ಅಕ್ರಮ ನೀರು ಬಳಕೆ: 2,806 ಪ್ರಕರಣ ದಾಖಲಿಸಿದ ಬಿಡಬ್ಲ್ಯೂಎಸ್ ಎಸ್ ಬಿ

ಸಾರ್ವಜನಿಕರಿಂದ ನೀರು ಪೋಲು ಅಥವಾ ದುರ್ಬಳಕೆ ಮತ್ತು ಕಾವೇರಿ ನೀರಿನ ಅಕ್ರಮ ಬಳಕೆ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆಯೊಂದಿಗೆ ಒಟ್ಟು 2,806 ಎಫ್ ಐಆರ್ ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ ಎಸ್ ಬಿ) ದಾಖಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕರಿಂದ ನೀರು ಪೋಲು ಅಥವಾ ದುರ್ಬಳಕೆ ಮತ್ತು ಕಾವೇರಿ ನೀರಿನ ಅಕ್ರಮ ಬಳಕೆ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆಯೊಂದಿಗೆ ಒಟ್ಟು 2,806 ಎಫ್ ಐಆರ್ ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ ಎಸ್ ಬಿ) ದಾಖಲಿಸಿದೆ. ಇವುಗಳು ಜನವರಿ 2020 ರಿಂದ ಸುಮಾರು ಎರಡೂವರೆ ವರ್ಷಗಳಲ್ಲಿ ಹಾಕಲಾಗಿರುವ ಪ್ರಕರಣಗಳಾಗಿವೆ.

ಶೇ. 70 ರಷ್ಟು ಜನರು ದಂಡದ ಮೊತ್ತವನ್ನು ಪಾವತಿಸುವ ಮೂಲಕ ತಮ್ಮ ಅಕ್ರಮ ಸಂಪರ್ಕಗಳನ್ನು ಕ್ರಮಬದ್ಧಗೊಳಿಸಿದ್ದಾರೆ ಎಂದು ಬಿಡಬ್ಲೂಎಸ್ ಎಸ್ ಬಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್ ಸುಧೀರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ನಗರದಾದ್ಯಂತ 56,000 ಅನಧಿಕೃತ ನೀರಿನ ಸಂಪರ್ಕಗಳನ್ನು ಸಹ ಬಿಡಬ್ಲೂಎಸ್ ಎಸ್ ಬಿ ಪತ್ತೆ ಹಚ್ಚಿದೆ. ಇದಲ್ಲದೇ 5,156 ಬೈಪಾಸ್ ಸಂಪರ್ಕಗಳು ಇವೆ. ಇವುಗಳಿಗೆ ಕಾನೂನುಬದ್ಧವಾಗಿ ನೀರಿನ ಸಂಪರ್ಕ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಅಕ್ರಮ ಚಟುವಟಿಕೆಗಳ ಮೇಲಿನ ಈ ಕ್ರಮವು ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಶೇ. 37 ರಿಂದ 31 ಕ್ಕೆ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ನಗರಕ್ಕೆ ಪ್ರತಿದಿನ ಹೆಚ್ಚುವರಿ 197 ಮಿಲಿಯನ್ ಲೀಟರ್  ನೀರನ್ನು  ಉತ್ಪಾದಿಸಲು ಮಂಡಳಿಗೆ ಸಹಾಯ ಮಾಡಿದೆ ಎಂದು ಅವರು ವಿವರಿಸಿದ್ದಾರೆ. 

ಬಿಡಬ್ಲ್ಯೂಎಸ್‌ಎಸ್‌ಬಿ ಪ್ರತಿದಿನ ಟಿಕೆ ಹಳ್ಳಿಯಿಂದ ನಗರಕ್ಕೆ 1, 450 ಮಿಲಿಯನ್ ಲೀಟರ್ ನೀರನ್ನು ಪಂಪ್ ಮಾಡುತ್ತದೆ, ಆದರೆ ಅದರಲ್ಲಿ ಮೂರನೇ ಒಂದು ಭಾಗ ಸಾರ್ವಜನಿಕರಿಂದ ಅಕ್ರಮ, ಸೋರಿಕೆ ಮತ್ತು ಇತರ ಕಾರಣಗಳಿಂದ ವ್ಯರ್ಥವಾಗುತ್ತಿದೆ. ಅಕ್ರಮ ಸಂಪರ್ಕಕ್ಕೆ ಕಡಿವಾಣ ಹಾಕಿದ್ದರಿಂದ ಆದಾಯ ಸುಧಾರಿಸಿದೆ. ನಾವು ನೀರು ಮತ್ತು ನೈರ್ಮಲ್ಯ ಶುಲ್ಕಗಳಿಗೆ ಮಾಸಿಕ ಆದಾಯವಾಗಿ 100 ಲಕ್ಷ (1 ಕೋಟಿ ರೂ.) ಸಂಗ್ರಹಿಸುತ್ತಿದ್ದರೆ, ಈಗ ಅದು 110 ಲಕ್ಷ (ರೂ. 1.1 ಕೋಟಿ) ಆಗಿದೆ ಎಂದು ಸುಧೀರ್  ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com