾಗ್ರಫಿಯಲ್ಲಿ ಇದನ್ನು ಪ್ರಕಟಿಸಲಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ, ಹೆಚ್ಚಿನ-ಆದಾಯದ ಗುಂಪುಗಳಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಅಧಿಕವಾಗಿದೆ. ಕಡಿಮೆ-ಆದಾಯದ ಮತ್ತು ಕಡಿಮೆ-ಮಧ್ಯಮ-ಆದಾಯದ ಗುಂಪುಗಳಲ್ಲಿ PM2.5 ಹೊರಸೂಸುವಿಕೆಗಳು (2.5 ಮೈಕ್ರಾನ್‌ಗಳಿಗಿಂತ ಕಡಿಮೆ ಕಣಗಳ ಹೊರಸೂಸುವಿಕೆ) ಕಡಿತವು ಅಧಿಕವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.

ಅತಿ ಹೆಚ್ಚು ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಕ್ರಮವನ್ನು ಅನುಸರಿಸುವವರು ಮಹಿಳೆಯರು. “ಮಹಿಳೆಯರು ತಮ್ಮ ಆದಾಯದ ಮಟ್ಟಗಳು ಹೆಚ್ಚಾದಂತೆ ತಮ್ಮ ಸಾರಿಗೆ ವಿಧಾನವನ್ನು ನಡಿಗೆಯಿಂದ ಪ್ಯಾರಾಟ್ರಾನ್ಸಿಟ್‌ಗೆ ಸಾರ್ವಜನಿಕ ಸಾರಿಗೆ ಮತ್ತು ವೈಯಕ್ತಿಕ ವಾಹನಗಳಿಗೆ ಬದಲಾಯಿಸುತ್ತಾರೆ. ಆದಾಗ್ಯೂ, ಪುರುಷರು ಮಹಿಳೆಯರಿಗಿಂತ ವೈಯಕ್ತಿಕ ಸಾರಿಗೆಯನ್ನು ಹೆಚ್ಚು ಬಳಸುತ್ತಾರೆ. ಪುರುಷರು ವಾಹನಗಳನ್ನು ಹೆಚ್ಚು ಬಳಸುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಇದನ್ನೂ ಓದಿ: 2019 ರಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಅಕಾಲಿಕ ಮರಣ ದಾಖಲಾಗಿದ್ದು ಭಾರತದಲ್ಲಿ!

ಸಾರಿಗೆ ವೆಚ್ಚಗಳು ಹೆಚ್ಚಿನ ಆದಾಯದ ಪುರುಷ ಗುಂಪುಗಳ ಮೇಲೆ ಕಡಿಮೆ ಪರಿಣಾಮವನ್ನು ತೋರಿಸಿವೆ. ಆದ್ದರಿಂದ, ಹೆಚ್ಚಿನ ಆದಾಯದ ಪುರುಷ ಗುಂಪುಗಳಿಂದ ಹೆಚ್ಚಿನ ತಗ್ಗಿಸುವಿಕೆಯ ಸಾಮರ್ಥ್ಯವನ್ನು ಸಾಧಿಸಲು, ಸಾರಿಗೆ ವೆಚ್ಚಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹಕಗಳು ಹೆಚ್ಚಾಗಿರಬೇಕು ಎಂದು ಟ್ರಾನ್ಸ್‌ಪೋರ್ಟೇಶನ್ ಸಿಸ್ಟಮ್ ಇಂಜಿನಿಯರಿಂಗ್, ಕನ್ವೀನರ್, ಐಐಎಸ್‌ಸಿ ಸಸ್ಟೈನಬಲ್ ಟ್ರಾನ್ಸ್‌ಪೋರ್ಟೇಶನ್ (ಐಎಸ್‌ಟಿ) ಲ್ಯಾಬ್, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಐಐಎಸ್‌ಸಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಮಹಿಳೆಯರಿಂದ ನಡಿಗೆ ಹೆಚ್ಚು, ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚು: ಹೆಚ್ಚಿನ ಆದಾಯದ ಗುಂಪಿನ ಜನರು ಸಮಯಕ್ಕೆ ಹೆಚ್ಚಿನ ಮೌಲ್ಯ ನೀಡುವುದರಿಂದ ಸಾರಿಗೆ ವೆಚ್ಚಗಳು ಕಡಿಮೆ ಪರಿಣಾಮ ಬೀರುತ್ತವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಹೆಚ್ಚು ಎನ್ನುತ್ತಾರೆ ವರ್ಮಾ. ಸೇವೆಗಳು ಆಕರ್ಷಕ ಮತ್ತು ವಿಶ್ವಾಸಾರ್ಹವಾಗಿದ್ದರೆ ಹೆಚ್ಚಿನ ಆದಾಯದ ಗುಂಪುಗಳ ಮಹಿಳೆಯರು ಮೆಟ್ರೋಗೆ ಬದಲಾಯಿಸಲು ಹೆಚ್ಚು ಒಲವು ತೋರುತ್ತಾರೆ. ಕಡಿಮೆ ಆದಾಯದವರು ಬಸ್ ಗಳನ್ನು ಅವಲಂಬಿಸುತ್ತಾರೆ. ಇನ್ನು ಹಲವು ಸಂದರ್ಭಗಳಲ್ಲಿ ಮಹಿಳೆಯರು ನಡೆಯುತ್ತಾರೆ. 

ಹೆಚ್ಚಿನ ಆದಾಯದ ಜನರು ಸಾರ್ವಜನಿಕ ಸಾರಿಗೆಯನ್ನು ಆಯ್ಕೆಮಾಡುವಲ್ಲಿ ಪ್ರಯಾಣದ ಸಮಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 


Stay up to date on all the latest ರಾಜ್ಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp