ಉಕ್ರೇನ್ ನಿಂದ 242 ಭಾರತೀಯರನ್ನು ಕರೆತಂದ ಏರ್ ಇಂಡಿಯಾ ಪೈಲಟ್ ದಿಶಾ ಮಣ್ಣೂರ್ ಬೆಳಗಾವಿಯ ಸೊಸೆ!

ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದ ಏರ್ ಇಂಡಿಯಾ ಪೈಲಟ್ ದಿಶಾ ಮಣ್ಣೂರ್ ಬೆಳಗಾವಿ ಸೊಸೆ ಎಂಬುದು ಹೆಮ್ಮೆಯ ವಿಷಯ.

Published: 07th March 2022 10:34 AM  |   Last Updated: 07th March 2022 06:35 PM   |  A+A-


Disha Mannur

ದಿಶಾ ಮಣ್ಣೂರ್

The New Indian Express

ಬೆಳಗಾವಿ: ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದ ಏರ್ ಇಂಡಿಯಾ ಪೈಲಟ್ ದಿಶಾ ಮಣ್ಣೂರ್ ಬೆಳಗಾವಿ ಸೊಸೆ ಎಂಬುದು ಹೆಮ್ಮೆಯ ವಿಷಯ.

ತಮ್ಮ ಈ ಕಾರ್ಯಕ್ಕೆ ದಿಶಾ ಮಣ್ಣೂರ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ನವದೆಹಲಿಯಲ್ಲಿ ನೆಲೆಸಿರುವ ಮತ್ತು ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿರುವ ದಿಶಾ, ಫೆಬ್ರವರಿ 22 ರಂದು ನವದೆಹಲಿಯಿಂದ ಉಕ್ರೇನ್‌ನ ರಾಜಧಾನಿ ಕೈವ್‌ಗೆ AI-1947 ವಿಮಾನವನ್ನು ಹಾರಿಸಿ 242 ಭಾರತೀಯರನ್ನು ಸ್ಥಳಾಂತರಿಸಿದ ಐದು ಪೈಲಟ್‌ಗಳಲ್ಲಿ ಒಬ್ಬರಾಗಿದ್ದಾರೆ.

ಗುಜರಾತ್‌ನ ಭುಜ್‌ನಿಂದ ಬಂದಿರುವ ದಿಶಾ ಮನ್ನೂರ್, ನೀ ಗದಾ ಅವರು 2015 ರಲ್ಲಿ ಪೈಲಟ್ ಆದಿತ್ಯ ಮನ್ನೂರ್ ಅವರನ್ನು ವಿವಾಹವಾದರು. ಆದಿತ್ಯ ಅವರು ಬೆಳಗಾವಿ ಮೂಲದ ಪದ್ಮಜಾ ಪ್ರಹ್ಲಾದ್ ಮಣ್ಣೂರ್ ಅವರ ಪುತ್ರ, ಗೋರೆಗಾಂವ್ ಕರ್ನಾಟಕ ಸಂಘದ ಸಕ್ರಿಯ ಸದಸ್ಯರಾಗಿದ್ದು ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ.

ದಿಶಾ ಅವರನ್ನು ಪ್ರಮುಖ ಕಾರ್ಯಾಚರಣೆಗೆ ನಿಯೋಜಿಸಿರುವುದು ಇದೇ ಮೊದಲಲ್ಲ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಪೈಲಟ್ ದಂಪತಿ ವೈದ್ಯಕೀಯ ಆಮ್ಲಜನಕವನ್ನು ತರಲು  ಔಷಧಿಗಳನ್ನು ತರಲು ಅಮೆರಿಕಾ ಹಾಂಗ್ ಕಾಂಗ್, ಪ್ಯಾರಿಸ್ ಮತ್ತು ಸಿಂಗಾಪುರಕ್ಕೆ ವಿಮಾನ ಚಲಾಯಿಸಿದ್ದರು.

ಇದನ್ನೂ ಓದಿ: ಆಪರೇಷನ್ ಗಂಗಾ: ಬುಡಾಪೆಸ್ಟ್ ಮೂಲಕ ಭಾರತೀಯರ ಸ್ಥಳಾಂತರಿಸುವಿಕೆ ಕಾರ್ಯ ಅಂತ್ಯ

ಎರಡು ದಿನಗಳ ವಾಯುಯಾನ ಸಂಬಂಧಿತ ತರಬೇತಿಗಾಗಿ ಮುಂಬೈನಲ್ಲಿರುವ ದಿಶಾ, "ಈ ಕಾರ್ಯಾಚರಣೆಗೆ ನನ್ನನ್ನು ಆಯ್ಕೆ ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ. ದೇಶದ ವಿದ್ಯಾರ್ಥಿಗಳು, ಆತಂಕದಲ್ಲಿರುವ ಪೋಷಕರಿಗಾಗಿ ಏನನ್ನಾದರೂ ಮಾಡುವುದು ನನಗೆ ಸಂತೋಷವಾಗಿದೆ ಎಂದು ದಿಶಾ ಹೇಳಿದ್ದಾರೆ.

ಇತರ ವಿಮಾನಗಳು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಬುಕಾರೆಸ್ಟ್ ಮತ್ತು ಬುಡಾಪೆಸ್ಟ್‌ನಲ್ಲಿ ಇಳಿಯುತ್ತಿದ್ದವು. ಉಕ್ರೇನ್‌ನಲ್ಲಿಯೇ ವಿಮಾನ ಇಳಿಸುವ ಅವಕಾಶ ನನಗೆ ಸಿಕ್ಕಿತು. ವಿಮಾನ ನಿಲ್ದಾಣದಲ್ಲಿ ಕೇವಲ ಎರಡು ವಿಮಾನಗಳಿದ್ದವು. ನನಗೆ ಸ್ವಲ್ಪ ಭಯವಾಯಿತು, ಆದರೆ ಭಾರತ ಸರ್ಕಾರ ಈಗಾಗಲೇ ಮಾತುಕತೆ ನಡೆಸಿದೆ ಮತ್ತು ಯಾವುದೇ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸ ನಮಗಿತ್ತು ಎಂದು ದಿಶಾ ಮಣ್ಣೂರ ಹೇಳಿದ್ದಾರೆ.

ನನ್ನ ಮಗ ಮತ್ತು ಸೊಸೆ ದೆಹಲಿಯಲ್ಲಿದ್ದಾರೆ. ದಿಶಾ ಉಕ್ರೇನ್‌ಗೆ ತನ್ನ ಆಪರೇಷನ್ ಬಗ್ಗೆ ಹೇಳಿದಾಗ ನನಗೆ ಭಯವಾಯಿತು. ಆದರೆ ಇದು ತನ್ನ ಕರ್ತವ್ಯ ಎಂದು ಅವಳು ಹೇಳಿದಳು, ಈಗ, ನಾನು ಮತ್ತು ದಿಶಾ ಅವರ ಪೋಷಕರು ಜನರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ ಎಂದು ದಿಶಾ ಅತ್ತೆ ಪದ್ಮಜಾ ಮಣ್ಣೂರ್ ಹೇಳಿದ್ದಾರೆ.


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp