ಕೋಡಿ ಬೀಚ್ ನಲ್ಲಿ ಟಾರ್ ಬಾಲ್'ಗಳು ಪತ್ತೆ: ಸ್ಥಳೀಯರು, ಪರಿಸರವಾದಿಗಳ ಆತಂಕ

ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಕಡಲತೀರದಲ್ಲಿ ಪ್ರದೇಶಗಲ್ಲಿ ಟಾರ್ ಚೆಂಡುಗಳು ಪತ್ತೆಯಾಗಿದ್ದು, ಈ ಬೆಳವಣಿಗೆಗೆ ಸ್ಥಳೀಯರು ಹಾಗೂ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಟಾರ್ ಬಾಲ್
ಟಾರ್ ಬಾಲ್

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಕಡಲತೀರದಲ್ಲಿ ಪ್ರದೇಶಗಲ್ಲಿ ಟಾರ್ ಚೆಂಡುಗಳು ಪತ್ತೆಯಾಗಿದ್ದು, ಈ ಬೆಳವಣಿಗೆಗೆ ಸ್ಥಳೀಯರು ಹಾಗೂ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಮುದ್ರದ ನೀರು ಎಣ್ಣೆಮಯವಾಗುತ್ತಿರುವುದು ಟಾರ್ ಬಾಲ್ ಗಳ ಪತ್ತೆಯಿಂದ ಕಂಡು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ವೃತ್ತಿಯಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಹಾಗೂ ಪರಿಸರ ಹೋರಾಟಗಾರನಾಗಿರುವ ಡಾ.ದುರ್ಗಾಪ್ರಸಾದ್ ಹೆಗಡೆ ಅವರು ಮಾತನಾಡಿ, ಕೋಡಿ ಕಡಲತೀರದಲ್ಲಿ ಸಮುದ್ರದ ನೀರು ಎಣ್ಣೆ ಮಿಶ್ರಿತವಾಗಿರುವುದು ಆತಂಕದ ವಿಚಾರವಾಗಿದೆ. ಬೀಚ್‌ಗೆ ಭೇಟಿ ನೀಡುವ ಕೆಲವು ಪ್ರವಾಸಿಗರಲ್ಲಿ ಚರ್ಮದ ಸಮಸ್ಯೆ ಮತ್ತು ತುರಿಕೆ  ಅನುಭವಿಸುತ್ತಿದ್ದಾರೆ. ಇದರಿಂದ ಸಮುದ್ರ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಹೇಳಿದ್ದಾರೆ.

ಕುಂದಾಪುರ ವಿಭಾಗದ ಡಿಸಿಎಫ್ ಆಶಿಶ್ ರೆಡ್ಡಿ ಎಂವಿ ಅವರು ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಸಂರಕ್ಷಣಾ ಕಾಯ್ದೆಯಡಿ ಈ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬೆಳವಣಿಗೆಯನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com