ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಬಿಂಬಿಸುವ ಮೊದಲ ಮೆಟ್ರೋ ರೈಲಿಗೆ ಚಾಲನೆ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್ಸಿಎಲ್) ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಮೆಟ್ರೋ ರೈಲಿನ ಎಲ್ಲಾ ಬೋಗಿಗಳ ಮೇಲೆ ಅಮೃತ ಮಹೋತ್ಸವ ಹಾಗೂ ‘ಆತ್ಮನಿರ್ಭರ ಭಾರತ’...
Published: 11th March 2022 06:08 PM | Last Updated: 11th March 2022 06:08 PM | A+A A-

ಅಮೃತ್ ಮಹೋತ್ಸವ ರೈಲಿಗೆ ಚಾಲನೆ
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್ಸಿಎಲ್) ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಮೆಟ್ರೋ ರೈಲಿನ ಎಲ್ಲಾ ಬೋಗಿಗಳ ಮೇಲೆ ಅಮೃತ ಮಹೋತ್ಸವ ಹಾಗೂ ‘ಆತ್ಮನಿರ್ಭರ ಭಾರತ’ ಚಿನ್ಹೆ ಅಳವಡಿಸಿದ ಮೊದಲ ರೈಲಿಗೆ ಶುಕ್ರವಾರ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ಅಮೃತ ಮಹೋತ್ಸವ ಮೆಟ್ರೋ ರೈಲಿಗೆ ಇಂದು ಬೆಳಗ್ಗೆ ಹಸಿರು ನಿಶಾನೆ ತೋರಿಸಿದರು.
ಇದನ್ನು ಓದಿ: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರಂ 3 ಮಾತ್ರ ಕಾರ್ಯನಿರ್ವಹಣೆ
ಆಜಾದಿ ಕಾ ಅಮೃತ್ ಮಹೋತ್ಸವ(AKAM)ನ ಉತ್ಸಾಹವನ್ನು ಹೆಚ್ಚಿಸಲು, ಮೆಟ್ರೋ ರೈಲಿನ ಆರು ಕೋಚ್ಗಳ ಹೊರಭಾಗವನ್ನು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಂಸ್ಕೃತಿಯ ಇತಿಹಾಸವನ್ನು ಎತ್ತಿ ತೋರಿಸುವ ಛಾಯಾಚಿತ್ರಗಳು ಮತ್ತು ಘೋಷಣೆಗಳಿಂದ ಅಲಂಕರಿಸಲಾಗಿದೆ.
ಪರ್ಪಲ್ ಲೈನ್ ಮತ್ತು ಗ್ರೀನ್ ಲೈನ್ ಎರಡರಲ್ಲೂ ಕಾರ್ಯನಿರ್ವಹಿಸುವ ಇನ್ನೂ ಆರು ರೈಲುಗಳನ್ನು ಒಂದು ತಿಂಗಳೊಳಗೆ ಇದೇ ರೀತಿ ಅಲಂಕರಿಸಲಾಗುವುದು. ಆದರೆ ರೈಲುಗಳ ಅರ್ಧ ಭಾಗವನ್ನು ಮಾತ್ರ ಅಮೃತ ಮಹೋತ್ಸವ ಒಳಗೊಂಡಿರುತ್ತದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣಿಸುವಾಗ ಬೃಹತ್ ಗಾಜಿನ ಕಿಟಕಿಯಿಂದ ಹೊರಗೆ ನೋಡುವ ಸಂತೋಷಕ್ಕೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ ಎಂದು ಹಿರಿಯ ಮೆಟ್ರೋ ಅಧಿಕಾರಿ ಒತ್ತಿ ಹೇಳಿದರು.
"ರೈಲಿನ ಎಲ್ಲಾ ಆರು ಕೋಚ್ಗಳಲ್ಲಿನ ಗಾಜಿನ ಕಿಟಕಿಗಳಿಗೆ ಪಾರದರ್ಶಕ ಪೋಸ್ಟರ್ ಗಳನ್ನು ಅಳವಡಿಸಲಾಗಿದೆ. ಇದು ಪ್ರಯಾಣಿಕರಿಗೆ ಹೊರಗಿನ ನೋಟವನ್ನು ಸಂಪೂರ್ಣವಾಗಿ ಆನಂದಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವ ಲೋಗೋ, ಏಕತೆಯ ಪ್ರತಿಮೆ, ಲಸಿಕೆಗಳು, ಇಸ್ರೋದ ರಾಕೆಟ್ಗಳು ಮತ್ತು ಕೃಷಿಯನ್ನು ಪ್ರದರ್ಶಿಸುವ ಚಿತ್ರಗಳನ್ನು ರೈಲಿನ ಮೇಲೆ ಹೈಲೈಟ್ ಮಾಡಲಾಗಿದೆ. ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್ಗಾಗಿ ಇತ್ತೀಚೆಗೆ ರೈಲುಗಳಲ್ಲಿ ಇದೇ ರೀತಿಯ ಕೆಲಸ ನಿರ್ವಹಿಸಿದ ಗುತ್ತಿಗೆದಾರನಿಗೆ ಈ ಕೆಲಸವನ್ನು ವಹಿಸಲಾಗಿದೆ.
.@MDNammaMetro Anjum pewez flagged Nammametro train wrapped with AKAM graphics and logo at mejestic metro station @santwana99 @srivasrbmrccoi1 @Lolita_TNIE @XpressBengaluru @KannadaPrabha @NewIndianXpress pic.twitter.com/xLql5PFjm7
— Nagaraja Gadekal (@gadekal2020) March 11, 2022