ಬೆಂಗಳೂರು: ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯರಸ್ತೆ ಆಕ್ರಮಿಸಿಕೊಂಡ ಕುಟುಂಬ; ಸಚಿವ ಮುನಿರತ್ನ ಆಪ್ತರೆಂದು ಧಮ್ಕಿ

ನಗರದ ಯಶವಂತಪುರ ಕೈಗಾರಿಕಾ ಪ್ರದೇಶದ ಇಂದಿರಾ ಕ್ಯಾಂಟೀನ್ ರಸ್ತೆಯ ಮಧ್ಯ ಭಾಗವನ್ನು ಕುಟುಂಬವೊಂದು ಕಳೆದ ನಾಲ್ಕು ವರ್ಷಗಳಿಂದಲೂ ಆಕ್ರಮಿಸಿಕೊಂಡಿದೆ. ಚಿಲ್ಲರೆ ಅಂಗಡಿ ಇರುವ ಜಾಗದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಮನೆ ನಿರ್ಮಿಸಿಕೊಳ್ಳಲಾಗಿದೆ
ಮುಖ್ಯರಸ್ತೆ ಒತ್ತುವರಿಯ ಚಿತ್ರ
ಮುಖ್ಯರಸ್ತೆ ಒತ್ತುವರಿಯ ಚಿತ್ರ

ಬೆಂಗಳೂರು: ನಗರದ ಯಶವಂತಪುರ ಕೈಗಾರಿಕಾ ಪ್ರದೇಶದ ಇಂದಿರಾ ಕ್ಯಾಂಟೀನ್ ರಸ್ತೆಯ ಮಧ್ಯ ಭಾಗವನ್ನು ಕುಟುಂಬವೊಂದು ಕಳೆದ ನಾಲ್ಕು ವರ್ಷಗಳಿಂದಲೂ ಆಕ್ರಮಿಸಿಕೊಂಡಿದೆ. ಚಿಲ್ಲರೆ ಅಂಗಡಿ ಇರುವ ಜಾಗದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಮನೆ ನಿರ್ಮಿಸಿಕೊಳ್ಳಲಾಗಿದೆ. ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮತ್ತು ತೋಟಗಾರಿಕೆ ಸಚಿವ ಎನ್. ಮುನಿರತ್ನ ಅವರ ಆಪ್ತರೆಂದು ಹೇಳಿಕೊಳ್ಳುತ್ತಿರುವ ಈ ಕುಟುಂಬ ಸದಸ್ಯರನ್ನು ಇಲ್ಲಿಂದ ಬೇರೆಡೆಗೆ ಓಡಿಸಲು ಇಲ್ಲಿನ ನಿವಾಸಿಗಳು ಮತ್ತು ನೌಕರರು ಮಾಡಿದ ಪ್ರಯತ್ನ ವ್ಯರ್ಥವಾಗಿದೆ.

ಬೆಸ್ಕಾಂನ ಗುತ್ತಿಗೆ ನೌಕರರಾದ ನಾಗರಾಜ್, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಇಲ್ಲಿ ವಾಸಿಸುತ್ತಿದ್ದಾರೆ. ಅವರ ತಾಯಿ ಶಾಂತಮ್ಮ, ಅಲ್ಲಿಯೇ ಹತ್ತಿರದಲ್ಲಿರುವ ಆದರ್ಶ ನಗರದ ಸ್ಲಮ್ ನಲ್ಲಿದ್ದಾರೆ. ಅವರನ್ನು ಮಾತನಾಡಿಸುವುದೇ ಕಷ್ಟಕರವಾಗಿದೆ. ಈ ಕುಟುಂಬ ಸದಸ್ಯರಿಂದ ಒತ್ತುವರಿ ಬಗ್ಗೆ ಸ್ಥಳೀಯ ನಿವಾಸಿಗಳು ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಅವರನ್ನು ಮಾತನಾಡಿಸಲು ಹೋದರೆ ತಾವು ಸಚಿವ ಮುನಿರತ್ನ ಅವರಿಗೆ ಆಪ್ತರಾಗಿರುವುದಾಗಿ ಧಮ್ಕಿ ಹಾಕುವುದಾಗಿ ವ್ಯಕ್ತಿಯೊಬ್ಬರು ತಿಳಿಸಿದರು.

'ಇಲ್ಲಿ ನಾವು ಮಾನ್ಯತೆಯಿರುವ ಆಫೀಸ್ ಹೊಂದಿದ್ದೇವೆ. ಇಲ್ಲಿಯೇ ಆಡುಗಳನ್ನು ಕಟ್ಟಲಾಗುತ್ತದೆ. ಹುಂಜಗಳು ನಮ್ಮ ಸುತ್ತಲೂ ಓಡಾಡುತ್ತ ಇರುತ್ತವೆ. ಆದರೆ, ನಾವು ತುಂಬಾ ಅಸಹಾಯಕರಾಗಿದ್ದೇವೆ ಎಂದು ಅಳಲು ತೋಡಿಕೊಂಡರು. ಇಲ್ಲಿ ಆಸ್ತಿ ಹೊಂದಿರುವ ಜಾರ್ಜ್ ಪಿಯರ್ಸನ್ ಅವರಿಂದ ಬಿಬಿಎಂಪಿಗೆ ಅನೇಕ ಪತ್ರ ಕಳುಹಿಸಲಾಗಿದೆ. ಆದರೆ ಎಲ್ಲವೂ ವ್ಯರ್ಥವಾಗಿದೆ.

80 ಅಡಿ ರಸ್ತೆಯ ಮುಖ್ಯರಸ್ತೆ ಒತ್ತುವರಿಯಾಗಿರುವುದು ಆತಂಕಕಾರಿಯಾಗಿದೆ. ಸರ್ಕಾರದ ಯಾವುದೇ ಏಜೆನ್ಸಿ ಕೂಡಾ ಕ್ರಮಕ್ಕೆ ಮುಂದಾಗಿಲ್ಲ. ಬಿಬಿಎಂಪಿಗೆ ಹಲವು ಬಾರಿ ಪತ್ರ ಬರೆದು ಎಚ್ಚರಿಸಲಾಗಿದೆ. ಇಲ್ಲಿನ ರಾಜಕಾಲುವೆ ಕೂಡಾ ಒತ್ತುವರಿಯಾಗಿದೆ ಎಂದು ಪಿಯರ್ಸನ್ ಹೇಳಿದರು. 

ಇಲ್ಲಿನ ಸ್ಲಂ ನಿವಾಸಿಗಳಿಗೆ ಕಾಂಕ್ರಿಟ್ ಮನೆ ಕಟ್ಟಿಸಿಕೊಡುವುದಾಗಿ ಮುನಿರತ್ನ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಲ್ಲ. ಆದ್ದರಿಂದ ಕೆಲವು ಸ್ಲಂ ನಿವಾಸಿಗಳು ತಮ್ಮ ಅರ್ಹತೆ ತಕ್ಕಂತೆ ಮನೆ ಕಟ್ಟಿಕೊಂಡಿದ್ದಾರೆ. ಈ ಕುಟುಂಬ ಕೂಡಾ ಹಾಗೆಯೇ ಮನೆ ಕಟ್ಟಿಕೊಂಡಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದರು. ಈ ಸಂಬಂಧ ಸಚಿವ ಮುನಿರತ್ನ ಅವರಿಗೆ ಪದೇ ಪದೇ ಫೋನ್ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com