ಕಲಬುರಗಿಯಲ್ಲಿ ಪ್ರಾರಂಭವಾಗಲಿದೆ ವೈಮಾನಿಕ ತರಬೇತಿ ಶಾಲೆ!

ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಲಬುರಗಿ ಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉತ್ತರ ಕರ್ನಾಟಕ ಭಾಗದ ಯುವಕರು ಇಲ್ಲಿಯೇ ಪೈಲಟ್ ತರಬೇತಿ ಪಡೆಯಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಲಬುರಗಿ ಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉತ್ತರ ಕರ್ನಾಟಕ ಭಾಗದ ಯುವಕರು ಇಲ್ಲಿಯೇ ಪೈಲಟ್ ತರಬೇತಿ ಪಡೆಯಬಹುದು ಎಂದು ವಿಮಾನ ನಿಲ್ದಾಣ ನಿರ್ದೇಶಕರು ಕೂ ಮಾಡಿದ್ದಾರೆ.

ಏಷ್ಯಾ ಫೆಸಿಪಿಕ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ ಮತ್ತು 100 ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಅಗತ್ಯವಿರುವ ಭೂಮಿ ಮತ್ತು ಮೂಲ ಸೌಕರ್ಯಗಳು ಪ್ರಾಧಿಕಾರ ಒದಗಿಸಿದ್ದು, ಇನ್ನು ಮುಂದೆ ಪೈಲಟ್ ತರಬೇತಿ ಪಡೆಯಲು ಉತ್ತರ ಕರ್ನಾಟಕ ಭಾಗದ ಯುವಕರು ಮುಂಬೈ, ಹೈದರಾಬಾದ್, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ ಎಂದು ಅವರು ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬರುತ್ತಿರುವ ವೈಮಾನಿಕ ತರಬೇತಿ ಸಂಸ್ಥೆಗಳಿಂದ ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸುಮಾರು 100 ಜನರು ಇಲ್ಲಿ ಪೈಲಟ್ ತರಬೇತಿ ಪಡೆಯಬಹುದಾಗಿದೆ. ಜೊತೆಗೆ ಇದರಿಂದ ಈ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ 5 ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಕುರಿತು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಹ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಮೊದಲು ಬೆಂಗಳೂರಿನ ಜಕ್ಕೂರಿನಲ್ಲಿ ಮಾತ್ರ ವೈಮಾನಿಕ ತರಬೇತಿ ಶಾಲೆ ಇತ್ತು. ಈಗ ಕಲಬುರಗಿ , ಹುಬ್ಬಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿಯೂ ತರಬೇತಿ ಶಾಲೆ ಇದೆ. ಇದರಿಂದಾಗಿ ರಾಜ್ಯದ ಯುಕವರು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com