ಐಕಿಯಾ ಶಾಪಿಂಗ್ ಮಾಲ್'ಗೆ ಜನಸಾಗರ: ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ತುಮಕೂರು ರಸ್ತೆ ನಾಗಸಂದ್ರ ಸಮೀಪ ಆರಂಭವಾಗಿರುವ ಪ್ರಖ್ಯಾತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಐಕಿಯಾ ಶಾಪಿಂಗ್ ಮಾಲ್'ಗೆ ಶನಿವಾರ ಮತ್ತು ಭಾನುವಾರ ಸಾಗರೋಪಾದಿಯಲ್ಲಿ ಗ್ರಾಹಕರು ಹರಿದು ಬಂದಿದ್ದು, ಇದರ ಪರಿಣಾಮ ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಎದುರಾಗಿ, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. 
ಬೆಂಗಳೂರಿನಲ್ಲಿ ಐಕಿಯಾ ತನ್ನ ಅತಿದೊಡ್ಡ ಮಳಿಗೆಯನ್ನು ತೆರೆದ ನಂತರ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಜನತೆ.
ಬೆಂಗಳೂರಿನಲ್ಲಿ ಐಕಿಯಾ ತನ್ನ ಅತಿದೊಡ್ಡ ಮಳಿಗೆಯನ್ನು ತೆರೆದ ನಂತರ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಜನತೆ.

ಬೆಂಗಳೂರು: ತುಮಕೂರು ರಸ್ತೆ ನಾಗಸಂದ್ರ ಸಮೀಪ ಆರಂಭವಾಗಿರುವ ಪ್ರಖ್ಯಾತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಐಕಿಯಾ ಶಾಪಿಂಗ್ ಮಾಲ್'ಗೆ ಶನಿವಾರ ಮತ್ತು ಭಾನುವಾರ ಸಾಗರೋಪಾದಿಯಲ್ಲಿ ಗ್ರಾಹಕರು ಹರಿದು ಬಂದಿದ್ದು, ಇದರ ಪರಿಣಾಮ ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಎದುರಾಗಿ, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. 

ಈಗಾಗಲೇ ಮೇಲ್ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ತುಮಕೂರು ಹೆದ್ದಾರಿಯ ಸರ್ವೀಸ್ ರಸ್ತೆಗಳಲ್ಲಿ ನಿಧಾನಗತಿ ಸಂಚಾರದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದೀಗ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಐಕಿಯಾ ಮಾಲ್ ನಿಂದ ಮತ್ತೊಂದು ಅಡ್ಡಿ ಎದುರಾದಂತಾಗಿದೆ. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜನರು ಐಕಿಯಾ ವಿರುದ್ಧ ಕಿಡಿಕಾರಿದ್ದು ಕೂಡ ಕಂಡು ಬಂದಿತ್ತು. 

ಮೆಟ್ರೋ ಅಧಿಕಾರಿಯೊಬ್ಬರು ಮಾತನಾಡಿ, ಐಕಿಯಾ ಪ್ರಾರಂಭವಾದಾಗಿನಿಂದ ನಾಲ್ಕು ದಿನಗಳಲ್ಲಿ (ಶನಿವಾರದವರೆಗೆ) ಬಿಎಂಆರ್'ಸಿಎಲ್'ನ ಸರಾಸರಿ ಪ್ರಯಾಣಿಕರ ಸಂಖ್ಯೆ 4,68,936 ರಿಂದ 4,78,829 ಕ್ಕೆ ಏರಿದೆ ಎಂದು ಹೇಳಿದ್ದಾರೆ. 

ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿಯೂ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಜೂನ್ 22 - 19,266, ಜೂನ್ 23 - 17,098, ಜೂನ್ 24 - 18,515 ಮತ್ತು ಜೂನ್ 25 - 30,067 ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. 

ಆರ್'ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವೀಟ್ ಮಾಡಿ, “ಇದು ಸರ್ಕಾರ ರಚಿಸಲು ಮಹಾರಾಷ್ಟ್ರದಲ್ಲಿ ಶಾಸಕರು ಸರತಿ ಸಾಲಿನಲ್ಲಿ ನಿಂತಿರುವುದಲ್ಲ, ನಮ್ಮ ದೇಶವನ್ನು ಪ್ರವೇಶಿಸಲು ವಲಸೆಗರು ಸಾಲಿನಲ್ಲಿ ನಿಂತಿರುವುದಲ್ಲ... ದರ್ಶನಕ್ಕಾಗಿ ತಿರುಪತಿಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಯಾತ್ರಾರ್ಥಿಗಳೂ ಅಲ್ಲ, ಐಕಿಯಾ ಮಳಿಗೆ ಆರಂಭ ಹಿನ್ನೆಲೆಯಲ್ಲಿ ನಿಂತಿರುವ ಜನರು ಎಂದು ಹೇಳಿದ್ದಾರೆ. 

ಎಂಡಿ ಅಂಜುಮ್ ಪರ್ವೇಜ್ ಮಾತನಾಡಿ, ಬಿಎಂಆರ್‌ಸಿಎಲ್ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‌ಗಳ ಸಂಖ್ಯೆಯನ್ನು 10 ಕ್ಕೆ ಹೆಚ್ಚಿಸಲಾಗಿದೆ. ಶನಿವಾರ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದ ಹಿನ್ನೆಲೆಯಲ್ಲಿ ಮಾಲ್ ಬಾಗಿಲನ್ನು ಬೇಗನೆ ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com