ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ಯುಎಪಿಎ ಅಡಿ ಕೇಸ್ ದಾಖಲು
ಬಜರಂಗದಳ ಕಾರ್ಯಕರ್ತ ಹರ್ಷ(28) ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳ ವಿರುದ್ಧ 1967 ರ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯ...
Published: 07th March 2022 08:26 PM | Last Updated: 07th March 2022 08:26 PM | A+A A-

ಹತ್ಯೆಗೀಡಾದ ಹರ್ಷ
ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ(28) ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳ ವಿರುದ್ಧ 1967 ರ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯ ಕೆಲವು ಸೆಕ್ಷನ್ಗಳನ್ನು ಹಾಕಿದ್ದಾರೆ.
ಇದೇ ವೇಳೆ ಕಳೆದ 11 ದಿನಗಳಿಂದ ಪೊಲೀಸ್ ವಶದದಲ್ಲಿದ್ದ ಆರೋಪಿಗಳನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ: ರೂ.25 ಲಕ್ಷ ಪರಿಹಾರ ವಿತರಣೆ
ಪ್ರಮುಖ ಆರೋಪಿ ಬುದ್ಧನಗರ ನಿವಾಸಿ ಮಹಮ್ಮದ್ ಖಾಸಿಫ್ (30) ಸೇರಿದಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೈಯದ್ ನದೀಮ್, ರಿಹಾನ್ ಷರೀಫ್, ಆಸಿಫ್ ಉಲ್ಲಾ ಖಾನ್, ಅಬ್ದುಲ್ ಅಫ್ನಾನ್, ನಿಹಾನ್, ಫರಾಜ್ ಪಾಷಾ, ಅಬ್ದುಲ್ ಖಾದರ್ ಜಿಲಾನ್, ಅಬ್ದುಲ್ ರೋಷನ್ ಮತ್ತು ಜಾಫರ್ ಸಾದಿಕ್ ಪ್ರಕರಣದ ಇತರ ಆರೋಪಿಗಳು.
ಫೆಬ್ರವರಿ 20 ರಂದು ಎನ್ಟಿ ರಸ್ತೆಯ ಕಾಮತ್ ಪೆಟ್ರೋಲ್ ಪಂಪ್ ಬಳಿ ಹರ್ಷ ಅವರನ್ನು ಹತ್ಯೆ ಮಾಡಲಾಗಿತ್ತು. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಅಧಿಕಾರಿಗಳು ನಗರದಾದ್ಯಂತ ಒಂದು ವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು.