ಭಾರತ- ಲಂಕಾ ಟೆಸ್ಟ್: ಟಿಕೆಟ್ ಗಾಗಿ ಸರದಿ ಸಾಲಿನಲ್ಲಿ ನಿಂತು ಕುಸಿದು ಬಿದ್ದ ವೃದ್ಧ, ಮಾನವೀಯತೆ ಮೆರೆದ ಪೊಲೀಸರು!
ಇದೇ ತಿಂಗಳ 12 ರಿಂದ ಮಾ.16 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ಶ್ರೀಲಂಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
Published: 06th March 2022 12:49 PM | Last Updated: 06th March 2022 01:06 PM | A+A A-

ಹಿರಿಯ ನಾಗರಿಕರಿಗೆ ಸಹಾಯ ಮಾಡುತ್ತಿರುವ ಪೊಲೀಸರು
ಬೆಂಗಳೂರು: ಇದೇ ತಿಂಗಳ 12 ರಿಂದ ಮಾ.16 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ಶ್ರೀಲಂಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
ಈ ಪಂದ್ಯ ವೀಕ್ಷಣೆಗಾಗಿ ಟಿಕೆಟ್ ಖರೀದಿಸಲು ಇಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದಿದ್ದ ಹಿರಿಯ ನಾಗರಿಕರೊಬ್ಬರು ಬಿರು ಬಿಸಿಲಿನ ಮಧ್ಯೆ ಉದ್ದನೆಯ ಸಾಲಿನಲ್ಲಿ ನಿಂತು ನಿತ್ರಾಣಕೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಇಸ್ರೋ ಲೇಔಟ್ ನಿಂದ ಬಂದಿದ್ದ ಹಿರಿಯ ವ್ಯಕ್ತಿ ಹೀಗೆ ಕುಸಿದು ಬಿದಿದ್ದನ್ನು ಅಲ್ಲಿಯೇ ಇದ್ದ ಪೊಲೀಸರೊಬ್ಬರು ಗಮನಿಸಿದ್ದು, ನಂತರ ಅವರನ್ನು ಉಪಚರಿಸಿ, ಟಿಕೆಟ್ ತಂದುಕೊಟ್ಟಿದ್ದಾರೆ. ತದನಂತರ ಮನೆಗೆ ತೆರಳಲು ಆಟೋ ರಿಕ್ಷಾ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
A senior citizen from ISRO layout, who came to Chinnaswamy stadium to buy ticket for India-Srilanka test match that is scheduled for March 12 in Bengaluru collapsed after standing in the long queue. Later police not just got him ticket, but arranged an autorickshaw to reach home pic.twitter.com/VgVoxjsKeD
— Shrirambn (@shrirambn) March 6, 2022