
ಬೆಂಗಳೂರು-ಇಂಡಿಯಾ ನ್ಯಾನೋ ಸಮ್ಮೇಳನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು
ಬೆಂಗಳೂರು: 12ನೇ ಬೆಂಗಳೂರು- ಇಂಡಿಯಾ ನ್ಯಾನೋ 2022 ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಚಾಲನೆ ನೀಡಿದರು.
ಇಂದಿನಿಂದ ಮೂರು ದಿನ ನಡೆಯಲಿರುವ ಸಮ್ಮೇಳನದಲ್ಲಿ, ನ್ಯಾನೋ ಸೈನ್ಸ್, ನ್ಯಾನೋ ಟೆಕ್ನಾಲಜಿ ಮೇಲೆ ಬೆಳಕು ಚೆಲ್ಲಲಿದ್ದು, 2,500ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ವರ್ಚುಯಲ್ ಮೂಲಕ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾರತ ರತ್ನ ಪ್ರೊ. ಸಿ.ಎನ್. ಆರ್ . ರಾವ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭಾಗಿಯಾಗಿದ್ದಾರೆ.
ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, 108 ವಿಶ್ವದರ್ಜೆಯ ನ್ಯಾನೋ ಟೆಕ್ ಸಂಶೋಧನೆ ಕೇಂದ್ರ ಬೆಂಗಳೂರಿನಲ್ಲಿದೆ. ಮೋದಿ ಅವರು ನ್ಯಾನೋ ಯೂರಿಯಾವನ್ನು ರೈತರಿಗೆ ಪರಿಚಯಿಸಿದ್ದಾರೆ. ಸಂಶೋಧನೆಯಿಂದ ಜನರ ಬದುಕನ್ನು ಸುಧಾರಿಸುವುದು ಪ್ರಧಾನಿಯ ಕನಸ್ಸಾಗಿದೆ. ಕೃಷಿ, ಜೀವ ವಿಜ್ಞಾನ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಸಂಶೋಧನೆ ನಡೆಸಲು ಸರ್ಕಾರ ಸಹಾಯ ಮಾಡುತ್ತದೆ ಎಂದರು.
ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಇಂಡಿಯಾ ನ್ಯಾನೋ ಟ್ವೆಂಟಿ-2022 ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
— CM of Karnataka (@CMofKarnataka) March 7, 2022
ಸಚಿವರಾದ @drashwathcn ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್, ಕೇಂದ್ರ ಸಚಿವರಾದ @Rajeev_GoI, ಹಿರಿಯ ಅಧಿಕಾರಿಗಳು ಹಾಗೂವಿಜ್ಞಾನಿಗಳು ಉಪಸ್ಥಿತರಿದ್ದರು. pic.twitter.com/MmOy2NAFX3
ನ್ಯಾನೋ ಟೆಕ್ನಾಲಜಿ ಮುಂದಿನ ಪ್ಯೂಚರ್ ಸಂಶೋಧನೆ, ಆವಿಷ್ಕಾರಕ್ಕೆ ಕರ್ನಾಟಕವೂ ಮುಂದಿದೆ. ನ್ಯಾನೋ ತಂತ್ರಜ್ಞಾನ ನಿರಂತರ ಕಲಿಕೆಯ ಭಾಗವಾಗಿದ್ದು, ಸಂಶೋಧನಾ ಕೇಂದ್ರ, ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಬೇಕು. ನ್ಯಾನೋ ಮೇಳದಲ್ಲಿ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.