
ಬೆಂಗಳೂರು ಪ್ರೆಸ್ ಕ್ಲಬ್
ಬೆಂಗಳೂರು: ಪ್ರತಿಷ್ಟಿತ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಅಧ್ಯಕ್ಷರಾಗಿ ಆರ್, ಶ್ರೀಧರ್, ಉಪಾಧ್ಯಕ್ಷರಾಗಿ ಆನಂದ್ ಬೈದನಮನೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಪ್ಪ, ಕಾರ್ಯದರ್ಶಿಯಾಗಿ ದೊಡ್ಡಬೊಮ್ಮಯ್ಯ, ಸಹಕಾರ್ಯದರ್ಶಿಯಾಗಿ ಮಹಂತೇಶ್ ಅವರು ಆಯ್ಕೆಗೊಂಡಿದ್ದಾರೆ.
ಇನ್ನು ಖಜಾಂಚಿ ಹುದ್ದೆಗೆ ಮೋಹನ್, ಸದಸ್ಯರಾಗಿ ಗಣೇಶ್, ಅಲ್ಪ್ರೈಡ್, ರೋಹಿಣಿ, ಮುನಿರಾಮೇಗೌಡ, ಯಾಸಿರ್, ಸೋಮಣ್ಣ ಹಾಗೂ ಮಹಿಳಾ ಸದಸ್ಯರಾಗಿ ಮಿನಿ ತೇಜಸ್ವಿನಿ ಆಯ್ಕೆಯಾಗಿದ್ದಾರೆ.