ಟ್ರೆಕ್ಕಿಂಗ್ ಹೋಗಿದ್ದ ವೈದ್ಯ ನಾಪತ್ತೆ: ತೀವ್ರಗೊಂಡ ಹುಡುಕಾಟ

ಏಕಾಂಗಿಯಾಗಿ ಹಿಮಾಲಯ ಪರ್ವತಕ್ಕೆ ಟ್ರೆಕ್ಕಿಂಗ್'ಗೆ ಹೋಗಿದ್ದ ಬೆಂಗಳೂರಿನ ವೈದ್ಯ ಚಂದ್ರಮೋಹನ್ ಶಿವನಾಥ್‌ ನಾಪತ್ತೆಯಾಗಿದ್ದು, ಇವರಿಗಾಗಿ ಪೊಲೀಸರಷ್ಟೇ ಅಲ್ಲದೇ, ಚಾರಣಿಗರ ತಂಡಗಳು ಮತ್ತು ಸ್ಥಳೀಯರು ತೀವ್ರ ಶೋಧ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಏಕಾಂಗಿಯಾಗಿ ಹಿಮಾಲಯ ಪರ್ವತಕ್ಕೆ ಟ್ರೆಕ್ಕಿಂಗ್'ಗೆ ಹೋಗಿದ್ದ ಬೆಂಗಳೂರಿನ ವೈದ್ಯ ಚಂದ್ರಮೋಹನ್ ಶಿವನಾಥ್‌ ನಾಪತ್ತೆಯಾಗಿದ್ದು, ಇವರಿಗಾಗಿ ಪೊಲೀಸರಷ್ಟೇ ಅಲ್ಲದೇ, ಚಾರಣಿಗರ ತಂಡಗಳು ಮತ್ತು ಸ್ಥಳೀಯರು ತೀವ್ರ ಶೋಧ ನಡೆಸುತ್ತಿದ್ದಾರೆ.

ವೈದ್ಯ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ನೇಪಾಳದ ಮಾದರಿಯಲ್ಲಿ ಹಿಮಾಲಯದ ಚಾರಣಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಚಾರಣಿಗರ ಸಂಘಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. 

ಏಕಾಂಗಿ ಪ್ರವಾಸಕ್ಕೆ ಹೋಗಲು ಯಾರಿಗೂ ಅವಕಾಶ ನೀಡಬಾರದು ಮತ್ತು ಬ್ಯಾಚ್‌ಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜೂನ್ 20 ರಿಂದ ಶಿವನಾಥ್ ಅವರು ನಾಪತ್ತೆಯಾಗಿದ್ದಾರೆ, ಬಳಿಕ ಅವರ ಕುಟುಂಬವು ಜೂನ್ 27 ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಅವರಿಗೆ ಯಾವುದೇ ಹಣಕಾಸಿನ ಅಥವಾ ವೈಯಕ್ತಿಕ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.

ಕುಟುಂಬಸ್ಥರು ನೀಡಿರುವ ಮಾಹಿತಿಗಳ ಪ್ರಕಾರ ಶಿವನಾಥ್ ಧಾರ್ಮಿಕ ವ್ಯಕ್ತಿಯಾಗಿದ್ದು, ಈ ಹಿಂದೆ ಹವಾರು ಬಾರಿ ಟ್ರೆಕ್ಕಿಂಗ್ ಹೋದ ಸಂದರ್ಭದಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ಮಧ್ಯೆ, ಶಿವನಾಥ್ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಅವರನ್ನು ಹುಡುಕಲು ಸಹಾಯಕ್ಕಾಗಿ ವಿವಿಧ ಟ್ರೆಕ್ಕಿಂಗ್ ಸಂಸ್ಥೆಗಳನ್ನು ಸಂಪರ್ಕಿಸಿದ್ದಾರೆ. 

ನೇಪಾಳಿ ಸರ್ಕಾರದೊಂದಿಗೆ ಸಂಪರ್ಕದಲ್ಲಿರುವ ಟ್ರೆಕ್ಕಿಂಗ್ ಕಂಪನಿಗಳು ಮಾಹಿತಿ ನೀಡಿರುವ ಪ್ರಕಾರ, "ಶಿವನಾಥ್ ಅವರ ಕೊನೆಯ ಸಂಪರ್ಕ ಮೇ 22 ರಂದು ಆಗಿತ್ತು. ಮೇ 20 ರಂದು ಸಾಗರಮಾತಾ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ಬಳಿಕ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದರು. ಮೇ 22 ರಂದು ಅವರಿಂದ ತುರ್ತು ಸಂದೇಶ ಬಂದಿದ್ದು, ಬಳಿಕ ನಾಪತ್ತೆಯಾಗಿದ್ದಾರೆ. ಶಿವನಾಥ್ ಮಾರ್ಗದರ್ಶಿ ಇಲ್ಲದೆ ಒಬ್ಬಂಟಿಯಾಗಿ ಟ್ರೆಕ್ಕಿಂಗ್'ಗೆ ಹೋಗಿದ್ದರು. ಇದೀಗ ಅವರನ್ನು ಪತ್ತೆಹಚ್ಚಲು ಸ್ಥಳೀಯರಿಂದ ಸಹಾಯ ಪಡೆಯಲಾಗುತ್ತಿದೆ ಎಂದು ಹೇಳಿವೆ. 

ಟ್ರೆಕ್ನೋಮಾಡ್ಸ್ ನ ನವೀನ್ ಮಲ್ಲೇಶ್ ಮಾತನಾಡಿ, ನೇಪಾಳದಲ್ಲಿ ಚಾರಣಿಗರಿಗೆ ನೀಲಿ ಮತ್ತು ಹಳದಿ ಕಾರ್ಡ್ ನೀಡಲಾಗುತ್ತದೆ. ಏಕಾಂಗಿಯಾಗಿ ಹೋಗುವ ಪರಿಣಿತ ಗೈಡ್‌ಗಳಿಗೆ ನೀಲಿ ಬಣ್ಣ ಕಾರ್ಡ್'ನ್ನು ನೀಡಲಾಗುತ್ತದೆ ಮತ್ತು ಮಾರ್ಗದರ್ಶಿಗಳೊಂದಿಗೆ ಬ್ಯಾಚ್‌ಗಳಲ್ಲಿ ಹೋಗುವವರಿಗೆ ಹಳದಿ ಕಾರ್ಡ್ ನೀಡಲಾಗುತ್ತದೆ. ಶಿವನಾಥ್ ನೀಲಿ ಕಾರ್ಡ್ ತೆಗೆದುಕೊಂಡಿದ್ದರು. ಟ್ರೆಕ್ಕಿಂಗ್ ಮಾಡುವವರು ಏಕಾಂಗಿಯಾಗಿ ಹೋಗಬಾರದು, ಆದರೆ ಸುರಕ್ಷತಾ ಕಾರಣಗಳಿಗಾಗಿ ನಿಯಂತ್ರಿತ ಗುಂಪು ಪ್ರವಾಸಗಳಿಗೆ ಹೋಗಬೇಕು ಎಂದು ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com