
ಸಂಗ್ರಹ ಚಿತ್ರ
ತುಮಕೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
21 ವರ್ಷದ ಕವಿತಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದು, ಕವಿತಾ ತುಮಕೂರು ನಗರದ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
#Tumakuru Kavitha(21), final year BE Civil student of Siddhartha Engineering College ends her life in her hostel room. She hailed from #Mysuru. @AshwiniMS_TNIE@XpressBengaluru@MYSURU_PAGE @Karthiknayaka pic.twitter.com/tsjhTEcx4f
— Devaraj Hirehalli Bhyraiah (@swaraj76) June 11, 2022
ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕವಿತಾ, ಕಾಲೇಜು ಹಾಸ್ಟೆಲ್ ನ ಸಂಗಮಿತ್ರ ಬ್ಲಾಕ್ ನಲ್ಲಿ ವಾಸವಾಗಿದ್ದರು ಎನ್ನಲಾಗಿದ್ದು, ರಾತ್ರಿ ಸುಮಾರು 12.30ರ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೈಸೂರು ಮೂಲದವರಾಗಿರುವ ಕವಿತಾ ಪೋಷಕರಿಗೆ ಸಾವಿನ ವಿಷಯ ತಿಳಿಸಲಾಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕವಿತಾ ಆತ್ಮಹತ್ಯೆಹೆ ನಿಖರ ಕಾರಣ ತಿಳಿದು ಬಂದಿಲ್ಲ. ಕವಿತಾ ಮೃತದೇಹವನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ.
ಇದನ್ನೂ ಓದಿ: ಬರಿಗಾಲಲ್ಲಿ ಗುಡ್ಡವನ್ನೇರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆ ರಕ್ಷಿಸಿದ ಕೇರಳ ಪೊಲೀಸ್ ಅಧಿಕಾರಿ!
ಕವಿತಾ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಫೊಲೀಸರು ಭೇಟಿ ನೀಡಿದ್ದು, ಆತ್ಮಹತ್ಯೆ ಸಂಭವಿಸಿದ ಕೊಠಡಿಯಲ್ಲಿ ಡೆತ್ ನೋಟ್ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕವಿತಾ ಗೆಳತಿಯರು ಮತ್ತು ಹಾಸ್ಟೆಲ್ ಸಿಬ್ಬಂದಿಯಿಂದಲೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.