ಹಿಂದೂ ದೇವರಿಗೆ ಅಪಮಾನ ಆರೋಪ: ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ಮನೆ ಮೇಲೆ ದಾಳಿ

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದಿಂದ ಅಪರಿಚಿತ ದುಷ್ಕರ್ಮಿಗಳು ರಾಜ್ಯ ಕಾಂಗ್ರೆಸ್ ನ ಐಟಿ ಸೆಲ್ ಕಾರ್ಯದರ್ಶಿ ವಿ. ಶೈಲಜಾ ಅಮರನಾಥ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶೈಲಜಾ ಅಮರನಾಥ್
ಶೈಲಜಾ ಅಮರನಾಥ್

ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದಿಂದ ಅಪರಿಚಿತ ದುಷ್ಕರ್ಮಿಗಳು ರಾಜ್ಯ ಕಾಂಗ್ರೆಸ್ ನ ಐಟಿ ಸೆಲ್ ಕಾರ್ಯದರ್ಶಿ ವಿ. ಶೈಲಜಾ ಅಮರನಾಥ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶೈಲಜಾ ಅವರ ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು, ಕಿಟಕಿ ಗಾಜುಗಳನ್ನು ಒಡೆದು ಗೋಡೆಗಳಿಗೆ ಕಪ್ಪು ಮಸಿ ಎರಚಿದ್ದಾರೆ. ಈ ಸಂಬಂಧ ವಕೀಲರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶೈಲಜಾ ಅವರ ನಿವಾಸಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಹಿಂದೂ ದೇವರನ್ನು ಕ್ಲಬ್‌ ಹೌಸ್‌ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿ  ಶೈಲಜಾ ಅಮರನಾಥ್‌ ಸೇರಿದಂತೆ ನಾಲ್ವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಪುತ್ತೂರಿನ ಹಿಂದುತ್ವ ಸಂಘಟನೆಗಳ ಮುಖಂಡರು ನಿನ್ನೆ ಮಧ್ಯಾಹ್ನ ಈ ಬಗ್ಗೆ ದೂರು ದಾಖಲಿಸಿದ್ದಾರೆ.

 ಜೂ. 16 ರಂದು ಕ್ಲಬ್ ಹೌಸ್‌ನ ಚರ್ಚೆಯೊಂದರಲ್ಲಿ  ಶ್ರೀರಾಮ, ಹನುಮಾನ್ ಮತ್ತು ಸೀತಾ ದೇವತೆ ಬಗ್ಗೆ  ಶೈಲಜಾ ಅಮರನಾಥ್ ನೀಡಿರುವ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ತೀವ್ರವಾಗಿ ಖಂಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com