ವೈಮಾನಿಕ ಮಾರ್ಗದಲ್ಲೇ ಪ್ರಧಾನಿ ಮೋದಿ ಸಂಚರಿಸಿದರೂ ನಗರದಲ್ಲಿ ತಪ್ಪಲಿಲ್ಲ ಸಂಚಾರ ದಟ್ಟಣೆ ಸಮಸ್ಯೆ!

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ಪರ್ಯಾಯ ರಸ್ತೆಗಳಲ್ಲಿ ಸೋಮವಾರ ಸಂಚಾರ ದಟ್ಟಣೆ ಕಂಡು ಬಂದಿತ್ತು.
ಮೈಸೂರು ರಸ್ತೆಯಲ್ಲಿ ಕಂಡು ಬಂದಿದ್ದ ಸಂಚಾರ ದಟ್ಟಣೆ.
ಮೈಸೂರು ರಸ್ತೆಯಲ್ಲಿ ಕಂಡು ಬಂದಿದ್ದ ಸಂಚಾರ ದಟ್ಟಣೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ಪರ್ಯಾಯ ರಸ್ತೆಗಳಲ್ಲಿ ಸೋಮವಾರ ಸಂಚಾರ ದಟ್ಟಣೆ ಕಂಡು ಬಂದಿತ್ತು.

ನಗರದಲ್ಲಿ ಪ್ರಯಾಣಕ್ಕಾಗಿ ಮೋದಿಯವರು ವೈಮಾನಿಕ ಮಾರ್ಗವನ್ನು ಬಳಸಿದ್ದರು. ಈ ವೇಳೆ ಸೇನಾ ಹೆಲಿಕಾಪ್ಟರ್ ಬಳಕೆ ಮಾಡಿದ್ದರು. ನಿಯಮಗಳ ಅನುಸಾರ ಪ್ರಧಾನಿ ಮೋದಿಯವರು ಸಂಚರಿಸುವ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇತರೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಎದುರಾಗಿತ್ತು.

ಕೆಲ ರಸ್ತೆಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ನಿಂತ ಸ್ಥಳದಲ್ಲಿಯೇ ನಿಂತಿರುವುದು ಕಂಡು ಬಂದಿತ್ತು.  ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಮೈಸೂರು ರಸ್ತೆ, ಹೆಬ್ಬಾಳ, ಥಣಿಸಂದ್ರ ಮುಖ್ಯರಸ್ತೆ, ಮೇಖ್ರಿ ವೃತ್ತ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಂಠೇಗೌಡ ಮಾತನಾಡಿ, ಕೆಲವೆಡೆಯಷ್ಟೇ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಇದನ್ನು ಹೊರತುಪಡಿಸಿದರೆ ನಗರದಾದ್ಯಂತ ವಾಹನಗಳ ಸಂಚಾರ ಸುಗಮವಾಗಿತ್ತು. ಸಂಚಾರ ದಟ್ಟಣೆ ಎದುರಾಗಿದ್ದ ರಸ್ತೆಗಳಲ್ಲಿ ಕೆಲಕಾಲ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಪೊಲೀಸರು ಸಂಚಾರ ದಟ್ಟಣೆ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಮೈಸೂರು ರಸ್ತೆ ಹೊರತು ಪಡಿಸಿ ಇತರೆಡೆ ವಾಹನ ಸಂಚಾರ ಸಹಜವಾಗಿತ್ತು ಎಂದು ಹೇಳಿದ್ದಾರೆ.

ಮೆಟ್ರೋ ಸಂಚಾರದಲ್ಲೂ ವ್ಯತ್ಯಯ
ಪ್ರಧಾನಿಯವರ ಬೆಂಗಾವಲು ಪಡೆ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಪರ್ಪಲ್ ಲೈನ್‌ನಲ್ಲಿ ಮೆಟ್ರೋ ರೈಲುಗಳು ಎರಡು ಬಾರಿ ಸ್ಥಗಿತಗೊಂಡಿದ್ದವು.

ಈ ಮಾರ್ಗದಲ್ಲಿ ಮೆಟ್ರೋ ಕಾರಿಡಾರ್ ಎತ್ತರದ ಮಟ್ಟದಲ್ಲಿರುವುದರಿಂದ ಮತ್ತು ರೈಲುಗಳು ಮೇಲೆ ಓಡುತ್ತಿರುವ ಕಾರಣ, ಇದು ಪ್ರಧಾನಿಯ ಸುರಕ್ಷತೆಗೆ ಅಪಾಯವೆಂದು ಪರಿಗಣಿಸಲಾಗುತ್ತದೆ. ಪ್ರಧಾನಮಂತ್ರಿಯವರು ಬೇಸ್ ವಿಶ್ವವಿದ್ಯಾಲಯಕ್ಕೆ ಹೋದಾಗ ಮತ್ತು ಅಲ್ಲಿಂದ ಹಿಂದಿರುಗುವಾಗ ನಾವು ಎರಡು ಬಾರಿ ರೈಲುಗಳ ಸಂಚಾರವನ್ನು ನಿಲ್ಲಿಸಿದ್ದೆವು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಎಂಡಿ ಅಂಜುಮ್ ಪರ್ವೇಜ್ ಅವರು ಹೇಳಿದ್ದಾರೆ.

ಸಂಚಾರ ಪೊಲೀಸ್ ಹಾಗೂ ಬಿಎಂಆರ್'ಸಿಎಲ್ ನಡುವಿನ ಹೊಂದಾಣಿಕೆಯೊಂದಿಗೆ ಭದ್ರತಾ ಕ್ರಮಗಳ ಕೈಗೊಳ್ಳಲಾಗಿತ್ತು. ಕೋಮಘಟ್ಟದಿಂದ ಜ್ಞಾನಭಾರತಿಗೆ ಪ್ರಧಾನಿ ಮೋದಿ ಸಂಚರಿಸುವಾಗ ನಮಗೆ ಸಂದೇಶ ಬಂದಿತ್ತು. ಹೀಗಾಗಿ ಕೆಂಗೇರಿಯಿಂದ ಜ್ಞಾನಭಾರತಿ ನಿಲ್ದಾಣಕ್ಕೆ ರೈಲುಗಳ ಸಂಚಾರವನ್ನು ನಿಲ್ಲಿಸಿದ್ದೆವು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com