ನವೀನ್ ಮೃತದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆ ತರಬಹುದು: ಶಾಸಕ ಅರವಿಂದ ಬೆಲ್ಲದ್ ವಿವಾದಾಸ್ಪದ ಹೇಳಿಕೆ
ಇತ್ತೀಚೆಗಷ್ಟೇ ಉಕ್ರೇನ್ನಲ್ಲಿ ಪ್ರಾಣ ಕಳೆದುಕೊಂಡ ಹಾವೇರಿ ಯುವಕನ ಕುರಿತು ಶಾಸಕ ಅರವಿಂದ್ ಬೆಲ್ಲದ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.
Published: 04th March 2022 08:22 AM | Last Updated: 04th March 2022 02:02 PM | A+A A-

ಶಾಸಕ ಅರವಿಂದ ಬೆಲ್ಲದ್
ಧಾರವಾಡ: ಇತ್ತೀಚೆಗಷ್ಟೇ ಉಕ್ರೇನ್ನಲ್ಲಿ ಪ್ರಾಣ ಕಳೆದುಕೊಂಡ ಹಾವೇರಿ ಯುವಕನ ಕುರಿತು ಶಾಸಕ ಅರವಿಂದ್ ಬೆಲ್ಲದ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.
ಖಾರ್ಕಿವ್ನಲ್ಲಿ ರಷ್ಯಾದ ಪಡೆಗಳ ಶೆಲ್ ದಾಳಿಯಲ್ಲಿ ಹತರಾದ ನವೀನ್ ಜ್ಞಾನ ಗೌಡರ್ ಅವರ ದೇಹವನ್ನು ಮರಳಿ ತರುವ ಬದಲು 10 ಜನರನ್ನು ವಿಮಾನದಲ್ಲಿ ಸ್ಥಳಾಂತರಿಸಬಹುದು ಎಂದು ಬೆಲ್ಲದ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ವ ಪ್ರಯತ್ನ: ಸಿಎಂ ಬೊಮ್ಮಾಯಿ ಭರವಸೆ
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಶವ ತರಲು ಪ್ರಯತ್ನ ಮಾಡುತಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ನಡೆಯುತ್ತಿದೆ, ಈ ಬಗ್ಗೆ ಮಾದ್ಯಮದವರೇ ಅದನ್ನ ತೊರಿಸುತಿದ್ದಾರೆ. ಜೀವಂತ ಇದ್ದವರನ್ನೇ ತರುವದು ಕಷ್ಟ ಆಗಿದೆ, ಶವ ತರೋದು ಇನ್ನೂ ಕಷ್ಟ ಇದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗಬೇಕು. ಶವ ಇರುವ ಜಾಗದಲ್ಲೇ 10 ಜನರನ್ನ ಕರೆದುಕೊಂಡು ಬರಬಹುದು ಎಂದು ಹೇಳಿದ್ದಾರೆ.
ಮಗನನ್ನು ಕಳೆದುಕೊಂಡು ನವೀನ್ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಇಂತಹ ಕೇಳಿಕೆ ನೀಡಿರೋದು ಎಷ್ಟು ಸರಿ. ಆಡಿ, ಬೆಳೆಸಿದ ಮಗನ ಮುಖವನ್ನು ಕೊನೆ ಬಾರಿ ನೋಡಲು ಪೋಷಕರು ಕಾದು ಕುಳಿತ್ತಿದ್ದಾರೆ. ಹಾವೇರಿಯಲ್ಲಿರೋ ನವೀನ್ ಮನೆಗೆ ಗಣ್ಯರ ದಂಡೇ ಹರಿದು ಬರುತ್ತಿದ್ದು, ಪೋಷಕರಿಗೆ ಸಾಂತ್ವನ ಹೇಳುತ್ತಿದ್ದಾರೆ. ಆದರೆ, ಶಾಸಕ ಬೆಲ್ಲದ್ ನೀಡಿರೋ ಬೇಜವಾಬ್ದಾರಿ ಹೇಳಿಕೆ ನವೀನ್ ಪೋಷಕರನ್ನ ಮತ್ತಷ್ಟು ಕುಗ್ಗಿ ಹೋಗುವಂತೆ ಮಾಡಿದೆ.