ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರಂ 3 ಮಾತ್ರ ಕಾರ್ಯನಿರ್ವಹಣೆ
ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿನ ಮುಂದಿನ ಪ್ರಕಟಣೆವರೆಗೆ ಪ್ಲಾಟ್ ಫಾರಂ 3 ಮಾತ್ರ ಮಾತ್ರ ಕಾರ್ಯನಿರ್ವಹಿಸಲಿದೆ. ಈ ಪ್ಲಾಟ್ ಫಾರಂನಲ್ಲಿ ರೈಲುಗಳ ನಿರ್ಗಮನ ಮತ್ತು ಆಗಮನಕ್ಕೆ ಅನುಮತಿ ನೀಡಲಾಗಿದೆ.
Published: 03rd March 2022 04:06 PM | Last Updated: 03rd March 2022 04:29 PM | A+A A-

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ
ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿನ ಮುಂದಿನ ಪ್ರಕಟಣೆವರೆಗೆ ಪ್ಲಾಟ್ ಫಾರಂ 3 ಮಾತ್ರ ಮಾತ್ರ ಕಾರ್ಯನಿರ್ವಹಿಸಲಿದೆ. ಈ ಪ್ಲಾಟ್ ಫಾರಂನಲ್ಲಿ ರೈಲುಗಳ ನಿರ್ಗಮನ ಮತ್ತು ಆಗಮನಕ್ಕೆ ಅನುಮತಿ ನೀಡಲಾಗಿದೆ.
ಬೈಯಪ್ಪನಹಳ್ಳಿ- ವೈಲ್ಡ್ ಫೀಲ್ಡ್ ನಡುವಿನ ಮಾರ್ಗದ ಮೂಲಸೌಕರ್ಯ ಕೆಲಸಕ್ಕಾಗಿ ಪ್ಲಾಟ್ ಫಾರಂ 1 ಮತ್ತು 2 ನ್ನು ಮಾರ್ಟ್ 2 ರಿಂದ ಆರು ತಿಂಗಳವರೆಗೂ ಮುಚ್ಚಲಾಗಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಬಿಎಂಆರ್ ಸಿಎಲ್ ಆಪರೇಷನ್ ಮತ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಪೀಕ್ ಅವರ್ ಕಳೆದ ನಂತರ ರೈಲುಗಳ ಸಂಖ್ಯೆಯನ್ನು ಕಡಿಮೆ ಮಾಡಿ ಬೈಯಪ್ಪನಹಳ್ಳಿ ಡಿಪೋಗೆ ಕಳುಹಿಸಿದ್ದೇವೆ, ಕೆಂಗೇರಿಗೆ ಹೋಗುತ್ತದೆ ಎಂದು ಭಾವಿಸಿ ಕೆಲ ಪ್ರಯಾಣಿಕರು ರೈಲು ಹತ್ತಿದ್ದರು. ಭದ್ರತಾ ಸಿಬ್ಬಂದಿ ತಕ್ಷಣ ಅವರನ್ನು ಕೆಳಗೆ ಇಳಿಸಿದರು. ಆದಾಗ್ಯೂ, ಹೊರಡುವ ಪ್ರತಿಯೊಂದು ರೈಲಿನಲ್ಲಿ ಕೆಲವು ಗೊಂದಲಗಳಿವೆ ಮತ್ತು ಆದ್ದರಿಂದ ನಾವು ಪ್ರತಿ ರೈಲಿನ ಬಗ್ಗೆ ನಿಯಮಿತವಾಗಿ ಪ್ರಕಟಣೆಗಳನ್ನು ಮಾಡಲು ನಿರ್ಧರಿಸಿದ್ದೇವೆ. ಕೆಲವು ತಿಂಗಳುಗಳವರೆಗೆ ನಾವು ಇದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.