ಬೆಂಗಳೂರು ಹೊರವಲಯದಲ್ಲಿ ಶಾಲೆಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದು

ತನ್ನ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ನವೀಕರಿಸಲು ಹಾಗೂ ನಗರದ ಹೊರವಲಯದಲ್ಲಿ ಶಾಲೆಗಳ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತನ್ನ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ನವೀಕರಿಸಲು ಹಾಗೂ ನಗರದ ಹೊರವಲಯದಲ್ಲಿ ಶಾಲೆಗಳ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.

ನಾಗರೀಕ ಸಂಸ್ಥೆ ರೂ.180 ಕೋಟಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಶಾಲೆಗಳ ನವೀಕರಿಸಲು ಹಾಗೂ ಬೆಂಗಳೂರು ಹೊರ ವಲಯದಲ್ಲಿ ಶಾಲೆ ನಿರ್ಮಾಣ ಮಾಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಬಿಬಿಎಂಪಿ ಸಹಾಯಕ ಆಯುಕ್ತ, ಶಿಕ್ಷಣ, ಉಮೇಶ್ ಡಿ ಎಸ್ ಅವರು ಮಾತನಾಡಿ, 2008ರ ನಂತರ ಕೆಲ ಗ್ರಾಮಗಳು ನಗರಕ್ಕೆ ಸೇರ್ಪಡೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಹೊರವಲಯದಲ್ಲಿ ಶಾಲೆಗಳ ನಿರ್ಮಿಸಲು ರೂ.180 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ. 

"ಅನುದಾನದ ಬಹುಪಾಲು ಹಣವನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಮೇಲ್ದರ್ಜೆಗೇರಿಸಲು ಬಳಕೆ ಮಾಡಲಾಗುತ್ತಿದೆ. ಕಳೆದ ಮೂರ್ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಹಲವು ಶಾಲೆಗಳು ಕಳಪೆ ಮೂಲಸೌಕರ್ಯ ಹೊಂದಿವೆ. ಆದ್ದರಿಂದ ನಾಗರೀಕ ಕೆಲಸಗಳಿಗೆ ಮತ್ತು ಮೇಜು, ಕುರ್ಚಿ ಮತ್ತು ಇತರ ಮೂಲಸೌಕರ್ಯಗಳಂತಹ ವಸ್ತುಗಳನ್ನು ಸಂಗ್ರಹಿಸಲು ಹಣವನ್ನು ವಿನಿಯೋಗಿಸಲಾಗುತ್ತಿದೆ. ಈ ನಿಧಿಯಲ್ಲಿ `77 ಕೋಟಿಯನ್ನು ಹೊಸ ಶಾಲೆಗಳ ನಿರ್ಮಾಣಕ್ಕೆ ಬಳಸಲಾಗುವುದು' ಎಂದು ಎಂದು ತಿಳಿಸಿದ್ದಾರೆ.

ಹಳೆಯ ಶಾಲೆಗಳಲ್ಲಿ ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲು ಮತ್ತು ಹಾನಿಗೊಳಗಾದ ತರಗತಿಗಳನ್ನು ಸರಿಪಡಿಸಲು ಹಣವನ್ನು ಬಳಸಲಾಗುತ್ತಿದೆ. ಯೋಜನೆಯ ಕಾಮಗಾರಿ ಕೆಲವೇ ವಾರಗಳಲ್ಲಿ ಆರಂಭವಾಗಲಿದ್ದು, 2023-24ನೇ ಶೈಕ್ಷಣಿಕ ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com