2022 ರಾಜ್ಯ ಬಜೆಟ್: ಇನ್ನಷ್ಟು ಕ್ಲಿನಿಕ್ ಗಳ ಸ್ಥಾಪನೆಯ ಅಗತ್ಯವಿದೆಯೇ? ತಜ್ಞರ ಪ್ರಶ್ನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕಳೆದ ವರ್ಷಕ್ಕಿಂತ ಶೇ 17.54 ರಷ್ಟು ಹಣವನ್ನು ಹೆಚ್ಚಿಸಲಾಗಿದೆ. ಆದರೆ, ತಜ್ಞರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Published: 06th March 2022 10:26 AM | Last Updated: 06th March 2022 10:35 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕಳೆದ ವರ್ಷಕ್ಕಿಂತ ಶೇ 17.54 ರಷ್ಟು ಹಣವನ್ನು ಹೆಚ್ಚಿಸಲಾಗಿದೆ. ಆದರೆ, ತಜ್ಞರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದೊಂದು ಸಮತೋಲಿತ ಬಜೆಟ್ ಎಂದರೆ, ಮತ್ತೆ ಕೆಲವರು ಒಟ್ಟಾರೆ ಬಜೆಟ್ನ ಶೇ. 5 ರಷ್ಟು ಆರೋಗ್ಯದ ವೆಚ್ಚವು ಕಳೆದ ವರ್ಷಕ್ಕಿಂತ ಅತ್ಯಲ್ಪ ಹೆಚ್ಚಳವಾಗಿದೆ ಮತ್ತು ತುರ್ತಾಗಿ ಅಗತ್ಯವಿರುವ ಹೂಡಿಕೆಗಳಿಗೆಯಾವುದೇ ಅವಕಾಶವನ್ನು ಒದಗಿಸಿಲ್ಲ ಎಂದಿದ್ದಾರೆ.
ರಾಜ್ಯವು ಸಾಂಕ್ರಾಮಿಕವಲ್ಲದ ರೋಗಗಳತ್ತ ತನ್ನ ಗಮನವನ್ನು ಹರಿಸಿರುವುದು ಒಳ್ಳೆಯ ವಿಷಯ. ತಾಲೂಕು ಮಟ್ಟದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ನೀಡುವುದು, ಜಯದೇವ ಆಸ್ಪತ್ರೆಯೊಂದಿಗೆ ಸಂಬಂಧ ಕಲ್ಪಿಸುವುದು ಉತ್ತಮ ಉಪಕ್ರಮ, ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ನಮ್ಮ ಚಿಕಿತ್ಸಾಲಯಗಳು ಮತ್ತು ಮಹತ್ವಾಕಾಂಕ್ಷೆಯ ತಾಲೂಕುಗಳನ್ನು ಸ್ಥಾಪಿಸುವುದು ಉತ್ತಮ ಉಪಕ್ರಮಗಳಾಗಿವೆ. ಆದರೆ ಪರಿಶೀಲನೆ ಮತ್ತು ನಿಗಾ ವಹಿಸುವುದು ಮುಖ್ಯ ಎನ್ನುತ್ತಾರೆ ಜಯದೇವ ಆಸ್ಪತ್ರೆಗಳ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್.
ಇದನ್ನೂ ಓದಿ: ರಾಜ್ಯ ಬಜೆಟ್ 2022: 438 ‘ನಮ್ಮ ಕ್ಲಿನಿಕ್‘ಗಳ ಸ್ಥಾಪನೆ; ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?
ರಾಜ್ಯದಲ್ಲಿ ಈಗಾಗಲೇ 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8,871 ಉಪ ಕೇಂದ್ರಗಳು ಮತ್ತು 146 ತಾಲೂಕ್ ಆಸ್ಪತ್ರೆಗಳಿವೆ. ಸಾಂಕ್ರಾಮಿಕಯೇತರ ರೋಗಗಳಿಗಾಗಿ ಪ್ರತ್ಯೇಕ ನಮ್ಮ ಕ್ಲಿನಿಕ್ ಗಳು ಮತ್ತು ತಜ್ಞರಿಗೆ ಶಿಫಾರಸು ಬೇಕೆ? ನಗರ ಕುಟುಂಬ ಕಲ್ಯಾಣ ಕೇಂದ್ರಗಳನ್ನು ಏಕೆ ಬಲಪಡಿಸಬಾರದು? ಹೆಚ್ಚಿನ ಎನ್ ಸಿಡಿಗಳಿಗೆ ಪ್ರತ್ಯೇಕ ಚಿಕಿತ್ಸಾಲಯಗಳು ಅಥವಾ ತಜ್ಞ ನಿರ್ವಹಣೆಯ ಅಗತ್ಯವಿರುವುದಿಲ್ಲ. ಪ್ರತ್ಯೇಕ ಸ್ವತಂತ್ರ ಚಿಕಿತ್ಸಾಲಯಗಳಲ್ಲಿ ಏಕೆ ಹೂಡಿಕೆ ಮಾಡಬೇಕು? ಎಂದು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಅಧ್ಯಾಪಕ (ಸಾರ್ವಜನಿಕ ಆರೋಗ್ಯ) ಡಾ. ಇ. ಪ್ರೇಮ್ ದಾಸ್ ಪಿಂಟೋ ಪ್ರಶ್ನಿಸಿದ್ದಾರೆ.
ಈ ಮಧ್ಯೆ ಇತ್ತೀಚೆಗೆ ಪ್ರಕಟವಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ ಮತ್ತು ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ ಎಂದು ಬಹಿರಂಗಪಡಿಸಿದೆ ಮತ್ತು ಸಾಂಕ್ರಾಮಿಕ ರೋಗದ ದೀರ್ಘಕಾಲೀನ ಪರಿಣಾಮವು ಅದನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಹೇಳಿದೆ. ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳುತ್ತದೆ. ಆದರೆ, ಯಾವ ಕ್ರಮ ಕೈಗೊಳ್ಳುತ್ತದೆ, ಅದರ ಬಜೆಟ್ ಎಷ್ಟು ಎಂಬುದರ ಬಗ್ಗೆ ಏನನ್ನೂ ಹೇಳುವುದಿಲ್ಲ, ಅದನ್ನು ಅಸ್ಪಷ್ಟವಾಗಿ ಬಿಡುವುದು ಒಳ್ಳೆಯ ಅಭ್ಯಾಸವಲ್ಲ. ಅದನ್ನು ಅಸ್ಪಷ್ಟವಾಗಿ ಇಡುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಸಂಶೋಧಕ ಡಾ. ಸಿಲ್ವಿಯಾ ಕರ್ಪಗಮ್ ಹೇಳುತ್ತಾರೆ.
ನಿಮ್ಹಾನ್ಸ್ನ ಮಾಜಿ ನಿರ್ದೇಶಕ ಡಾ.ಗುರುರಾಜ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ‘ಹೆಲ್ತ್ ವಿಷನ್ ಗ್ರೂಪ್’ ಅನ್ನು ರಚಿಸಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಸೇವೆಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು ವಿಷನ್ ಗ್ರೂಪ್ ಶಿಫಾರಸುಗಳ ಭಾಗವಾಗಿತ್ತು. ಸರ್ಕಾರದೊಂದಿಗೆ ಚರ್ಚಿಸಲು ಕಾಯುತ್ತಿರುವುದಾಗಿ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಗಿರಿಧರ ಆರ್ ಬಾಬು ಹೇಳಿದ್ದಾರೆ.