ಬಿಡಿಎಯಿಂದ ಹೊಸ ಮೂರು ಅಪಾರ್ಟ್ ಮೆಂಟ್ ಪ್ರಾಜೆಕ್ಟ್ ಗಳು: ಜನರಿಂದ ಹೆಚ್ಚಿದ ಬೇಡಿಕೆ
ಐಟಿ ಸಿಟಿ, ಉದ್ಯಾನನಗರಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಹೊಂದಬೇಕೆಂಬ ಕನಸು ಹಲವರಿಗೆ. ಅಪಾರ್ಟ್ ಮೆಂಟ್ ಆದರೂ ಖರೀದಿಸಿ ಸ್ವಂತ ಸೂರಿನ ಕನಸು ನನಸು ಮಾಡಿಕೊಳ್ಳುವವರು ಹಲವರು.
Published: 02nd March 2022 01:59 PM | Last Updated: 02nd March 2022 02:36 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಐಟಿ ಸಿಟಿ, ಉದ್ಯಾನನಗರಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಹೊಂದಬೇಕೆಂಬ ಕನಸು ಹಲವರಿಗೆ. ಅಪಾರ್ಟ್ ಮೆಂಟ್ ಆದರೂ ಖರೀದಿಸಿ ಸ್ವಂತ ಸೂರಿನ ಕನಸು ನನಸು ಮಾಡಿಕೊಳ್ಳುವವರು ಹಲವರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ಯಿಂದ ಮೂರು ಹೊಸ ಯೋಜನೆಗಳು ಬರುತ್ತಿದ್ದು ಸಾರ್ವಜನಿಕರು ತೀವ್ರ ಉತ್ಸಾಹ ತೋರಿಸುತ್ತಿದ್ದಾರೆ. ಪ್ರಾಜೆಕ್ಟ್ ಸೈಟ್ ಗಳಲ್ಲಿ ಇಟ್ಟಿರುವ ವಿಸಿಟರ್ಸ್ ಪುಸ್ತಕದಲ್ಲಿ ಬರುವವರು ಫ್ಲಾಟ್ ಗೆ ಎಷ್ಟು ಖರ್ಚಾಗುತ್ತದೆ, ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಸಂದೇಹಗಳನ್ನು ಕೇಳುತ್ತಿದ್ದು ಬಿಡಿಎ ನಿಗಮದಿಂದ ಅನುಮೋದನೆಗೆ ಕಾಯುತ್ತಿದ್ದಾರೆ.
ಔಟರ್ ರಿಂಗ್ ರಸ್ತೆಯ ಚಂದ್ರ ಲೇ ಔಟ್ ನಲ್ಲಿರುವ 3 ಬಿಎಚ್ ಕೆ ಫ್ಲಾಟ್ ಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದು 1,400 ಚದರಡಿಯಿದ್ದು ಸಾಕಷ್ಟು ದೊಡ್ಡದಾಗಿದೆ. ಇನ್ನು ಮೂರು ತಿಂಗಳಲ್ಲಿ ಸಿದ್ಧವಾಗಲಿದೆ. ಜನರ ಬೇಡಿಕೆ ನೋಡಿಕೊಂಡು ಮಾರಾಟಕ್ಕೆ ಮುಕ್ತವಾದ 30 ನಿಮಿಷಗಳಲ್ಲಿ ಮಾರಾಟವಾಗಬಹುದು ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಬಿಡಿಎ ಇದಕ್ಕೆ ಸುಮಾರು 1.04 ಕೋಟಿ ಮಾರಾಟ ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
3 ಮತ್ತು 4 BHK ಫ್ಲಾಟ್ಗಳನ್ನು ಹೊಂದಿರುವ ಮಾಗಡಿ ರಸ್ತೆಯಿಂದ 2 ಕಿಮೀ ದೂರದಲ್ಲಿರುವ 'ಬಿಡಿಎ ವಿಲ್ಲಾ ಹುಣ್ಣಿಗೆರೆ ಯೋಜನೆ' ಜನರಲ್ಲಿ ತೀವ್ರ ಆಸಕ್ತಿ ಹುಟ್ಟಿಸಿರುವ ಮತ್ತೊಂದು ಯೋಜನೆಯಾಗಿದೆ. “ನಾವು 3BHK ಫ್ಲಾಟ್ಗಳಿಗೆ 1 ಕೋಟಿ ರೂಪಾಯಿಗಳ ಬೆಲೆಯನ್ನು ನೋಡುತ್ತಿರುವಾಗ, 4BHK ಗಳಿಗೆ ಇದು 1.2 ಕೋಟಿಯಾಗಿದೆ. ಆರು ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ಹೇಳುತ್ತಾರೆ.
ಬಿಡಿಎಯ ಮತ್ತೊಂದು ಮೆಗಾ ಪ್ರಾಜೆಕ್ಟ್ 600 2 ಬಿಎಚ್ ಕೆ ಫ್ಲಾಟ್ ಗಳು ಹಳೆ ಮದ್ರಾಸ್ ರಸ್ತೆಯ ಬೂದಿಗೆರೆ ಕ್ರಾಸ್ ನಲ್ಲಿ ಕೊನ್ನದಾಸ್ಪುರದಲ್ಲಿ ಆಗಿದ್ದು ಅದಕ್ಕೆ ತಲಾ 54 ಲಕ್ಷದಷ್ಟು ಆಗಬಹುದು ಎಂದರು.
ಕಣ್ಮಿಣಿಕೆ ಮತ್ತು ಕೊಮಘಟ್ಟದಲ್ಲಿ 1,600 ಫ್ಲ್ಯಾಟ್ಗಳು ಇನ್ನೂ ಉಳಿದಿವೆ. "ಸ್ಥಳವು ನಗರದಿಂದ ಸ್ವಲ್ಪ ದೂರದಲ್ಲಿರುವುದರಿಂದ ಮತ್ತು ರಸ್ತೆ ಸಂಪರ್ಕವು ಸಮಸ್ಯೆಯಾಗಿರುವುದರಿಂದ, ಅಲ್ಲಿಗೆ ಖರೀದಿದಾರರು ಬರುವುದು ಕಡಿಮೆ. ‘ಅಕ್ರಾಸ್ ದಿ ಟೇಬಲ್’ ಯೋಜನೆ ಮೂಲಕ ಆಗಸ್ಟ್ 2017 ರಿಂದ ಮಾರಾಟಕ್ಕಿದ್ದ 3,235 ಫ್ಲಾಟ್ಗಳಲ್ಲಿ ಮಾಳಗಾಲ, ಆಲೂರು, ದೊಡ್ಡಬನಹಳ್ಳಿ, ವಳಗೇರಹಳ್ಳಿ ಮತ್ತು ಹಲಗೇವಾಡರಹಳ್ಳಿ ಎಲ್ಲವೂ ಮಾರಾಟವಾಗಿವೆ ಎಂದು ಹೇಳಿದರು.