ರಾಜ್ಯ ಬಜೆಟ್ 2022: ನಮ್ಮ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸಿದೆ- ಪೌರಕಾರ್ಮಿಕರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಪೌರಕಾರ್ಮಿಕರಿಗೆ ಮಾಸಿಕ 2000 ರೂ.ಗಳ ಸಂಕಷ್ಟ ಭತ್ಯೆಯನ್ನು ಘೋಷಿಸಿದ್ದು, ಸರ್ಕಾರದ ಈ ನಿರ್ಧಾರವನ್ನು ಬಿಬಿಎಂಪಿ ಪೌರಕಾರ್ಮಿಕ ಸಂಘ ಸ್ವಾಗತಿಸಿದೆ. ಆದಾಗ್ಯೂ, ಇನ್ನೂ ಹಲವು ಬೇಡಿಕೆಗಳನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published: 06th March 2022 12:20 PM | Last Updated: 06th March 2022 12:20 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಪೌರಕಾರ್ಮಿಕರಿಗೆ ಮಾಸಿಕ 2000 ರೂ.ಗಳ ಸಂಕಷ್ಟ ಭತ್ಯೆಯನ್ನು ಘೋಷಿಸಿದ್ದು, ಸರ್ಕಾರದ ಈ ನಿರ್ಧಾರವನ್ನು ಬಿಬಿಎಂಪಿ ಪೌರಕಾರ್ಮಿಕ ಸಂಘ ಸ್ವಾಗತಿಸಿದೆ. ಆದಾಗ್ಯೂ, ಇನ್ನೂ ಹಲವು ಬೇಡಿಕೆಗಳನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೌರಕಾರ್ಮಿಕ ಸಂಘ ಮತ್ತು ವಿವಿಧ ಕಾರ್ಮಿಕರ ಸಂಘಟನೆಗಳು ಸುಮಾರು ಎರಡು ವರ್ಷಗಳ ಪ್ರತಿಭಟನೆ ನಡೆಸಿದ ಬಳಿಕ, ಸರ್ಕಾರ ಸಂಕಷ್ಟ ಭದತ್ಯೆಯನ್ನು ಘೋಷಣೆ ಮಾಡಿದೆ.
ಪೌರಕಾರ್ಮಿಕ ಸಂಘದ ಮುಖ್ಯಸ್ಥೆ ನಿರ್ಮಲಾ ಎಂ ಅವರು ಮಾತನಾಡಿ, ಸಂಘದ ನಿರಂತರ ಹೋರಾಟದ ಫಲ ಇದು. ಸಾಂಕ್ರಾಮಿಕ ಸಮಯದಲ್ಲಿ ನಾವು ನಮ್ಮ ಸೇವೆಯನ್ನು ಮುಂದುವರೆಸಿದ್ದೆವು, ನಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದೇವೆ. ಹಲವರಿಗೆ ಸೋಂಕು ತಗುಲಿದೆ.
ಕೋವಿಡ್ -19 ಸಾವುಗಳಂತಹ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕುಟುಂಬಗಳಿಗೆ ಪಿಂಚಣಿ, ಪರಿಹಾರ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.